ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಮ್ಮು ಮತ್ತು ಕಾಶ್ಮೀರ: ನೀರೆಂದು ಆ್ಯಸಿಡ್ ಸೇವಿಸಿ ತಹಶೀಲ್ದಾರ್ ಅಸ್ವಸ್ಥ

|
Google Oneindia Kannada News

ನೀರೆಂದು ಆ್ಯಸಿಡ್ ಕುಡಿದು ಜಮ್ಮು ಕಾಶ್ಮೀರದ ತಹಶೀಲ್ದಾರ್‌ ಒಬ್ಬರು ಆಸ್ಪತ್ರೆಗೆ ದಾಖಲಾಗಿರುವ ಘಟನೆ ನಡೆದಿದೆ. ಗಸಗಸೆ ಕೃಷಿ ನಾಶಪಡಿಸಿದ ಬಳಿಕ ತಹಶೀಲ್ದಾರ್ ಡಿಎಚ್ ಪೋರಾ, ನಿಯಾಜ್ ಅಹ್ಮದ್ ಭಟ್ ಬೆಳಗ್ಗೆ ಸುಮಾರು 11 ಗಂಟೆಗೆ ವಾಪಸಾಗುತ್ತಿದ್ದರು.

ಸಾಮಾನ್ಯ ಅಂಗಡಿಯೊಂದರಲ್ಲಿ ನೀರಿನ ಬಾಟಲಿ ಕೇಳಿದ್ದರು ಎಂದು ಮೂಲಗಳು ತಿಳಿಸಿವೆ. ಅಂಗಡಿಯವನು ತಪ್ಪಾಗಿ ನೀರು ಹೋಲುವ ಆ್ಯಸಿಡ್ ಬಾಟಲಿಯನ್ನು ನೀಡಿದ್ದಾನೆ. ತಹಶೀಲ್ದಾರ್ ಅವರು ಅದನ್ನು ಸೇವಿಸಿದ ಕೂಡಲೇ ಅನಾರೋಗ್ಯಕ್ಕೆ ತುತ್ತಾದರು ಬಳಿಕ ಆಸ್ಪತ್ರೆಗೆ ದಾಖಲಿಸಲಾಯಿತು.

ನಿಯಾಜ್ ಅಹ್ಮದ್ ಈ ಕುರಿತು ಮಾಹಿತಿ ನೀಡಿದ್ದು, 'ತುಂಬಾ ಬಾಯಾರಿಕೆಯಾಗಿತ್ತು, ನೀರು ಕೊಡಿ ಎಂದು ಅಂಗಡಿಯವನ ಬಳಿ ಕೇಳಿದೆವು, ನೀರಿನ ಬಾಟಲಿ ಕೊಡುವ ಬದಲು ಬ್ಯಾಟರಿ ಆ್ಯಸಿಡ್‌ ಕೊಟ್ಟ ಪರಿಣಾಮ ಈ ರೀತಿಯಾಗಿದೆ' ಎಂದಿದ್ದಾರೆ.

Man Hospitalised After Shopkeeper Mistakenly Sells Him Acid Instead Of Mineral Water

ತಕ್ಷಣ ಶ್ರೀನಗರ ಆಸ್ಪತ್ರೆಗೆ ದಾಖಲಾದೆ ಎಂದು ಹೇಳಿದ್ದಾರೆ, ಈಗ ನಿಯಾಜ್ ಅವರ ಆರೋಗ್ಯ ಸ್ಥಿರವಾಗಿದೆ, ಡಿಸ್ಚಾರ್ಜ್ ಆಗಿದ್ದಾರೆ ಎಂದು ಬಿಎಂಒ ಮಾಹಿತಿ ನೀಡಿದ್ದಾರೆ. ಡಿಎಚ್‌ ಪೋರಾ, ತನ್ವೀರ್ ಅಹಮದ್ ಮಾಹಿತಿ ನೀಡಿದ್ದು, ಅಂಗಡಿ ಮಾಲೀಕನನ್ನು ಬಂಧಿಸಲಾಗಿದ್ದು, ಅವರ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆ ಎಂದಿದ್ದಾರೆ.

English summary
A Tehsildar in South Kashmir’s Kulgam district was hospitalised on Wednesday after a shopkeeper mistakenly sold him a bottle of battery acid instead of water.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X