ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಮ್ಮು ಮತ್ತು ಕಾಶ್ಮೀರ: 400 ರಾಜಕಾರಣಿಗಳಿಗೆ ಮತ್ತೆ ಭದ್ರತೆ ನೀಡಿದ ಸರ್ಕಾರ

|
Google Oneindia Kannada News

ಶ್ರೀನಗರ, ಏಪ್ರಿಲ್ 8: ಫೆಬ್ರುವರಿ ಪುಲ್ವಾಮಾ ದಾಳಿಯ ಬಳಿಕ ಹಿಂದಕ್ಕೆ ಪಡೆದುಕೊಳ್ಳಲಾಗಿದ್ದ ಸುಮಾರು 400 ರಾಜಕಾರಣಿಗಳ ಭದ್ರತೆಯನ್ನು ಮರಳಿಸಲಾಗಿದೆ.

ರಾಜ್ಯದಲ್ಲಿನ ಮುಖ್ಯವಾಹಿನಿಯಲ್ಲಿರುವ ರಾಜಕಾರಣಿಗಳಿಗೆ ಅಪಾಯ ಇದೆ ಎಂದು ಆರೋಪಿಸಿ ವಿವಿಧ ಪಕ್ಷಗಳು ವ್ಯಾಪಕ ಪ್ರತಿಭಟನೆ ನಡೆಸಿದ ಬಳಿಕ ರಾಜ್ಯಪಾಲ ಸತ್ಯಪಾಲ್ ಮಲಿಕ್ ಈ ನಿರ್ಧಾರ ತೆಗೆದುಕೊಂಡಿದ್ದಾರೆ.

ವಾರದಲ್ಲಿ ಎರಡು ದಿನ ಹೆದ್ದಾರಿಯಲ್ಲಿ ನಾಗರಿಕರಿಗೆ ಪ್ರವೇಶ ನಿಷೇಧ, ಆಕ್ರೋಶ ವಾರದಲ್ಲಿ ಎರಡು ದಿನ ಹೆದ್ದಾರಿಯಲ್ಲಿ ನಾಗರಿಕರಿಗೆ ಪ್ರವೇಶ ನಿಷೇಧ, ಆಕ್ರೋಶ

ಭದ್ರತೆಗೆ ಸಂಬಂಧಿಸಿದಂತೆ ವಿವಿಧ ರಾಜಕೀಯ ಪಕ್ಷಗಳು ಚುನಾವಣಾ ಆಯೋಗಕ್ಕೆ ದೂರು ನೀಡಿದ ಬಳಿಕ ಭದ್ರತೆಯನ್ನು ಮತ್ತೆ ಒದಗಿಸುವ ನಿರ್ಧಾರ ಮಾಡಲಾಗಿದೆ.

Jammu and Kashmir over 400 politicians security restored by governor Satya Pal Malik

ಭದ್ರತೆಯನ್ನು ವಾಪಸ್ ತೆಗೆದುಕೊಂಡಿರುವ ಕ್ರಮವು ಚುನಾವಣಾ ಪ್ರಕ್ರಿಯೆಗೆ ತೊಂದರೆ ಉಂಟುಮಾಡುವ ಸಂಚಿನದ್ದಾಗಿದೆ. ಭಯೋತ್ಪಾದನೆ ಪೀಡಿತ ರಾಜ್ಯದಲ್ಲಿ ರಾಜಕೀಯ ಕಾರ್ಯಕರ್ತರ ಸುರಕ್ಷತೆಗೆ ಅಪಾಯ ಎದುರಾಗಿದೆ ಎಂದು ಪಕ್ಷಗಳು ಆರೋಪಿಸಿದ್ದವು.

ಫೆ. 14ರಂದು ಪುಲ್ವಾಮಾ ಭಯೋತ್ಪಾದನಾ ದಾಳಿಯ ಬಳಿಕ ಅಪಾರ ಸಂಖ್ಯೆಯಲ್ಲಿ ರಾಜಕೀಯ ಕಾರ್ಯಕರ್ತರು ಮತ್ತು ಪ್ರತ್ಯೇಕತಾವಾದಿಗಳಿಗೆ ನೀಡಿದ್ದ ಭದ್ರತೆಯನ್ನು ಹಿಂದಕ್ಕೆ ಪಡೆದುಕೊಳ್ಳಲಾಗಿತ್ತು. ಶುಕ್ರವಾರ ಕೇಂದ್ರ ಗೃಹ ಸಚಿವಾಲಯವು ಭದ್ರತೆ ಅವಶ್ಯಕತೆಯಿಲ್ಲದ 900ಕ್ಕೂ ಹೆಚ್ಚು 'ಅನರ್ಹ' ವ್ಯಕ್ತಿಗಳಿಂದ ಭದ್ರತೆಯನ್ನು ಹಿಂದಕ್ಕೆ ಪಡೆದುಕೊಂಡು 2,768 ಪೊಲೀಸ್ ಸಿಬ್ಬಂದಿಯನ್ನು ಮುಕ್ತಿಗೊಳಿಸಲಾಗಿದೆ ಎಂದು ಹೇಳಿತ್ತು.

