ಪಾಕ್ ಸೇನೆ ಬಳಸುವ ಅಮೆರಿಕ ನಿರ್ಮಿತ ರೈಫಲ್ ಉಗ್ರರಿಂದ ವಶಕ್ಕೆ

ಪಾಕಿಸ್ತಾನದ ಸೇನೆ ಬಳಸುವ ಅಮೆರಿಕ ನಿರ್ಮಿತ M4 ರೈಫಲ್ ಅನ್ನು ಜಮ್ಮು-ಕಾಶ್ಮೀರ ಬುಡ್ಗಾಂನಲ್ಲಿ ಶುಕ್ರವಾರ ಇಬ್ಬರು ಜೈಷ್-ಇ-ಮೊಹ್ಮದ್ ಉಗ್ರರಿಂದ ವಶಪಡಿಸಿಕೊಳ್ಳಲಾಗಿದೆ ಎಂದು ಹಿರಿಯ ಭದ್ರತಾ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಜೈಷೆಯ ಇಬ್ಬರು ಪ್ರಮುಖ ಸದಸ್ಯರು, ಶಂಕಿತ ಪಾಕ್ ನಾಗರಿಕರನ್ನು ಗುಂಡಿನ ಚಕಮಕಿ ವೇಳೆ ಕೊಲ್ಲಲಾಗಿದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಕಳೆದ ಇಪ್ಪತ್ನಾಲ್ಕು ಗಂಟೆಯಲ್ಲಿ ಆರು ಉಗ್ರರನ್ನು ಕೊಲ್ಲಲಾಗಿದೆ. ಏಳನೇ ವ್ಯಕ್ತಿಯನ್ನು ಜಮ್ಮು-ಕಾಶ್ಮೀರದಲ್ಲಿ ಬಂಧಿಸಲಾಗಿದೆ. ಪುಲ್ವಾಮಾ ಉಗ್ರ ದಾಳಿಯ ನಂತರ ಮೂವತ್ತು ಉಗ್ರಗಾಮಿಗಳನ್ನು ಕೊಲ್ಲಲಾಗಿದೆ. ಆ ಪೈಕಿ ಬಹುತೇಕರು ಜೈಷ್-ಇ-ಮೊಹ್ಮದ್ ಉಗ್ರ ಸಂಘಟನೆ ಜತೆಗೆ ನಂಟು ಇರುವಂಥವರು.

ಇದೀಗ ಅಮೆರಿಕ ನಿರ್ಮಿತ ರೈಫಲ್ ಸಿಕ್ಕಿದ ಮೇಲೆ ಉಗ್ರಗಾಮಿಗಳು ಹಾಗೂ ಪಾಕಿಸ್ತಾನದ ಸೇನೆ ಮತ್ತು ಅದರ ವಿಶೇಷ ತಂಡದ ಮಧ್ಯೆ ನಂಟಿರುವುದು ಬಯಲಾಗಿದೆ ಎಂದು ಭಾರತೀಯ ಸೇನೆ ಹಿರಿಯ ಅಧಿಕಾರಿಗಳು ಹೇಳಿದ್ದಾರೆ. ಕಳೆದ ಆರು ತಿಂಗಳಲ್ಲಿ ಕಾಶ್ಮೀರ ಕಣಿವೆಯಲ್ಲಿ ವಶಪಡಿಸಿಕೊಳ್ಳಲಾದ ಎರಡನೇ M4 ಕಾರ್ಬೈನ್ ಇದು.

US made rifle with top Jaish terrorists killed in Jammu, points to Pakistan nexus

ಕಳೆದ ವರ್ಷ ಇಂಥದ್ದೇ ಅಮೆರಿಕ ರೈಫಲ್ ಜೈಷ್ ಇ ಮೊಹ್ಮದ್ ಮುಖ್ಯಸ್ಥ ಮಸೂದ್ ಅಜರ್ ಸಂಬಂಧಿ ಉಸ್ಮಾನ್ ಹೈದರ್ ಬಳಿ ಭದ್ರತಾ ಸಿಬ್ಬಂದಿಗೆ ದೊರೆತಿತ್ತು. ಮೊದಲ ಬಾರಿಗೆ ಕಾಶ್ಮೀರದಲ್ಲಿ M4 ಕಾರ್ಬೈನ್ ಉಗ್ರಗಾಮಿಗಳ ಬಳಿ ದೊರೆತಿದ್ದು ಎರಡು ವರ್ಷಗಳ ಕೆಳಗೆ. ಅದು ಕೂಡ ಮಸೂದ್ ಅಜರ್ ನ ಮತ್ತೊಬ್ಬ ಸೋದರ ಸಂಬಧಿ ತಲ್ಹಾ ರಶೀದ್ ಬಳಿ ದೊರೆತಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+