• search
  • Live TV
ಶ್ರೀನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಭಾರತದ ಗಡಿ ಕಾಯಲು ವೀರವನಿತೆಯರ ನಿಯೋಜನೆ

|

ಶ್ರೀನಗರ, ಆ.4: ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಅಧಿಕಾರ ನೀಡುವ ಸಂವಿಧಾನದ 370 ರದ್ದುಗೊಳಿಸಿ ಒಂದು ವರ್ಷವಾಗಿದೆ. ಕಣಿವೆ ಪ್ರದೇಶ, ಗಡಿಭಾಗದಲ್ಲಿ ಶಾಂತಿ ವಾತಾವರಣ ತರುವಲ್ಲಿ ಮೋದಿ ಸರ್ಕಾರ ಯಶಸ್ಸು ಕಂಡಿದೆ. ಈ ನಡುವೆ ಭರವಸೆ ನೀಡಿದಂತೆ ಭಾರತದ ಗಡಿ ಕಾಯಲು ವೀರವನಿತೆಯರ ನಿಯೋಜನೆ ಮಾಡಲಾಗಿದೆ.

ಅಸ್ಸಾಂ ರೈಫಲ್ಸ್ ಯೋಧ ಪಡೆಯ ಮಹಿಳಾ ಗಡಿ ಭದ್ರತಾ ಸೈನಿಕರು ಕಾಶ್ಮೀರದಲ್ಲಿ ಗಡಿ ಕಾಯುತ್ತಿದ್ದಾರೆ. ಅಸ್ಸಾಂ ರೈಫಲ್ಸ್ ಈ ಕುರಿತಂತೆ ಅಧಿಕೃತವಾಗಿ ಟ್ವೀಟ್ ಮಾಡಿದೆ.

ಇದೇ ಮೊದಲ ಬಾರಿಗೆ ಕಾಶ್ಮೀರದಲ್ಲಿ ಮಹಿಳಾ ಯೋಧರು ಗಡಿ ಭಾಗದಲ್ಲಿ ಕರ್ತವ್ಯ ನಿಭಾಯಿಸ ತೊಡಗಿದ್ದಾರೆ. ಸ್ಥಳೀಯರು ಈ ಕ್ರಮವನ್ನು ಸ್ವಾಗತಿಸಿದ್ದಾರೆ. ಅಸ್ಸಾಂ ರೈಫಲ್ಸ್ ಮಹಿಳಾ ಯೋಧರ ವೃತ್ತಿಪರತೆಗೆ ಸ್ಥಳೀಯರು ಮಾರು ಹೋಗಿದ್ದಾರೆ ಎಂದು ಅಸ್ಸಾಂ ರೈಫಲ್ಸ್ ಟ್ವೀಟ್ ಮಾಡಿದೆ.

Woman Soldiers Deployed For First Time In Kashmir: Assam Rifles

ಭಾರತೀಯ ಸೇನಾ ಪಡೆಯಲ್ಲಿ ಅಸ್ಸಾಂ ರೈಫಲ್ಸ್ ಅತ್ಯಂತ ಹಳೆಯ ಪ್ಯಾರಾಮಿಲಿಟರಿ ಪಡೆಯಾಗಿದೆ. ಸಮುದ್ರಮಟ್ಟದಿಂದ 10 ಅಡಿಯಲ್ಲಿರುವ ಈ ಪ್ರದೇಶವು ಪಾಕ್ ಆಕ್ರಮಿತ ಕಾಶ್ಮೀರ, ಗಡಿ ನಿಯಂತ್ರಣ ರೇಖೆ ಸಮೀಪದಲ್ಲಿದೆ. ಉಗ್ರರ ನುಸುಳುವಿಕೆಯಲ್ಲದೆ, ನಕಲಿ ನೋಟು ಜಾಲ, ಡ್ರಗ್ಸ್ ಸ್ಮಗಲಿಂಗ್ ಎಲ್ಲದರ ಮೇಲೂ ನಿಗಾ ವಹಿಸಲಿದ್ದಾರೆ. ಸಾಧನಾ ಪಾಸ್ ವ್ಯಾಪ್ತಿಯ ತಂಗ್ಧಾರ್ ಹಾಗೂ ತಿಥ್ ವಾಲ್ ಪ್ರದೇಶದಲ್ಲಿ ಸುಮಾರು 40ಕ್ಕೂ ಅಧಿಕ ಹಳ್ಳಿಗಳಿವೆ.

English summary
The Assam Rifles said that for the first time in Kashmir, Rifle Women have been deployed on duty.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X