ದಾಳಿ ಭಯದಿಂದ ರಾಜ್ಯ ತೊರೆಯುತ್ತಿರುವ ಕಾಶ್ಮೀರಿ ಪಂಡಿತರು

ಶ್ರೀನಗರ, ಅಕ್ಟೋಬರ್ 08: ತಮ್ಮ ಮೇಲೆ ನಡೆಯಬಹುದಾದ ದಾಳಿ ಭಯದಿಂದ ಕೆಲವು ಕಾಶ್ಮೀರಿ ಪಂಡಿತರು ರಾಜ್ಯವನ್ನು ತೊರೆಯುತ್ತಿದ್ದಾರೆ.

ಕಾಶ್ಮೀರಿ ಪಂಡಿತರಲ್ಲದೆ ಕೆಲ ಕುಟುಂಬಗಳು ಸಹ ತೊರೆಯುತ್ತಿದ್ದಾರೆ. 1990ರ ದಾಳಿ ಮರು ಕಳಿಸುತ್ತಿದೆ ಎಂದು ಕಾಶ್ಮೀರಿ ಪಂಡಿತರ ಸಂಘರ್ಷ ಸಮಿತಿ ಅಧ್ಯಕ್ಷ ಸಂಜಯ್ ಟಿಕು ಹೇಳಿದ್ದಾರೆ. ಜೂನ್ ನಲ್ಲಿ ಉಪ ರಾಜ್ಯಪಾಲರ ಭೇಟಿಗೆ ಮನವಿ ಸಲ್ಲಿಸಿದ್ದೆವು. ಆದರೆ, ಈವರೆಗೂ ಭೇಟಿಗೆ ಅವಕಾಶ ದೊರೆತಿಲ್ಲ. ಸಾಮಾಜಿಕ ಮಾಧ್ಯಮಗಳಿಂದ ಇಂತಹ ಬೆಳವಣಿಗೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆ ಎಂದು ಅವರು ತಿಳಿಸಿದರು.

ಕಣಿವೆ ರಾಜ್ಯ ಕಾಶ್ಮೀರದಲ್ಲಿ ಅಲ್ಪಸಂಖ್ಯಾತರ ಹತ್ಯೆಗೆ ಗುರಿ ಇಡಲಾಗಿದೆ ಎಂಬ ಅನುಮಾನದಿಂದ 2010-11ರ ಪುನರ್ವಸತಿ ಪ್ಯಾಕೇಜ್ ಅಡಿಯಲ್ಲಿ ಸರ್ಕಾರಿ ಕೆಲಸ ಪಡೆದಿರುವ ಸಮುದಾಯದ ಕೆಲವು ನೌಕರರು, ಸುರಕ್ಷಿತ ವಾತಾವರಣ ಕಲ್ಪಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿದ್ದು, ತಮ್ಮ ಜೀವ ಭಯದಿಂದ ನಿಧಾನವಾಗಿ ಜಮ್ಮುವನ್ನು ತೊರೆಯಲು ಆರಂಭಿಸಿದ್ದಾರೆ ಎಂದು ಕಾಶ್ಮೀರಿ ಪಂಡಿತ್ ಸಂಘಟನೆಯೊಂದು ಶುಕ್ರವಾರ ಹೇಳಿದೆ.

Kashmiri Pandit Raises Questions On J&K Administration Over Terror Attacks On Civilians

ಈ ಮಧ್ಯೆ ಆಡಳಿತಗಾರರು ಅಲ್ಪಸಂಖ್ಯಾತ ಸಮುದಾಯದ ನೌಕರರಿಗೆ 10 ದಿನಗಳ ರಜೆಯನ್ನು ನೀಡಿದೆ ಎಂದು ಅಧಿಕೃತ ಮೂಲಗಳು ಹೇಳಿವೆ. ನಗರದ ಹೃದಯ ಭಾಗದಲ್ಲಿನ ಸರ್ಕಾರಿ ಶಾಲೆಯ ಒಳಗಡೆ ಗುರುವಾರ ಮಹಿಳಾ ಪ್ರಿನ್ಸಿಪಾಲ್ ಹಾಗೂ ಶಿಕ್ಷಕಿಯೊಬ್ಬರನ್ನು ಗುರುವಾರ ಗುಂಡಿಟ್ಟು ಹತ್ಯೆ ಮಾಡಲಾಗಿದೆ. ಐದು ದಿನಗಳಲ್ಲಿ ಕಾಶ್ಮೀರ ಕಣಿವೆಯಲ್ಲಿ ಏಳು ನಾಗರಿಕರನ್ನು ಉಗ್ರರು ಹತ್ಯೆ ಮಾಡಿದ್ದಾರೆ. ಈ ಏಳು ಮಂದಿಯಲ್ಲಿ ನಾಲ್ವರು ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರಾಗಿದ್ದಾರೆ.

