ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚುನಾವಣಾ ಅಭ್ಯರ್ಥಿ ಮೇಲೆ ಉಗ್ರರಿಂದ ಗುಂಡಿನ ದಾಳಿ

|
Google Oneindia Kannada News

ಶ್ರೀನಗರ, ಡಿಸೆಂಬರ್ 4: ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆಯುತ್ತಿರುವ ಜಿಲ್ಲಾಭಿವೃದ್ಧಿ ಸಮಿತಿ ಚುನಾವಣೆಯ ಅಭ್ಯರ್ಥಿಯೊಬ್ಬರ ಮೇಲೆ ಅಪರಿಚಿತ ಬಂದೂಕುಧಾರಿಗಳು ಗುಂಡಿನ ದಾಳಿ ನಡೆಸಿದ್ದಾರೆ. ದಕ್ಷಿಣ ಕಾಶ್ಮೀರದ ಕೊಕೆರ್ನಾಗ್ ಪ್ರದೇಶದಲ್ಲಿ ಡಿಡಿಸಿ ಚುನಾವಣೆಯ ಮೂರನೇ ಹಂತದ ಮತದಾನ ನಡೆಯುವ ಸಂದರ್ಭದಲ್ಲಿ ಶುಕ್ರವಾರ ಈ ದಾಳಿ ನಡೆದಿದೆ. ದಾಳಿಯಲ್ಲಿ ಅಭ್ಯರ್ಥಿ ತೀವ್ರ ಗಾಯಗೊಂಡಿದ್ದಾರೆ.

ಅನಂತ್‌ನಾಗ್ ಜಿಲ್ಲೆಯ ಕೊಕೆರ್ನಾಗ್‌ನ ಸಗಂ ಪ್ರದೇಶದ ಜಮ್ಮು ಮತ್ತು ಕಾಶ್ಮೀರ ಅಪ್ನಿ ಪಾರ್ಟಿಯ ಅಭ್ಯರ್ಥಿ ಅನೀಸ್ ಉಲ್ ಇಸ್ಲಾಂ ಮೇಲೆ ಅಪರಿಚಿತ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದಾರೆ. ಅನೀಸ್ ಅವರ ಕೈಗೆ ಗುಂಡು ತಗುಲಿದ್ದು, ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ.

ಜಮ್ಮು ಮತ್ತು ಕಾಶ್ಮೀರ ಡಿಸಿಸಿ ಚುನಾವಣೆ; ಬಿಜೆಪಿ v/s ಪಿಎಜಿಡಿ ಮೈತ್ರಿಕೂಟ ಜಮ್ಮು ಮತ್ತು ಕಾಶ್ಮೀರ ಡಿಸಿಸಿ ಚುನಾವಣೆ; ಬಿಜೆಪಿ v/s ಪಿಎಜಿಡಿ ಮೈತ್ರಿಕೂಟ

ಕಳೆದ ತಿಂಗಳು ಆರಂಭವಾದ ಡಿಡಿಸಿ ಚುನಾವಣೆಯಲ್ಲಿ ಇದು ಮೊದಲ ದಾಳಿಯಾಗಿದೆ. ಅಲ್ತಾಫ್ ಬುಖಾರಿ ನೇತೃತ್ವದ ಅಪ್ನಿ ಪಾರ್ಟಿಯನ್ನು ಅನೀಸ್ ಇತ್ತೀಚೆಗಷ್ಟೇ ಸೇರಿ, ಸಗಂ ಪ್ರದೇಶದಿಂದ ಡಿಡಿಸಿ ಚುನಾವಣೆಯಲ್ಲಿ ಕಣಕ್ಕಿಳಿದಿದ್ದರು.

Jammu And Kashmir DDC Polls: Candidate Shot At By Suspected Terrorists

ನವೆಂಬರ್ 28ರಂದು ಮೊದಲ ಹಂತದ ಮತದಾನ ನಡೆದಿತ್ತು. ಶೇ 57.76ರಷ್ಟು ಮಂದಿ ಮತದಾನ ಮಾಡಿದ್ದರು. ಡಿಸೆಂಬರ್ 1ರಂದು ನಡೆದ ಮತದಾನದಲ್ಲಿ ಶೇ 48.62ರಷ್ಟು ಮತದಾರರು ಮತ ಹಾಕಿದ್ದು, ಶುಕ್ರವಾರ ಮೂರನೇ ಹಂತದ ಚುನಾವಣೆ ನಡೆಯುತ್ತಿದೆ. ಡಿ. 19ರವರೆಗೆ ಒಟ್ಟು ಎಂಟು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, 270 ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ.

English summary
Jammu And Kashmir DDC Polls: Suspected terrorists attacked a candidate in South Kashmir's Kokernag are.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X