ಕಾಶ್ಮೀರಿಗಳನ್ನು ಪ್ರಾಣಿಗಳಂತೆ ಬಂಧಿಸಿಟ್ಟಿದ್ದಾರೆ: ಅಮಿತ್‌ ಶಾ ಗೆ ಮುಫ್ತಿ ಮಗಳ ಪತ್ರ

ನವದೆಹಲಿ, ಆಗಸ್ಟ್ 16: ಕಾಶ್ಮೀರಿಗಳನ್ನು ಪ್ರಾಣಿಗಳ ರೀತಿ ಬಂಧಿಸಿಟ್ಟಿದ್ದಾರೆ, ಕನಿಷ್ಠ ಮಾನವ ಹಕ್ಕುಗಳಿಗೂ ಬೆಲೆ ನೀಡಬಾರದೆ ಎಂದು ಜಮ್ಮು ಕಾಶ್ಮೀರ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಮಗಳು ಇಲ್ತಿಜಾ ಅಮಿತ್ ಶಾ ಗೆ ಪತ್ರಬರೆದಿದ್ದಾರೆ.

ಇಡೀ ಭಾರತವೇ ಸ್ವಾತಂತ್ರ್ಯ ದಿನ ಆಚರಣೆ ಮಾಡುತ್ತಿರುವ ಹೊತ್ತಿನಲ್ಲಿ, ಕಾಶ್ಮೀರಿಗಳನ್ನು ಪ್ರಾಣಿಗಳ ರೀತಿ ಬಂಧಿಸಿಟ್ಟಿದ್ದಾರೆ.

''ಅವರನ್ನು ಭೇಟಿ ಮಾಡಲು ಅವಕಾಶ ನೀಡುತ್ತಿಲ್ಲ, ಕರೆ ಮಾಡಲು ಕೂಡ ಸಾಧ್ಯವಾಗುತ್ತಿಲ್ಲ, ಅವರು ಈಗ ಯಾವುದೇ ಪಕ್ಷವನ್ನು ಪ್ರತಿನಿಧಿಸುತ್ತಿಲ್ಲ. ಕೆಲವು ಭದ್ರತಾ ಸಿಬ್ಬಂದಿಗಳು ಹೇಳುವ ಪ್ರಕಾರ ಮುಫ್ತಿಯವರ ಬಂಧನಕ್ಕೆ ಮಾಧ್ಯಮಗಳಿಗೆ ನೀಡಿದ ಸಂದರ್ಶನವೇ ಕಾರಣವಂತೆ'' ಎಂದು ಇಲ್ತಿಜಾ ಪತ್ರದಲ್ಲಿ ಬರೆದಿದ್ದಾರೆ.

Muftis Daughter Writes A Letter To Amit Shah

ಅಂಚೆ ಸೇವೆ ಕೂಡ ಸ್ಥಗಿತಗೊಂಡಿರುವುದರಿಂದ ಅಮಿತ್ ಶಾ ಅವರಿಗೆ ಪತ್ರ ರವಾನಿಸಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿಕೊಂಡಿದ್ದಾರೆ.

ಇಂದು 12ನೇ ದಿನವೂ ಕೂಡ ಕಾಶ್ಮೀರದಲ್ಲಿ ನಿರ್ಬಂಧ ಮುಂದುವರೆದಿದೆ. ಆದರೆ ಕರ್ಫ್ಯೂ ಹಿಂಪಡೆಯಲಾಗಿದೆ. ಜನರು ನಗರದಲ್ಲಿ ಮಾತ್ರ ಓಡಾಡಿಕೊಂಡಿರಬಹುದು. ಆದರೆ ಗುಂಪು ಕಟ್ಟಿಕೊಂಡು ಓಡಾಡುವಂತಿಲ್ಲ.

ಶೀಘ್ರವೇ ಎಲ್ಲಾ ನಿರ್ಬಂಧಗಳನ್ನು ತೆರವುಗೊಳಿಸಲಾಗುವುದು ಎಂದು ಕೇಂದ್ರ ಸರ್ಕಾರವು ಸುಪ್ರೀಂಕೋರ್ಟ್‌ಗೆ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+