ಈ ಹತ್ಯೆ ಗುರಿಯೊಂದಿಗೆ 2010-11ರಲ್ಲಿ ಪ್ರಧಾನ ಮಂತ್ರಿ ಪುನರ್ವಸತಿ ಕಾರ್ಯಕ್ರಮದಡಿಯಲ್ಲಿ ಸರ್ಕಾರಿ ಹುದ್ದೆ ಪಡೆದಿರುವ ಕಾಶ್ಮೀರಿ ಪಂಡಿತ್ ಸಮುದಾಯದ ಸದಸ್ಯರು, ತಮ್ಮ ಮೇಲೆ ಉಗ್ರರು ದಾಳಿ ನಡೆಸಬಹುದೆಂಬ ಭೀತಿಗೊಳಗಾಗಿದ್ದಾರೆ. ಸುಮಾರು 500ಕ್ಕೂ ಹೆಚ್ಚು ಜನರು ಬುದ್ಗಾಮ್, ಅನಂತ್ ನಾಗ್ ಮತ್ತು ಪುಲ್ವಾಮದಂತಹ ಪ್ರದೇಶಗಳನ್ನು ತೊರೆಯಲು ಆರಂಭಿಸಿದ್ದಾರೆ.

"ಕೆಲವು ದಿನಗಳಿಂದ ಕಾಶ್ಮೀರದಲ್ಲಿ ನಾಗರಿಕರನ್ನು ಗುರಿಯಾಗಿಸುವ ಘಟನೆಗಳು ನಡೆಯುತ್ತಿವೆ. ಸಮಾಜಕ್ಕಾಗಿ ದುಡಿಯುತ್ತಿರುವ ಮತ್ತು ಯಾರೊಂದಿಗೂ ಸಂಬಂಧವಿಲ್ಲದ ಅಮಾಯಕರನ್ನು ಗುರಿಯಾಗಿಸಲಾಗುತ್ತಿದೆ. ಇದು ಭಯದ ವಾತಾವರಣವನ್ನು ಸೃಷ್ಟಿಸುವ ಮತ್ತು ಕಾಶ್ಮೀರದಲ್ಲಿ ಕೋಮು ಸೌಹಾರ್ದತೆಗೆ ಧಕ್ಕೆ ತರಲು ಯತ್ನಿಸಲಾಗುತ್ತಿದೆ" ಎಂದು ಅವರು ತಿಳಿಸಿದ್ದಾರೆ.

ಕಳೆದ ಮೂರು ದಿನಗಳಲ್ಲಿ ಕಾಶ್ಮೀರ ಕಣಿವೆಯಲ್ಲಿ ನಡೆದ ನಾಲ್ಕನೇ ದಾಳಿ ಇದಾಗಿದೆ. ಅಕ್ಟೋಬರ್ 5 ರಂದು ಕಾಶ್ಮೀರಿ ಪಂಡಿತ ಎಂ ಎಲ್ ಬಿಂದ್ರೂ, ಕಾಶ್ಮೀರಿ ಮುಸ್ಲಿಂ ಮತ್ತು ಬಿಹಾರ ನಿವಾಸಿ ಶ್ರೀನಗರ ಹಾಗೂ ಬಂಡಿಪೋರಾದಲ್ಲಿ ಅಪರಿಚಿತ ಬಂದೂಕುಧಾರಿಗಳಿಂದ ಹತರಾಗಿದ್ದರು.

ಮೃತರನ್ನು ಸುಪಿಂದರ್ ಕೌರ್ ಮತ್ತು ದೀಪಕ್ ಚಂದ್ ಎಂದು ಗುರುತಿಸಲಾಗಿದೆ. ಕಳೆದ ಎರಡು ದಿನಗಳಲ್ಲಿ, ಕಾಶ್ಮೀರದಲ್ಲಿ 5 ನಾಗರಿಕರನ್ನು ಕೊಲ್ಲಲಾಗಿದೆ. ಬುಧವಾರ, ನಗರದಲ್ಲಿ ಪ್ರಸಿದ್ಧ ಕಾಶ್ಮೀರಿ ಪಂಡಿತ್ ಮೆಡಿಕಲ್ ಶಾಪ್ ಮಾಲೀಕರು ಸೇರಿದಂತೆ ಇಬ್ಬರು ನಾಗರಿಕರನ್ನು ಕೊಲ್ಲಲಾಯಿತು. ಇದಕ್ಕೂ ಮುನ್ನ ಮಂಗಳವಾರ ಮುಂಜಾನೆ, ಮೂವರನ್ನು ಕೊಲೆ ಮಾಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+