ಜಮ್ಮು-ಕಾಶ್ಮೀರ: ನಾಲ್ವರು ಭಯೋತ್ಪಾದಕರನ್ನು ಸದೆಬಡಿದ ಭಾರತೀಯ ಸೇನೆ
ಶೋಪಿಯಾನ್(ಜಮ್ಮು-ಕಾಶ್ಮೀರ), ನವೆಂಬರ್ 20: ಜಮ್ಮು ಕಾಶ್ಮೀರದ ಶೋಪಿಯಾನ್ ನಲ್ಲಿ ನಡೆದ ಎನ್ ಕೌಂಟರ್ ದಾಳಿಯಲ್ಲಿ ಭಾರತದ ಗಡಿಯೊಳಗೆ ನುಗ್ಗುತ್ತಿದ್ದ ನಾಲ್ವರು ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದೆ.
ಇಂದು ಬೆಳಗ್ಗಿನ ಜಾವ ಆರಂಭವಾದ ಗುಂಡಿನ ಚಕಮಕಿಯಲ್ಲಿ ಭಾರತೀಯ ಸೇನೆ ನಡೆಸಿದ ಎನ್ ಕೌಂಟರ್ ದಾಳಿಗೆ ನಾಲ್ವರು ಭಯೋತ್ಪಾದಕರು ಮೃತರಾಗಿದ್ದು, ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.
ನ.13 ರಂದು ಭಾರೀ ಪ್ರಮಾಣದ ಶಸ್ತ್ರಾಸ್ತ್ರ ಹೊತ್ತು ಭಾರತದೊಳಗೆ ನುಗ್ಗುತ್ತಿದ್ದ ಪಾಕ್ ಉಗ್ರನೋರ್ವನನ್ನು ಭಾರತೀಯ ಸೇನೆ ಹೊಡೆದುರುಳಿಸಿತ್ತು.

ಅದಕ್ಕೂ ಮುನ್ನ ಪುಲ್ವಾಮಾದಲ್ಲೂ ಭಾರೀ ಶಸ್ತ್ರಾಸ್ತ್ರ ಹೊಂದಿದ್ದ ಇಬ್ಬರನ್ನು ಭಾರತೀಯ ಸೇನೆ ಸದೆಬಡಿದಿತ್ತು.
ಭಾನುವಾರ ಪಂಜಾಬಿನ ಅಮೃತಸರದ ಆಶ್ರಮವೊಂದರಲ್ಲಿ ನಡೆದ ಭಯೋತ್ಪಾದಕ ಕೃತ್ಯದ ನಂತರ ದೇಶದಾದ್ಯಂತ, ಅದರಲ್ಲೂ ಗಡಿಯಲ್ಲಿ ಸಾಕಷ್ಟು ಭದ್ರತೆಯನ್ನು ಕಲ್ಪಿಸಲಾಗಿದ್ದು, ಭಯೋತ್ಪಾದಕರನ್ನು ಸದೆಬಡಿಯಲಾಗುತ್ತಿದೆ.












Click it and Unblock the Notifications