• search
  • Live TV
ಶ್ರೀನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಉಗ್ರರ ಮೇಲಿನ ದಾಳಿಯಲ್ಲಿ ಪ್ರಮುಖ ಪಾತ್ರವಹಿಸಿದ ನೇತ್ರಾ, ಹೆರಾನ್

|

ಶ್ರೀನಗರ, ಫೆಬ್ರವರಿ 26 : ಗಡಿ ನಿಯಂತ್ರಣಾ ರೇಖೆಯ ಬಳಿ ಜೈಷ್-ಎ-ಮೊಹಮ್ಮದ್ ಉಗ್ರ ಸಂಘಟನೆಯ ನೆಲೆಗಳ ಮೇಲೆ ಭಾರತದ ವಾಯು ಸೇನೆ ಫೆಬ್ರವರಿ 26ರಂದು ಮುಂಜಾವಿನಲ್ಲಿ ದಾಳಿ ಮಾಡುತ್ತಿದ್ದಾಗ, 'ಐ ಇನ್ ದಿ ಸ್ಕೈ' ಎಂದೇ ಖ್ಯಾತವಾಗಿರುವ ಎರಡು ಡ್ರೋಣ್ ಗಳು ಪ್ರಮುಖ ಪಾತ್ರ ವಹಿಸಿವೆ.

ಸೇನಾ ದಾಳಿಯ ನಂತರ ಇದೇನು ಹೇಳುತ್ತಿದ್ದಾರೆ ಓಮರ್ ಅಬ್ದುಲ್ಲಾ?

ಒಂದು, ಡಿಫೆನ್ಸ್ ರಿಸರ್ಚ್ ಆ್ಯಂಡ್ ಡೆವಲಪ್ಮೆಂಟ್ ಆರ್ಗನೈಸೇಷನ್ (ಡಿಆರ್‌ಡಿಓ) ದೇಶೀಯವಾಗಿ ನಿರ್ಮಿಸಿರುವ 'ನೇತ್ರಾ' ಎಂಬ ಏರ್ ಬಾರ್ನ್ ಅರ್ಲಿ ವಾರ್ನಿಂಗ್ ಆ್ಯಂಡ್ ಕಂಟ್ರೋಲ್ ಸಿಸ್ಟಂ, ಮತ್ತು ಎರಡನೇಯದು, ಇಸ್ರೇಲ್ ನಿರ್ಮಿತ ಹೆರಾನ್ ಎಂಬ ಡ್ರೋಣ್. ಇವೆಡರ ಸಹಾಯದಿಂದ ಯಶಸ್ವಿಯಾಗಿ ಮತ್ತು ಯಾವುದೇ ಪ್ರತಿದಾಳಿಗೆ ಅವಕಾಶವಿಲ್ಲದಂತೆ ಭಾರತೀಯ ವಾಯು ಸೇನೆ ದಾಳಿ ಮಾಡಿ ವಾಪಸ್ ಬಂದಿದೆ.

ಫೈವ್ ಸ್ಟಾರ್ ರೆಸಾರ್ಟ್ ನಂತಿದ್ದ ಬಲಾಕೋಟ್ ನ ಜೈಶ್ ಕ್ಯಾಂಪ್

ಇವೆರಡು ಪಾಕಿಸ್ತಾನದ ಏರ್ಫೋರ್ಸ್ ಜೆಟ್ ವಿಮಾನಗಳ ಚಲನವಲನಗಳ ಮೇಲೆ ಮತ್ತು ಗಡಿ ನಿಯಂತ್ರಣಾ ರೇಖೆಗುಂಟ ಪಾಕಿಸ್ತಾನಕ್ಕೆ ಸೇರಿದ ಆ್ಯಂಟಿ-ಏರ್ ಕ್ರಾಫ್ಟ್ ರಾಡಾರ್ ಗಳ ಮೇಲೆ ಕಣ್ಣಿಟ್ಟಿದ್ದವು. ಇವೆರಡರಿಂದ ಸತತವಾಗಿ ವಾಯು ಸೇನೆಗೆ ಸಂದೇಶಗಳು ರವಾನೆಯಾಗುತ್ತಲೇ ಇದ್ದವು.