ಪುಲ್ವಾಮಾ ಉಗ್ರದಾಳಿ: ಮತ್ತೆ 18 ಪ್ರತ್ಯೇಕತಾವಾದಿಗಳಿಗೆ ಆಘಾತ ನೀಡಿದ ಸರ್ಕಾರ ಪುಲ್ವಾಮಾ ಉಗ್ರದಾಳಿ: ಮತ್ತೆ 18 ಪ್ರತ್ಯೇಕತಾವಾದಿಗಳಿಗೆ ಆಘಾತ ನೀಡಿದ ಸರ್ಕಾರ

ರಾಜಕೀಯ ಕಾರ್ಯಕರ್ತರಿಗೆ ನೀಡಲಾಗಿದ್ದ ಭದ್ರತೆಯನ್ನು ಹಿಂದಕ್ಕೆ ಪಡೆದುಕೊಳ್ಳುವ ಸಂಬಂಧ ಪರಾಮರ್ಶನಾ ಸಭೆ ನಡೆಸಿ ನಿರ್ಧಾರ ತೆಗೆದುಕೊಂಡಿದ್ದ ಮುಖ್ಯ ಕಾರ್ಯದರ್ಶಿ ಬಿವಿಆರ್ ಸುಬ್ರಮಣ್ಯಂ ಬಗ್ಗೆ ರಾಜ್ಯಪಾಲ ಸತ್ಯಪಾಲ್ ಮಲಿಕ್ ಅಸಮಾಧಾನ ವ್ಯಕ್ತಪಡಿಸಿದ್ದರು ಎನ್ನಲಾಗಿದೆ.

ಯಾವುದೇ ನಾಗರಿಕ ಸೇವಾ ಅಧಿಕಾರಿ ಈ ರೀತಿ ಸಭೆ ನೇತೃತ್ವ ವಹಿಸಿದ್ದು ಈ ಹಿಂದೆ ನಡೆದಿರಲಿಲ್ಲ. ಇದೇ ಮೊದಲ ಬಾರಿಗೆ ಮುಖ್ಯ ಕಾರ್ಯದರ್ಶಿ ಸಭೆ ನಡೆಸಿ ನೂರಾರು ರಾಜಕೀಯ ಕಾರ್ಯಕರ್ತರ ಭದ್ರತೆಯನ್ನು ಹಿಂದಕ್ಕೆ ಪಡೆದುಕೊಳ್ಳುವ ನಿರ್ಧಾರ ತೆಗೆದುಕೊಂಡಿದ್ದರು ಎಂದು ಮೂಲಗಳು ಹೇಳಿವೆ.

ಪ್ರತ್ಯೇಕತಾವಾದಿ ನಾಯಕರ ಭದ್ರತೆಗೆ ಕೋಟಿ ಕೋಟಿ ಖರ್ಚುಪ್ರತ್ಯೇಕತಾವಾದಿ ನಾಯಕರ ಭದ್ರತೆಗೆ ಕೋಟಿ ಕೋಟಿ ಖರ್ಚು

ಈ ನಿರ್ಧಾರವನ್ನು ಪರಾಮರ್ಶೆಗೆ ಒಳಪಡಿಸಿದ ಬಳಿಕ ಕೆಲವು ಅರ್ಹ ವ್ಯಕ್ತಿಗಳಿಗೆ ಮರಳಿ ಭದ್ರತೆಯನ್ನು ಒದಗಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಸತ್ಯಪಾಲ್ ಮಲಿಕ್ ತಿಳಿಸಿದ್ದಾರೆ.

English summary
Jammu and Kashmir governor Satya Pal Malik decided to restore the security of over 400 Political worked after widespread protest from parties.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X