ಎನ್‌ಕೌಂಟರ್‌: ಲಷ್ಕರ್ ಕಮಾಂಡರ್ ಸಜ್ಜದ್‌ನನ್ನು ಹತ್ಯೆಗೈದ ಯೋಧರು

ಶ್ರೀನಗರ, ಆಗಸ್ಟ್ 17: ಜಮ್ಮು ಕಾಶ್ಮೀರದಲ್ಲಿ ಬರಾಮುಲ್ಲಾದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಲಷ್ಕರ್ ಉಗ್ರ ಸಂಘಟನೆ ಕಮಾಂಡರ್ ಸಜ್ಜದ್‌ನನ್ನು ಯೋಧರು ಹತ್ಯೆ ಮಾಡಿದ್ದಾರೆ.

ಇಂದಷ್ಟೇ ಬರಾಮುಲ್ಲಾದಲ್ಲಿ ಇಬ್ಬರು ಸಿಆರ್‌ಪಿಎಫ್ ಸಿಬ್ಬಂದಿ, ಓರ್ವ ಪೊಲೀಸ್ ಅಧಿಕಾರಿಯನ್ನು ಉಗ್ರರು ಹತ್ಯೆ ಮಾಡಿದ್ದರು.

ಸಜ್ಜದ್​ ಹಾಗೂ ಇನ್ನೋರ್ವ ಉಗ್ರನನ್ನು ಹತ್ಯೆ ಮಾಡಲಾಗಿದ್ದು, ಮೃತರ ಬಳಿ ಇದ್ದ ಒಂದು ಎಕೆ-47 ರೈಫಲ್​ ಮತ್ತು ಎರಡು ಪಿಸ್ತೂಲ್​ಗಳನ್ನು ವಶಪಡಿಸಿಕೊಳ್ಳಲಾಗಿದೆ.

Top LeT Commander Sajjad Killed In Baramulla Encounter

ಇನ್ನೋರ್ವ ಉಗ್ರನಿಗಾಗಿ ಹುಡುಕಾಟ ನಡೆದಿದೆ ಎಂದು ಸಿಆರ್​ಪಿಎಫ್ ತಿಳಿಸಿದೆ. ಬಾರಾಮುಲ್ಲಾ ಜಿಲ್ಲೆಯ ಕ್ರೀರಿ ಪ್ರದೇಶದಲ್ಲಿ ಇಂದು ಬೆಳಗ್ಗೆಯಿಂದಲೂ ಭದ್ರತಾ ಪಡೆಗಳು ಮತ್ತು ಉಗ್ರರ ನಡುವೆ ಎನ್​ಕೌಂಟರ್​ ನಡೆಯುತ್ತಿದೆ. ಉಗ್ರರ ದಾಳಿಗೆ ಸಿಆರ್​ಪಿಎಫ್​ನ ಇಬ್ಬರು ಯೋಧರು ಹಾಗೂ ಓರ್ವ ಪೊಲೀಸ್​ ಹುತಾತ್ಮರಾಗಿದ್ದರು.

ಸೇನಾ ಮೂಲಗಳ ಪ್ರಕಾರ ಎನ್ ಕೌಂಟರ್ ನಲ್ಲಿ ಭಾರತೀಯ ಯೋಧರು ಲಷ್ಕರ್​ ಎ ತೊಯ್ಬಾದ ಉನ್ನತ ಕಮಾಂಡರ್​ ಸಜ್ಜಾದ್​​ನನ್ನು ಕೊಂದು ಹಾಕಿದ್ದಾರೆ.

ಈ ಬಗ್ಗೆ ಜಮ್ಮುಕಾಶ್ಮೀರದ ಐಜಿ ವಿಜಯ್​ಕುಮಾರ್​ ಅವರು ಮಾಹಿತಿ ನೀಡಿದ್ದು, ಲಷ್ಕರ್​ ಎ ತೊಯ್ಬಾದ ಸಜ್ಜಾದ್​ ಅಲಿಯಾಸ್​ ಹೈದರ್​​ನನ್ನು ಹತ್ಯೆ ಮಾಡಲಾಗಿದೆ. ಇದು ಭದ್ರತಾ ಪಡೆ ಮತ್ತು ಪೊಲೀಸರ ಮಹತ್ವದ ಸಾಧನೆ ಎಂದು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+