ಮಗನ ಕೊಂದ ಉಗ್ರರನ್ನು ಕ್ಷಮಿಸಲು ಸಿದ್ಧ ಎಂದ ಕೃಷ್ಣಾ ಢಾಬಾ ಮಾಲೀಕ

ಶ್ರೀನಗರ, ಏಪ್ರಿಲ್ 13: ಮಗನನ್ನು ಹತ್ಯೆ ಮಾಡಿದ ಉಗ್ರರನ್ನು ಕ್ಷಮಿಸಲು ಸಿದ್ಧ ಎಂದು ಪ್ರಸಿದ್ಧ ಕೃಷ್ಣ ಢಾಬಾ ರೆಸ್ಟೋರೆಂಟ್ ಮಾಲೀಕ ರಮೇಶ್ ಕುಮಾರ್ ಹೇಳಿದ್ದಾರೆ.

ಆಕಾಶ್‌ನ ಹತ್ಯೆಯಲ್ಲಿ ಭಾಗಿಯಾಗಿದ್ದವರು ಕೂಡ ಯಾರೋ ಒಬ್ಬರು ಹೆತ್ತ ಮಕ್ಕಳೇ ಆಗಿದ್ದಾರೆ, ಸರ್ಕಾರ ಅವರನ್ನು ಬಿಡುಗಡೆ ಮಾಡಲು ಬಯಸಿದರೂ ನಾನು ಒಪ್ಪಿಕೊಳ್ಳುತ್ತೇನೆ ಎಂದು ಹೇಳಿಕೆ ನೀಡಿದ್ದಾರೆ.

ಫೆ.17ರಂದು ಸಂಜೆ ದುರ್ಗಾನಾಗ್ ಪ್ರದೇಶದಲ್ಲಿರುವ ಐಷಾರಾಮಿ ಉಪಹಾರ ಗೃಹದಲ್ಲಿ ಉಗ್ರರು ನಡೆಸಿದ ಗುಂಡಿನ ದಾಳಿಯಲ್ಲಿ ರಮೇಶ್ ಅವರ ಪುತ್ರ ತೀವ್ರವಾಗಿ ಗಾಯಗೊಂಡಿದ್ದು, ಫೆ.28 ರಂದು ಸಾವನ್ನಪ್ಪಿದ್ದರು.

Jammu And Kashmir Krishna Dhaba Owner Ready To Forgive Militants Who Killed His Son

ಇಷ್ಟೆಲ್ಲಾ ನಡೆದರೂತಾವು ಹುಟ್ಟಿದ ಈ ಕಣಿವೆ ರಾಜ್ಯ ಸುರಕ್ಷಿತ ಎಂದು ರಮೇಶ್ ಅಭಿಪ್ರಾಯಪಟ್ಟಿದ್ದಾರೆ. ಇದು ನಾನು ಹುಟ್ಟಿರುವ ಪ್ರದೇಶ, ನನ್ನ ಜಾಗ, ನನಗೆ ಯಾರದ್ದೂ ಭಯವಿಲ್ಲ ಎಂದಿದ್ದಾರೆ.

ಗರಿಷ್ಠ ಭದ್ರತಾ ವಲಯ ದುರ್ಗಾನಾಗ್ ಪ್ರದೇಶದಲ್ಲಿ ಕೃಷ್ಣ ಢಾಬಾ ಸ್ಥಿತಗೊಂಡಿದೆ. ಸೇನೆಯ 15 ಕಾರ್ಪ್ ಕೇಂದ್ರ ಕಚೇರಿಯು ಕೇವಲ 1 ಕಿ.ಮೀ ದೂರದಲ್ಲಿದೆ. ಆಕಾಶ್ ಹತ್ಯೆ ಪ್ರಕರಣದ ಎರಡು ದಿನಗಳಲ್ಲಿ ಆರೋಪಿಗಳಾದ ಮೂವರು ಉಗ್ರರರನ್ನು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಬಂಧಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+