ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನನ್ನನ್ನು ಗೃಹ ಬಂಧನದಲ್ಲಿರಿಸಲಾಗಿದೆ; ಮೆಹಬೂಬಾ ಮುಫ್ತಿ

|
Google Oneindia Kannada News

ಶ್ರೀನಗರ, ಸೆಪ್ಟೆಂಬರ್ 07: 'ನನ್ನನ್ನು ಗೃಹಬಂಧನದಲ್ಲಿ ಇರಿಸಲಾಗಿದೆ. ಈ ಮೂಲಕ ಜಮ್ಮು ಕಾಶ್ಮೀರದ ನಿಜ ಸ್ಥಿತಿ ಬಯಲಾಗಿದೆ' ಎಂದು ಪಿಡಿಪಿ ಮುಖ್ಯಸ್ಥೆ ಹಾಗೂ ಮಾಜಿ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಮಂಗಳವಾರ ಹೇಳಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಮುಫ್ತಿ, ತಮ್ಮ ಗುಪ್ಕಾರ್ ನಿವಾಸದ ಮುಖ್ಯ ದ್ವಾರವನ್ನು ಭದ್ರತಾ ಪಡೆಯ ವಾಹನ ತಡೆದಿರುವ ಚಿತ್ರವನ್ನು ಹಂಚಿಕೊಂಡಿದ್ದಾರೆ.

 ಮೆಹಬೂಬಾ ಮುಫ್ತಿಗೆ ತಾಲಿಬಾನಿಗಳೊಂದಿಗೆ ಸಂಪರ್ಕ: ತನಿಖೆಗೆ ಬಿಜೆಪಿ ಆಗ್ರಹ ಮೆಹಬೂಬಾ ಮುಫ್ತಿಗೆ ತಾಲಿಬಾನಿಗಳೊಂದಿಗೆ ಸಂಪರ್ಕ: ತನಿಖೆಗೆ ಬಿಜೆಪಿ ಆಗ್ರಹ

'ನನ್ನನ್ನು ಮಂಗಳವಾರ ಗೃಹಬಂಧನಕ್ಕೆ ಒಳಪಡಿಸಲಾಗಿದೆ. ಕಾಶ್ಮೀರದಲ್ಲಿ ಪರಿಸ್ಥಿತಿ ಭಿನ್ನವಾಗಿದೆ. ಕೇಂದ್ರಾಡಳಿತ ಪ್ರದೇಶವಾದ ಬಳಿಕ ಜಮ್ಮು ಕಾಶ್ಮೀರ ಸಹಜ ಸ್ಥಿತಿಗೆ ಮರಳಿದೆ ಎಂಬ ವಾದ ಹುಸಿಯಾಗಿದೆ. ನೈಜ ಸ್ಥಿತಿ ಏನು ಎಂಬುದು ಈಗ ಬಹಿರಂಗಗೊಂಡಿದೆ' ಎಂದು ಟ್ವೀಟ್ ಮಾಡಿದ್ದಾರೆ.

I Have Been Placed Under House Arrest Says Mehbooba Mufti

'ಭಾರತ ಅಫ್ಘಾನಿಸ್ತಾನದ ಜನರ ಹಕ್ಕುಗಳ ಬಗ್ಗೆ ಕಳವಳ ವ್ಯಕ್ತಪಡಿಸುತ್ತಿದೆ. ಆದರೆ ಕಾಶ್ಮೀರದವರಿಗೆ ಉದ್ದೇಶಪೂರ್ವಕವಾಗಿ ಹಕ್ಕುಗಳನ್ನು ನಿರಾಕರಿಸುತ್ತಿದೆ. ಇದು ಕಾಶ್ಮೀರ ಆಡಳಿತದ ಸ್ಥಿತಿಯ ಬಗ್ಗೆ ಹೇಳುತ್ತಿದೆ. ನನ್ನನ್ನು ಗೃಹಬಂಧನದಲ್ಲಿರಿಸಲಾಗಿದೆ' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Explained: ಜಮ್ಮು-ಕಾಶ್ಮೀರ ಗಡಿ ನಿರ್ಣಯ, ಕ್ಷೇತ್ರ ಪುನಾರಚನೆ ಇತಿಹಾಸExplained: ಜಮ್ಮು-ಕಾಶ್ಮೀರ ಗಡಿ ನಿರ್ಣಯ, ಕ್ಷೇತ್ರ ಪುನಾರಚನೆ ಇತಿಹಾಸ

ಜಮ್ಮು ಕಾಶ್ಮೀರದಲ್ಲಿ ಭಾರತದ ಪ್ರತ್ಯೇಕತಾ ಹೋರಾಟ ನಡೆಸುತ್ತಿದ್ದ ಹುರಿಯತ್ ಮುಖಂಡ ಸೈಯದ್ ಅಲಿ ಶಾ ಗಿಲಾನಿ ನಿಧನದ ನಂತರ ಜಮ್ಮು ಕಾಶ್ಮೀರದಲ್ಲಿ ಕೆಲವು ನಿರ್ಬಂಧಗಳನ್ನು ವಿಧಿಸಲಾಗಿತ್ತು. ಇಂಟರ್‌ನೆಟ್ ಹಾಗೂ ಮೊಬೈಲ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿತ್ತು. ಮಂಗಳವಾರ ಬೆಳಿಗ್ಗೆ ಪೊಲೀಸರು ಇಂಟರ್ನೆಟ್ ನಿರ್ಬಂಧಗಳನ್ನು ಸಡಿಲಗೊಳಿಸಿದ್ದರು.

English summary
Former Jammu and Kashmir Chief Minister Mehbooba Mufti on Tuesday claimed that she is under house arrest and the administration's "fake claims of normalcy" have been exposed,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X