ಇದರಲ್ಲಿ ಹೆರಾನ್ ಡ್ರೋಣ್, ಮಧ್ಯಮ ಎತ್ತರದಲ್ಲಿ ಹಾರುವ, ದೂರ ದೃಷ್ಟಿಯ ಮಾನವರಹಿತ ವೈಮಾನಿಕ ವಾಹನವಾಗಿದ್ದು, ಇಸ್ರೇಲ್ ನ ಏರೋಸ್ಪೇಸ್ ಇಂಡಸ್ಟ್ರೀಸ್ ನ ಮಲತ್ ವಿಭಾಗ ಅಭಿವೃದ್ಧಿಪಡಿಸಿದೆ. ಇದು 10.5 ಕಿ.ಮೀ. ಎತ್ತರದಲ್ಲಿ 52 ಗಂಟೆಗಳ ಕಾಲ ಸತತವಾಗಿ ಕೆಲಸ ನಿರ್ವಹಿಸುವ ಸಾಮರ್ಥ್ಯ ಹೊಂದಿದೆ. ಭೂಮಿಯ ಮೇಲಿಂದ ಕೇಂದ್ರದಿಂದ ಸಂಪರ್ಕ ಕಡಿತಗೊಂಡರೆ ತಾನಾಗಿಯೇ ಭೂಮಿಗಿಳಿಯುವ ವ್ಯವಸ್ಥೆ ಇದರಲ್ಲಿದೆ. ಮತ್ತು ಇದು ಯಾವುದೇ ಪ್ರತಿಕೂಲ ವಾತಾವರಣವಿದ್ದರೂ ಸಮರ್ಥವಾಗಿ ಕೆಲಸ ನಿರ್ವಹಿಸುತ್ತದೆ.

ವೈಮಾನಿಕ ದಾಳಿಯಿಂದ ಸರ್ಜಿಕಲ್ ಸ್ಟ್ರೈಕ್ ಗಿಂತ ದೊಡ್ಡ ಮಟ್ಟದ ಹಾನಿ

ಸೆಂಟರ್ ಫಾರ್ ಏರ್ ಬಾರ್ನ್ ಸಿಸ್ಟೆಂಟ್ಸ್ ಸಹಯೋಗದೊಂದಿಗೆ ಡಿಆರ್‌ಡಿಓ ನಿರ್ಮಿಸಿರುವ 'ನೇತ್ರಾ', ಇತರ ದೇಶಗಳ ಏರ್ಫೋರ್ಸ್ ನ ಜೆಟ್ ವಿಮಾನಗಳ ಮೇಲೆ ಕಣ್ಣಿಟ್ಟಿರುತ್ತದೆ ಮತ್ತು ಚಲನವಲನ ಕಂಡುಬಂದರೆ ಮೊದಲೇ ಸೂಚನೆ ರವಾನಿಸುವ ವ್ಯವಸ್ಥೆ ಹೊಂದಿದೆ. ಆನ್-ಬೋರ್ಡ್ ಸೆನ್ಸಾರ್ ಗಳ ಮೂಲಕ ಪ್ರತಿದಾಳಿ ಆಗುವ ಸಂಭವನೀಯತೆ ಇದ್ದರೆ ಅದನ್ನು ಮೊದಲೇ ರವಾನಿಸುತ್ತದೆ.

ಕಾಶ್ಮೀರಿ ಅಮ್ಮಂದಿರಿಗೆ ಪತ್ರ : ನಿಮ್ಮ ಮಗ ಬೀದಿ ಹೆಣವಾಗುವುದು ಬೇಕಾ?

ಇವುಗಳಂಥದೇ ವ್ಯವಸ್ಥೆ ಹೊಂದಿದ್ದ ಪಾಕಿಸ್ತಾನದ ಮಾನವರಹಿತ ವೈಮಾನಿಕ ವಾಹನವನ್ನು ಗುಜರಾತ್ ರಾಜ್ಯದ ಕಛ್ ಜಿಲ್ಲೆಯ ಅಂತಾರಾಷ್ಟ್ರೀಯ ಗಡಿಯ ಬಳಿ ಮಂಗಳವಾರು ಹೊಡೆದುರುಳಿಸಲಾಗಿದೆ. ಕಛ್ ಜಿಲ್ಲೆಯ ಅಬ್ದಸಾ ತಾಲೂಕಿನ ನಂಘಟದ್ ಗ್ರಾಮದ ಬಳಿ ಈ ಡ್ರೋಣ್ ನ ಅವಶೇಷಗಳು ಬಿದ್ದಿದ್ದವು.

English summary
IAF attack on Jaish-E-Mohammad in PoK : Netra AEW&CS, indegenously developed by DRDO and Heron, developed by Israel, drones played important role when air strikes were happening, by keeping an eye on possible retaliation by the Pakistan Air Force jets.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X