• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸಾಮಾಜಿಕ ಅಂತರದ ನಡುವೆಯೂ ಸಂಪರ್ಕದಲ್ಲಿದ್ದು ಇತರರಿಗೆ ಸಹಾಯ ಮಾಡುವುದು ಹೇಗೆ?

ಕೊರೊನಾ ವೈರಸ್ ಹರಡುವ ಆತಂಕದಿಂದಾಗಿ ಭಾರತ ಸೇರಿದಂತೆ ಅನೇಕ ದೇಶಗಳು ಇದೀಗ ಲಾಕ್‌ಡೌನ್ ಆಗಿವೆ. ಹೀಗಾಗಿ ನಾವು ಮನೆಯಲ್ಲಿಯೇ ಇರುವುದು ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಅಗತ್ಯವಾಗಿದೆ. ಆದರೆ ಅನೇಕ ಕಂಪನಿಗಳು ಜನರನ್ನು ವಾಸ್ತವಿಕವಾಗಿ ಸಂಪರ್ಕದಲ್ಲಿಡಲು ಪ್ರಯತ್ನಿಸುತ್ತಿವೆ, ಸದ್ಯ ಸಂವಹನವೊಂದೇ ಪ್ರಮುಖ ಸಾಧನವಾಗಿದೆ. ಲಾಕ್‌ಡೌನ್‌ ಪರಿಸ್ಥಿತಿಯನ್ನು ನಿಭಾಯಿಸುವುದು ನಿಮಗೆ ಕಷ್ಟವಾಗಿದ್ದರೆ, ಇಲ್ಲಿ ನೀವು ಅದನ್ನು ನಿಭಾಯಿಸಬಹುದು ಮತ್ತು ಲಾಕ್‌ಡೌನ್ ಅವಧಿಯನ್ನು ಕಳೆಯಬಹುದು.

   ಮಾನವೀಯತೆ ಇನ್ನು ಜೀವಂತವಾಗಿದೆ ಎಂದು ಸಾಬೀತುಪಡಿಸಿದ ಯುವಕ

   ಸಂಪರ್ಕದಲ್ಲಿರಿ ಮತ್ತು ಸುರಕ್ಷಿತವಾಗಿರಿ

   ಈ ಅವಧಿಯಲ್ಲಿ ಎಲ್ಲರು ಮನೆಯಲ್ಲಿಯೇ ಇರುವುದರಿಂದ ಆತ್ಮೀಯರೊಂದಿಗೆ ಸಂವಹನ ನಡೆಸುವುದು ಮುಖ್ಯವಾಗಿರುತ್ತದೆ. ಇದಕ್ಕಾಗಿ ಏರ್‌ಟೆಲ್ ಟೆಲಿಕಾಂ 'ಏರ್‌ಟೆಲ್ ಥ್ಯಾಂಕ್ಸ್ ಆಪ್‌' ಮೂಲಕ ಮೊಬೈಲ್ ರೀಚಾರ್ಜ್ ಮಾಡಿಕೊಳ್ಳುವ ಅವಕಾಶ ನೀಡಿದೆ. ಹೀಗಾಗಿ ಗ್ರಾಹಕರು ಕಾಲಿಂಗ್ ಅವಧಿ ಮುಗಿದಿದ್ದರೆ, ಡೇಟಾ ಪ್ಯಾಕ್‌ ಮುಗಿದಿದ್ದರೆ, ರೀಚಾರ್ಜ್ ಮಾಡಿಸಲು ಮನೆಯಿಂದ ಹೊರಗಡೆ ಹೋಗುವ ಅಗತ್ಯ ಇಲ್ಲ.

   ಹಾಗೆಯೇ ನಿಮ್ಮ ಸುತ್ತಲೂ ಸಾಕಷ್ಟು ಜನರಿಗೆ ಆನ್‌ಲೈನ್‌ನಲ್ಲಿ ರೀಚಾರ್ಜ್ ಮಾಡುವ ಬಗ್ಗೆ ತಿಳಿದಿರುವುದಿಲ್ಲ. ಅಂತವರ ನೆರವಿಗೆ ಮುಂದಾಗಿ. ನಿಮ್ಮ ಮನೆಯವರೇ ಆಗಿರಬಹುದು, ನಿಮ್ಮ ಕಟ್ಟಡ ಸಿಬ್ಬಂದಿ ಆಗಿರಬಹುದು ಅಥವಾ ವಯಸ್ಸಾದ ನೆರೆಹೊರೆಯವರಾಗಿರಬಹುದು. ಇವರುಗಳು ರೀಚಾರ್ಜ್ ಮಾಡಿಸಲು ಅಂಗಡಿಗೆ ಹೋಗುವವರಿದ್ದಾರೆ. ಅವರಿಗೆ ಏರ್‌ಟೆಲ್ ಥ್ಯಾಂಕ್ಸ್ ಆಪ್‌ನಲ್ಲಿ ರೀಚಾರ್ಜ್ ಮಾಡುವುದನ್ನು ಕಲಿಸುವ ಮೂಲಕ ಅಥವಾ ಅವರ ಫೋನ್‌ಗಳನ್ನು ನೀವೇ ರೀಚಾರ್ಜ್ ಮಾಡುವ ಮೂಲಕ ನೀವು ಈ ಜನರಿಗೆ ಸಹಾಯ ಮಾಡಬಹುದು.

