ಜಮ್ಮು-ಕಾಶ್ಮೀರ: ಉಗ್ರರ ದಾಳಿಯಲ್ಲಿ ಓರ್ವ ನಾಗರಿಕನಿಗೆ ಗಾಯ

ಶ್ರೀನಗರ, ಜೂನ್ 4: ಜಮ್ಮು ಕಶ್ಮೀರದ ಕುಲ್‌ಗಾವ್‌ನಲ್ಲಿ ನಡೆದ ಉಗ್ರರ ದಾಳಿಯಲ್ಲಿ ಓರ್ವನಿಗೆ ಗಂಭೀರ ಗಾಯವಾಗಿದೆ.

Recommended Video

      ನಮ್ಮ‌ ಪೊಲೀಸರ ಕೆಲಸದ‌ ಬಗ್ಗೆ ನಮ್ಮ ಇಂಡಿಯನ್ ಆರ್ಮಿ ಹೆಮ್ಮೆ ಪಟ್ಟು ಏನ್ ಹೇಳಿದೆ ನೋಡಿ | Oneindia Kannada

      ಕುಲ್‌ಗಾವ್ ಪ್ರದೇಶದ ಯರಿಪೂರಿ ಮಾರುಕಟ್ಟೆಯಲ್ಲಿ ಭಯೋತ್ಪಾದಕರು, ಪೊಲೀಸ್ ಸಿಬ್ಬಂದಿಯನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದ ಸಂದರ್ಭದಲ್ಲಿ ಓರ್ವ ನಾಗರಿಕರು ಸಾವನ್ನಪ್ಪಿದ್ದಾರೆ.

      ಉಗ್ರರ ದಾಳಿ ವೇಳೆ ಗಾಯಗೊಂಡಿದ್ದ ನಾಗರಿಕರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಭದ್ರತಾ ಪಡೆಗಳು ಈ ಪ್ರದೇಶವನ್ನು ಸುತ್ತುವರೆದು ಶೋಧಕಾರ್ಯ ಆರಂಭಿಸಿವೆ ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.

      Terrorists Attack Police Party In Kulgam

      ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತೀಯ ಸೇನೆ 13 ಉಗ್ರರನ್ನು ಸದೆಬಡಿದಿದ್ದರು. ರಜೌರಿ ಜಿಲ್ಲೆಯ ನೌಶೆರಾ ಸೆಕ್ಟರ್ ನಲ್ಲಿ ಭಾರೀ ಶಸ್ತ್ರಾಸ್ತ್ರಗಳೊಂದಿಗೆ ಗಡಿ ನುಸುಳಲು ಪ್ರಯತ್ನಿಸುತ್ತಿದ್ದ ಮೂವರು ಭಯೋತ್ಪಾದಕರನ್ನು ಭಾರತೀಯ ಯೋಧರು ಹತ್ಯೆ ಮಾಡಿದ್ದರು.

      ಮೆಂಧರ್-ಪೂಂಚ್ ಪ್ರದೇಶದ ಗಡಿ ನಿಯಂತ್ರಣ ರೇಖೆ(ಎಲ್ಒಸಿ) ಭಾರತೀಯ ಯೋಧರು 13 ಮಂದಿ ಭಯೋತ್ಪಾದಕರನ್ನು ಹೊಡೆದುರುಳಿಸಿದ್ದಾರೆ. ನಂತರ ಮೆಂಧರ್ ನಲ್ಲಿ 10 ಭಯೋತ್ಪಾದಕರನ್ನು ಸೇನೆ ಎನ್ ಕೌಂಟರ್ ಮಾಡಿ ಪರಾಕ್ರಮ ಮೆರೆದಿದ್ದು ಇದೇ ವೇಳೆ ಪೂಂಚ್ ಜಿಲ್ಲೆಯ ಗಡಿ ಭಾಗದ ಕೆಲ ಹಳ್ಳಿಗಳಲ್ಲಿ ಶೋಧ ಕಾರ್ಯ ಮುಂದುವರೆಸಿದೆ.

      ಇನ್ನೊಂದೆಡೆ ಭಾರತ ಹಾಗೂ ಚೀನಾ ನಡುವಿನ ಸಂಬಂಧ ಹಳಸಿ ಹೋಗಿದೆ. ಎರಡೂ ಸೇನೆಯು ಯುದ್ಧಕ್ಕಾಗಿ ಕಾದು ಕುಳಿತಿದೆ. ಚೀನಾ ಮಾತ್ರ ಕೇವಲ ಮಾತಿನಿಂದಲೇ ಸಮಸ್ಯೆಯನ್ನು ಬಗೆಹರಿಸಿಕೊಳ್ಳುತ್ತೇವೆ ಎಂದು ಹೇಳುತ್ತಿದ್ದರೂ ಕೂಡ ಶಸ್ತ್ರಾಸ್ತ್ರಗಳನ್ನು ಗಡಿಯತ್ತ ತರಿಸಿಕೊಂಡಿದೆ. ಇದಕ್ಕೆ ಭಾರತವು ನಾವು ಏನು ಕಡಿಮೆ ಇಲ್ಲ ಎಂಬಂತೆ ಶಸ್ತ್ರಾಸ್ತ್ರದೊಂದಿಗೆ ಯುದ್ಧಕ್ಕೆ ಸಜ್ಜುಗೊಂಡಿದ್ದಾರೆ.

      ಪಾಕ್‌ ಆಕ್ರಮಿತ ಕಾಶ್ಮೀರ(ಪಿಒಕೆ)ಯಲ್ಲಿ ಇರುವಂತಹ ಉಗ್ರರ ಶಿಬಿರಗಳು ಮತ್ತು 15 ಲಾಂಚ್‌ಪ್ಯಾಡ್‌ಗಳು ತುಂಬಿವೆ, ಯಾವುದೇ ಕ್ಷಣದಲ್ಲಿ ಬೇಕಾದರೂ ಉಗ್ರರು ವಿಧ್ವಂಸಕ ಕೃತ್ಯಗಳನ್ನು ನಡೆಸಲು ಮುಂದಾಗಬಹುದು ಎಂದು ಭಾರತೀಯ ಸೇನೆ ಎಚ್ಚರಿಸಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+