ಕಾಶ್ಮೀರ: 8 ನಾಗರಿಕರ ಸಾವು, 3 ಉಗ್ರರ ಹತ್ಯೆ, ಓರ್ವ ಯೋಧ ಹುತಾತ್ಮ

ಶ್ರೀನಗರ, ಡಿಸೆಂಬರ್ 15: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಖಾರ್ಪೊರಾ ಸಿರ್ನೂ ಎಂಬಲ್ಲಿ ಉಗ್ರರು ಮತ್ತು ಭಾರತೀಯ ಸೇನೆಯ ಯೋಧರ ನಡುವೆ ನಡೆದ ಗುಡಿನ ಚಕಮಕಿಯಲ್ಲಿ 8 ನಾಗರಿಕರ ಹತ್ಯೆಯಾಗಿದ್ದು, ಮೂವರು ಯೋಧರನ್ನು ಸದೆಬಡಿಯಲಾಗಿದೆ.

ಎನ್ ಕೌಂಟರ್ ದಾಳಿ ಸಂದರ್ಭದಲ್ಲಿ ಪ್ರತಿದಾಳಿ ನಡೆಸುತ್ತಿದ್ದ ಭಾರತೀಯ ಸೇನೆಯ ಯೋಧರೊಬ್ಬರು ಹುತಾತ್ಮರಾಗಿದ್ದಾರೆ.

ಇಂದು ಹತ್ಯೆಯಾದ ಭಯೋತ್ಪಾದಕರಲ್ಲಿ ಓರ್ವ ಭಾರತೀಯ ಸೇನೆಯ ಮಾಜಿ ಯೋಧನಾಗಿದ್ದ ಜಾಹರ್ ಠಾಕರ್ ಎಂದು ಗುರುತಿಸಲಾಗಿದೆ. ಆತ ಕಳೆದ ವರ್ಷ ಸೇನೆಯ ಶಿಬಿರದಿಂದ ತಪ್ಪಿಸಿಕೊಂಡು ಹೋಗಿ, ಉಗ್ರ ಸಂಘಟನೆ ಸೇರಿದ್ದ .

Jammu and Kashmir: 6 civilians, 3 terrorists killed, one soldier martyred

ಉಳಿದ ಇಬ್ಬರು ಉಗ್ರರನ್ನು ಅದ್ನಾನ್ ವಾನಿ ಮತ್ತು ಜಾಹರ್ ಅಹ್ಮದ್ ಕರ್ ಅಲಿಯಾಸ್ ತಾಹಿರ್ ಹಿಜ್ಬಿ ಎಂದು ಗುರುತಿಸಲಾಗಿದೆ.

2017 ರಲ್ಲಿ ಭಾರತೀಯ ಸೇನಾ ಶಿಬಿರದಿಂದ ಎಕೆ 47 ಗನ್ ನೊಂದಿಗೆ ಜಾಹರ್ ಠಾಕರ್ ಪರಾರಿಯಾಗಿದ್ದ.

ಶನಿವಾರ ಬೆಳಿಗ್ಗೆ ಉಗ್ರರು ಖಾರ್ಪೊರಾ ಸಿರ್ನೂ ಹಳ್ಳಿಯಲ್ಲಿ ಅಡಗಿ ಕುಳಿತಿದ್ದಾರೆ ಎಂಬ ಖಚಿತ ಮಾಹಿತಿಯ ಮೇರೆಗೆ ಭಾರತೀಯ ಸೇನೆ ಎನ್ ಕೌಂಟರ್ ದಾಳಿ ಆರಂಭಿಸಿತ್ತು. ಈ ಸಂದರ್ಭದಲ್ಲಿ ಉಗ್ರರು ಪ್ರತಿ ದಾಳಿ ನಡೆಸುತ್ತಿದ್ದರು. ಘಟನೆಯಲ್ಲಿ 8 ಜನ ನಾಗರಿಕರೂ ಮೃತರಾಗದ್ದು, ಅವರ ಗುರುತು ಪತ್ತೆಯಾಗಿಲ್ಲ. ಹುತಾತ್ಮ ಸೈನಿಕನ ವಿವರವೂ ಲಭ್ಯವಾಗಿಲ್ಲ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+