   ಹಾಗೆಯೇ ಈ ಅಪ್ಲಿಕೇಶನ್ನಲ್ಲಿ ಯಾವುದೇ ಮೊಬೈಲ್‌ ಸಂಖ್ಯೆ, ಡಿಟಿಎಚ್ ಸಂಪರ್ಕ ಮತ್ತು ಡೇಟಾ ಕಾರ್ಡ್ ಅನ್ನು ರೀಚಾರ್ಜ್ ಮಾಡಬಹುದು. ಇದರೊಂದಿಗೆ ಈ ಅಪ್ಲಿಕೇಷನ್‌ನಲ್ಲಿ ಯುಪಿಐ ಅನ್ನು ಸಕ್ರಿಯಗೊಳಿಸಲಾಗಿದೆ. ಹೀಗಾಗಿ ನೀವು ಯುಟಿಲಿಟಿ ಬಿಲ್‌ಗಳು, ವಿಮಾ ಪ್ರೀಮಿಯಂ ಮತ್ತು ನಿಮ್ಮ ಮನೆಯಿಂದಲೇ ಯಾರಿಗಾದರೂ ಹಣವನ್ನು ವರ್ಗಾಯಿಸಬಹುದು. ಈ ಎಲ್ಲಾ ವಹಿವಾಟುಗಳನ್ನು ಸುರಕ್ಷಿತವಾಗಿ ಮಾಡಬಹುದು.

   ಮನೆಯಲ್ಲಿರಿ-ಅಪ್‌ಡೇಟೆಡ್ ಇರಿ

   ಕೊರೊನಾ ಸಾಂಕ್ರಾಮಿಕ ರೋಗದ ವಿರುದ್ಧ ತಿಳಿವಳಿಕೆಯೇ ಇದೀಗ ನಮ್ಮ ಅತ್ಯುತ್ತಮ ಅಸ್ತ್ರವಾಗಿದೆ. ಕೊರೊನಾ ಹೇಗೆ ಹರಡುತ್ತದೆ, ಅದರ ಲಕ್ಷಣಗಳು ಯಾವುವು ಮತ್ತು ಅದನ್ನು ಹೇಗೆ ತಪ್ಪಿಸಬೇಕು ಎಂಬುದು ಹೆಚ್ಚಿನ ಜನರಿಗೆ ತಿಳಿದಿದೆ. ಅದನ್ನು ನಿಯಂತ್ರಿಸುವಲ್ಲಿ ನಮ್ಮಲ್ಲಿಯೇ ಉತ್ತಮವಾದ ಅವಕಾಶಗಳಿವೆ. ಆದ್ದರಿಂದ, ಅಪ್‌ಡೇಟೆಡ್ ಮಾಹಿತಿಗಳನ್ನು ತಿಳಿಯುತ್ತಿರಿ ಮತ್ತು ಸಾಧ್ಯವಾದಷ್ಟು ಜನರಿಗೆ ಇದರ ಬಗ್ಗೆ ತಿಳಿಸಿ. ಇನ್ನು ವದಂತಿಗಳು ಅಥವಾ ವಿಶ್ವಾಸಾರ್ಹ ಮೂಲದಿಂದ ಪರಿಶೀಲಿಸದ ಯಾವುದೇ ಮಾಹಿತಿಯನ್ನು ನಂಬಬೇಡಿ ಮತ್ತು ತಪ್ಪು ಮಾಹಿತಿ ಹರಡದಂತೆ ಇತರರಿಗೂ ತಿಳಿಸಿ. WHO ಮತ್ತು ಇತರ ಸರ್ಕಾರಿ ಆರೋಗ್ಯ ವೆಬ್‌ಸೈಟ್‌ಗಳಂತಹ ವಿಶ್ವಾಸಾರ್ಹ ಮೂಲಗಳ ಮಾಹಿತಿಯನ್ನು ಅನುಸರಿಸುತ್ತಿರಿ.

