ಚಾಲಕನೇ ಇಲ್ಲದೆ 110 ಕಿ.ಮೀ. ವೇಗದಲ್ಲಿ ಚಲಿಸಿದ ರೈಲು, ಏನಾಯ್ತು ನೋಡಿ

ಸಿಡ್ನಿ, ನವೆಂಬರ್ 7: ಹೀಗೂ ಆಗುತ್ತೆ ನೋಡಿ. ಆದರೆ ನೀವು ನಂಬಬೇಕು, ಅಷ್ಟೇ. ಕಬ್ಬಿಣದ ಅದಿರು ಇದ್ದ ರೈಲೊಂದು ಚಾಲಕನೇ ಇಲ್ಲದ ಹಾಗೆ ಒಂದು ಗಂಟೆಗಳ ಕಾಲ ಚಲಿಸಿದೆ. ಈ ಘಟನೆ ಆಸ್ಟ್ರೇಲಿಯಾದಲ್ಲಿ ಆಗಿದೆ. ಒಂದು ಹಂತ ದಾಟಿದ ನಂತರ ಹಳಿ ತಪ್ಪಿ, ಅಪಘಾತವಾಗಿದೆ. ಆದರೆ ಯಾರಿಗೂ ಏನೂ ಅನಾಹುತ ಆಗಿಲ್ಲ.

ತಮ್ಮ ಕ್ಯಾಬಿನ್ ನಿಂದ ಇಳಿದು, ಪರಿಶೀಲನೆ ಮಾಡಲು ಚಾಲಕರು ಮುಂದಾಗಿದ್ದಾರೆ. ಆ ವೇಳೆಗೆ ಗಂಟೆಗೆ ನೂರಾಹತ್ತು ಕಿ.ಮೀ. ವೇಗದಲ್ಲಿ ಈ ರೈಲು ಪ್ರಯಾಣವನ್ನು ಆರಂಭ ಮಾಡಿಯೇ ಬಿಟ್ಟಿದೆ. ಈ ರೈಲು ಗಣಿಗಾರಿಕೆ ಕಂಪನಿಯಾದ ಬಿಎಚ್ ಪಿಗೆ ಸೇರಿದೆ. ಅದರ ಬಳಿ ನಾಲ್ಕು ಲೋಕೊಮೋಟಿವ್ ರೈಲುಗಳಿವೆ.

ಪಶ್ಚಿಮ ಆಸ್ಟ್ರೇಲಿಯಾದ ಪಿಲ್ಬರ ತಲುಪುವ ಮುನ್ನ ರೈಲು ಹಳಿ ತಪ್ಪುವಂತೆ ಮಾಡಿ, ದೊಡ್ಡ ಮಟ್ಟದ ಹಾನಿ ಯಾವುದು ಸಂಭವಿಸದಂತೆ ಎಚ್ಚರಿಕೆ ವಹಿಸಲಾಗಿದೆ. ಸಾವಿರದೈನೂರು ಮೀಟರ್ ನಷ್ಟು ಹಳಿಗೆ ಹಾನಿಯಾಗಿದೆ. ಬೋಗಿಗಳಲ್ಲಿ ಕಂಪನಿಯ ಸರಕುಗಳಿದ್ದವು. ಹಳಿ ತಪ್ಪಿದ್ದರಿಂದ ಕೆಲ ಮಟ್ಟಿಗೆ ಹಾನಿ ಆಗಿದೆ. ಸದ್ಯಕ್ಕೆ ಹಳಿ ಸರಿಪಡಿಸಲು ನೂರಾ ಮೂವತ್ತು ಮಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ.

Bizarre News: Train travels 90 km without driver for an hour in Australia

ಮತ್ತೆ ಭಾಗಶಃ ರೈಲುಗಳ ಕಾರ್ಯಾಚರಣೆ ಆರಂಭಕ್ಕೆ ಒಂದು ವಾರ ಸಮಯ ಬೇಕಾಗಬಹುದು ಎಂದು ಕಂಪನಿ ಮೂಲಗಳು ತಿಳಿಸಿವೆ. ಸದ್ಯಕ್ಕೆ ಗ್ರಾಹಕರ ಜತೆಗೆ ಮಾಡಿಕೊಂಡಿರುವ ಒಪ್ಪಂದಗಳು ಸಮಯಕ್ಕೆ ಸರಿಯಾಗಿ ಪೂರೈಸಲು ಕಷ್ಟ ಆಗಬಹುದು. ಆ ಬಗ್ಗೆ ಮಾಹಿತಿ ಹಂಚಿಕೊಳ್ಳಲಾಗಿದೆ ಎಂದು ತಿಳಿಸಲಾಗಿದೆ.

ಚಾಲಕನೇ ಇಲ್ಲದೆ ರೈಲು ಚಲಿಸುವುದಕ್ಕೆ ಕಾರಣ ಏನು ಎಂಬುದು ತಿಳಿಯಲು ತನಿಖೆ ಕೈಗೊಳ್ಳಲಾಗಿದೆ. ಇನ್ನು ಸುರಕ್ಷಿತ ಕಾರ್ಯಾಚರಣೆಗಾಗಿ ಹೇಗೆ ಕೆಲಸ ಮಾಡಬಹುದು ಎಂಬ ವಿಚಾರವಾಗಿ ಕಂಪನಿ ಇನ್ನಷ್ಟು ಶ್ರಮ ಹಾಕುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+