• search
  • Live TV
ಶ್ರೀನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಜಮ್ಮುವಿನ ವೈಷ್ಣೋ ದೇವಿ ದೇಗುಲ ಸಂಕೀರ್ಣದಲ್ಲಿ ಭಾರಿ ಅಗ್ನಿ ಅವಘಡ: ನಗದು ಕೌಂಟರ್‌ಗೆ ಹಾನಿ

|
Google Oneindia Kannada News

ಶ್ರೀನಗರ, ಜೂ.08: ಜಮ್ಮು ಕಾಶ್ಮೀರದ ರಿಯಾಸಿ ಜಿಲ್ಲೆಯ ವೈಷ್ಣೋ ದೇವಿ ದೇಗುಲ ಸಂಕೀರ್ಣದಲ್ಲಿ ಮಂಗಳವಾರ ಬೆಂಕಿ ಕಾಣಿಸಿಕೊಂಡಿದ್ದು, ನಗದು ಕೌಂಟರ್‌ಗೆ ಹಾನಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

'ಭವನ' (ಗರ್ಭಗುಡಿ) ಪಕ್ಕದಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ತಿಳಿದು ಬಂದಿದೆ. ಹಾಗೆಯೇ ಯಾವುದೇ ಪ್ರಾಣ ಹಾನಿ ಆಗಿಲ್ಲ ಎಂದು ಕೂಡಾ ವರದಿಯಾಗಿದೆ.

ಕೊರೊನಾ ಭೀತಿ: ವೈಷ್ಣೋದೇವಿ ದರ್ಶನಕ್ಕೆ ನಿರ್ಬಂಧಕೊರೊನಾ ಭೀತಿ: ವೈಷ್ಣೋದೇವಿ ದರ್ಶನಕ್ಕೆ ನಿರ್ಬಂಧ

ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಸಂಜೆ 4.15 ರ ಸುಮಾರಿಗೆ ಗರ್ಭಗುಡಿ ಪಕ್ಕದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಸಂಜೆ 5 ರ ವೇಳೆಗೆ ಪರಿಸ್ಥಿತಿಯನ್ನು ಸಂಪೂರ್ಣವಾಗಿ ಹತೋಟಿಗೆ ತರಲಾಗಿದೆ ಎಂದು ವರದಿ ತಿಳಿಸಿದೆ.

ಸಿಆರ್‌ಪಿಎಫ್ ಸಿಬ್ಬಂದಿ ಮಾಹಿತಿ ನೀಡಿದ ನಂತರ ಅಗ್ನಿಶಾಮಕ ದಳದವರು ಕೂಡಲೇ ಸ್ಥಳಕ್ಕೆ ಧಾವಿಸಿ ಕಾರ್ಯಾಚರಣೆ ಆರಂಭಿಸಿದ್ದರು. ಕಟ್ಟಡದ ಸುತ್ತಲೂ ದಟ್ಟ ಹೊಗೆ ಆವೃತ್ತವಾಗಿತ್ತು ಎಂದು ತಿಳಿದು ಬಂದಿದೆ.

 Jammu Kashmir: Massive fire at Vaishno Devi shrine complex

ಇನ್ನು ಈ ಬಗ್ಗೆ ಮಾಹಿತಿ ನೀಡಿರುವ ಅಧಿಕಾರಿಗಳು, ಬೆಂಕಿ ಕಾಣಿಸಿಕೊಂಡ ಕೂಡಲೇ ಸಿಆರ್‌ಪಿಎಫ್ ಸಿಬ್ಬಂದಿ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದು, ತಕ್ಷಣ ದೇವಾಲಯದ ಅಗ್ನಿಶಾಮಕ ದಳ ಕಾರ್ಯಚಟುವಟಿಕೆ ಆರಂಭಿಸಿ ಬೆಂಕಿ ನಂದಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹಾಗೆಯೇ ಈ ಅಗ್ನಿ ಅವಘಡದಿಂದಾಗಿ ನಗದು ಮತ್ತು ಕೆಲವು ದಾಖಲೆಗಳು ಸುಟ್ಟುಹೋಗಿವೆ ಎಂದು ನಗದು ಮತ್ತು ದಾಖಲೆಗಳು ಸುಟ್ಟುಹೋಗಿವೆ

(ಒನ್‌ಇಂಡಿಯಾ ಸುದ್ದಿ)

English summary
Jammu Kashmir: Massive fire at Vaishno Devi shrine complex, cash counter damaged.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X