ಭಾರತದೊಂದಿಗೆ ಯುದ್ಧಕ್ಕೆ ಸಿದ್ಧ ಎಂಬ ಸೂಚನೆ ನೀಡಿದ ಪಾಕಿಸ್ತಾನ

ಶ್ರೀನಗರ, ಫೆಬ್ರವರಿ 22: ಪುಲ್ವಾಮಾ ದಾಳಿಯ ನಂತರ ಭಾರತ ತನ್ನ ಮೇಲೆ ಯುದ್ಧ ಸಾರಬಹುದು ಎಂಬ ಭೀತಿಯಲ್ಲಿರುವ ಪಾಕಿಸ್ತಾನ ಈಗಾಗಲೇ ಯುದ್ಧವನ್ನು ಎದುರಿಸಲು ತಯಾರಿ ನಡೆಸಿದೆ.

"ಭಾರತದೊಂದಿಗೆ ಯುದ್ಧವಾಗುವ ಸಂಭವವಿರುವುದರಿಂದ ಎಲ್ಲರೀತಿಯ ವೈದ್ಯಕೀಯ ನೆರವು ನೀಡುವಂತೆ" ಕ್ವೆಟ್ಟಾದಲ್ಲಿರುವ ಪಾಕಿಸ್ತಾನ ಸೇನಾ ನೆಲೆಯ ಕೇಂದ್ರದಿಂದ ಪಾಕ್ ನ ಜಿಲಾನಿ ಆಸ್ಪತ್ರೆಗೆ ಪತ್ರ ಬರೆಯಲಾಗಿದೆ.

"ಯುದ್ಧದ ಸನ್ನಿವೇಶ ಏರ್ಪಟ್ಟಿರುವುದರಿಂದ ಗಾಯಗೊಳ್ಳುವ ಸೈನಿಕರಿಗೆ ವೈದ್ಯಕೀಯ ನೆರವು ನೀಡಲು ಈಗಲೇ ಸಿದ್ಧರಾಗಿ. ಆಸ್ಪತ್ರೆಯಲ್ಲಿ ಹೆಚ್ಚಿನ ಬೆಡ್ ಗಳನ್ನು ವ್ಯವಸ್ಥೆ ಮಾಡಿ" ಎಂದು ಪತ್ರದಲ್ಲಿ ಬರೆಯಲಾಗಿದೆ.

Pulwama terror attack: Pakistan indicates war against India

ಫೆಬ್ರವರಿ 14 ರಂದು ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಪಾಕಿಸ್ತಾನ ಮೂಲದ ಜೈಷ್ ಇ ಮೊಹಮ್ಮದ್ ಸಂಘಟನೆಯ ಉಗ್ರ ಆದಿಲ್ ದಾರ್ ಎಂಬಾತ ನಡೆಸಿದ ಆತ್ಮಾಹುತಿ ಕಾರ್ ಬಾಂಬ್ ದಾಳಿಯಲ್ಲಿ ಭಾರತೀಯ ಸೇನೆಯ 44 ಯೋಧರು ಹುತಾತ್ಮರಾಗಿದ್ದರು.

ಈ ಹೇಯಕೃತ್ಯದ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳಲು ಮತ್ತು, ಭಯೋತ್ಪಾದನೆಯ ವಿರುದ್ಧ ಸಮರ ಸಾರಲು ಸಿದ್ಧವಾಗಿರುವ ಭಾರತ, ಪಾಕಿಸ್ತಾನದ ವಿರುದ್ಧ ಯುದ್ಧ ಸಾರಬಹುದು ಎಂಬ ವದಂತಿ ಹಬ್ಬಿದೆ. ಇದು ಪಾಕ್ ವಲಯದಲ್ಲಿ ಭೀತಿ ಮೂಡಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+