   ಕೊರೊನಾ ಅಪಾಯ ಮಟ್ಟ ತಿಳಿಯಿರಿ

   ಈ ಬಗ್ಗೆ ಜನಸಾಮಾನ್ಯರಿಗೆ ಜಾಗೃತಿ ಮೂಡಿಸುವ ಸಲುವಾಗಿ, ಏರ್‌ಟೆಲ್ ಅಪೊಲೊ 24/7 ರೊಂದಿಗೆ ಪಾಲುದಾರಿಕೆ ಮಾಡಿದ್ದು, ಕೊರೊನಾ ವೈರಸ್ ರಿಸ್ಕ್ ಸ್ಕ್ಯಾನ್‌ ಉಪಯುಕ್ತವಾಗಿಸಿದೆ.

   ಇದನ್ನು ನೀವು ಏರ್‌ಟೆಲ್ ಥ್ಯಾಂಕ್ಸ್ ಆಪ್‌ನಲ್ಲಿ ಆಕ್ಸೆಸ್ ಮಾಡಬಹುದಾಗಿದೆ. ಇಲ್ಲಿನ ಎಂಟು ಸರಳ ಪ್ರಶ್ನೆಗಳಿಗೆ ಉತ್ತರಿಸುವ ಮೂಲಕ ಕೊರೊನಾ ವೈರಸ್ ತಗಲುವ ಅಪಾಯದ ಬಗ್ಗೆ ತಿಳಿಯಬಹುದಾಗಿದೆ. ಈ ವ್ಯವಸ್ಥೆಯು AI- ಚಾಲಿತ ಬೋಟ್ ಆಧಾರಿತವಾಗಿದ್ದು, ಕಡಿಮೆ, ಮಧ್ಯಮ ಅಥವಾ ಹೆಚ್ಚಿನ ಮಾದರಿಯಲ್ಲಿ ಸೋಂಕು ತಗುಲುವ ಅಪಾಯಗಳ ಅವಕಾಶಗಳು ಎಷ್ಟಿದೆ ಎಂಬ ಬಗ್ಗೆ ಮಾಹಿತಿ ತಿಳಿಸುತ್ತದೆ. ಹಾಗೆಯೇ ಈ ವೈರಾಣು ತಗುಲದಂತೆ ನಿಮ್ಮನ್ನು ಹೇಗೆ ಸುರಕ್ಷಿತವಾಗಿರಿಸಿಕೊಳ್ಳಬೇಕು ಎಂಬುದರ ಕುರಿತು ಉಪಯುಕ್ತ ಸಲಹೆಗಳನ್ನು ನೀಡುತ್ತದೆ. ಈ ಸೌಲಭ್ಯ ಪ್ರಾರಂಭವಾದ 5 ದಿನಗಳಿಗಿಂತ ಕಡಿಮೆ ಅವಧಿಯಲ್ಲಿ, 30 ದೇಶಗಳಲ್ಲಿ 7.3 ದಶಲಕ್ಷಕ್ಕೂ ಹೆಚ್ಚು ಜನರು ಈಗಾಗಲೇ ತಮ್ಮ ಸುರಕ್ಷತೆಯನ್ನು ಪರಿಶೀಲಿಸಿಕೊಂಡಿದ್ದಾರೆ.

   ಈ ವೈರಾಣುವಿನಿಂದ ಸುರಕ್ಷಿತವಾಗಿರಲು ಕೆಲವು ವಾರಗಳು ಕಠಿಣ ಎನಿಸಲಿದೆ. ಆದರೆ ಲಾಕ್‌ಡೌನ್‌ ಅನ್ನು ಎಲ್ಲರೂ ಪಾಲಿಸಿದರೆಸ ಫಲಿತಾಂಶ ಉತ್ತಮವಾಗಿರಲಿದೆ. ಆದ್ದರಿಂದ, ಸಂಪರ್ಕದಲ್ಲಿರಿ, ಸುರಕ್ಷಿತವಾಗಿರಿ ಮತ್ತು ನಿಮ್ಮ ಮನೆಯೊಳಗಿನಿಂದಲೇ ನಿಮಗೆ ಸಾಧ್ಯವಾದಷ್ಟು ಇತರರಿಗೆ ಸಹಾಯ ಮಾಡಿ.

   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X