• search
  • Live TV
ಶ್ರೀನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಜಮ್ಮು-ಕಾಶ್ಮೀರ: ಭಾರತೀ ಸೇನಾ ಹೆಲಿಕಾಪ್ಟರ್ ಅಪಘಾತದಲ್ಲಿ ಪೈಲಟ್ ಸಾವು

|

ಶ್ರೀನಗರ್, ಜನವರಿ.25: ಜಮ್ಮು-ಕಾಶ್ಮೀರದ ಮತ್ತು ಪಂಜಾಬ್ ಗಡಿಯಲ್ಲಿ ಭಾರತೀಯ ಸೇನೆಗೆ ಸಂಬಂಧಿಸಿದ ಹೆಲಿಕಾಪ್ಟರ್ ಅಪಘಾತಕ್ಕೀಡಾಗಿದೆ. ಹೆಲಿಕಾಪ್ಟರ್ ನಲ್ಲಿದ್ದ ಇಬ್ಬರು ಯೋಧರ ಈ ಪೈಕಿ ಒಬ್ಬರು ಮೃತಪಟ್ಟಿದ್ದು, ಮತ್ತೊಬ್ಬ ಯೋಧ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಇನ್ನು, ಹೆಲಿಕಾಪ್ಟರ್ ಅಪಘಾತದಲ್ಲಿ ಗಾಯಗೊಂಡ ಯೋಧನನ್ನು ತಕ್ಷಣ ಸ್ಥಳೀಯ ಆರೋಗ್ಯ ಕೇಂದ್ರಕ್ಕೆ ರವಾನಿಸಲಾಗಿದೆ. ಭಾರತೀಯ ಸೇನೆಯ ಹೆಚ್ಎಎಲ್ ಧ್ರುವ ಹೆಲಿಕಾಪ್ಟರ್ ಅಪಘಾತಕ್ಕೆ ತಾಂತ್ರಿಕ ದೋಷವೇ ಕಾರಣವಿರಬಹುದು ಎಂದು ಹೇಳಲಾಗುತ್ತಿದೆ. ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗುತ್ತಿದೆ.

ಜನವರಿ ತಿಂಗಳ ಆರಂಭದಲ್ಲೇ ರಾಜಸ್ಥಾನದ ಸೂರತಘರ್ ನಲ್ಲಿ ಮಿಗ್-21 ಬಿಸೋನ್ ಏರ್ ಕ್ರಾಫ್ಟ್ ಲ್ಯಾಂಡಿಂಗ್ ವೇಳೆಯಲ್ಲಿ ಅಪಘಾತಕ್ಕೀಡಾಗಿತ್ತು. ಈ ವೇಳೆ ಪೈಲಟ್ ಮುಂಜಾಗ್ರತೆಯಿಂದಾಗಿ ಯಾವುದೇ ಸಾವು-ನೋವು ಮತ್ತು ಸಾರ್ವಜನಿಕ ಆಸ್ತಿಗೆ ಹಾನಿ ಆಗಿರಲಿಲ್ಲ.

ಮಿಗ್-21 ಏರ್ ಕ್ರಾಫ್ಟ್ ಬಗ್ಗೆ ಮಾಹಿತಿ:

ಇದೇ ಜನವರಿ ತಿಂಗಳಿನಲ್ಲಿ ಅಪಘಾತಕ್ಕೀಡಾದ ಮಿಗ್-21 ಬಿಸೋನ್ ಏರ್ ಕ್ರಾಫ್ಟ್ ಪ್ರತಿನಿತ್ಯ ಅಭ್ಯಾಸದ ನಂತರ ರಾಜಸ್ಥಾನದ ಗಂಗಾನಗರದ ಸೂರತಘರ್ ಏರ್ ಬೇಸ್ ನಲ್ಲಿ ಹೆಲಿಕಾಪ್ಟರ್ ಅಪಘಾತವಾಗಿತ್ತು. ಸಂಜೆ ವೇಳೆಗೆ ಮಿಗ್-21 ಹೆಲಿಕಾಪ್ಟರ್ ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿತ್ತು. ರಾತ್ರಿ 8.15 ವೇಳೆಗೆ ಪೈಲಟ್ ತೋರಿದ ಮುಂಜಾಗ್ರತೆಯಿಂದಾಗಿ ಯಾವುದೇ ಸಾವು-ನೋವುಗಳಿಲ್ಲದೇ ಸುರಕ್ಷಿತವಾಗಿ ಲ್ಯಾಂಡಿಂಗ್ ಮಾಡಲಾಗಿತ್ತು" ಎಂದು ಭಾರತೀಯ ವಿಮಾನಯಾನ ಸಂಸ್ಥೆಯು ಟ್ವಿಟರ್ ನಲ್ಲಿ ಸ್ಪಷ್ಟಪಡಿಸಿತ್ತು.

English summary
Indian Army Helicopter Crashes Near Jammu Kashmir Kathua District, One Pilot Death.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X