ಗಡಿ ನಿಯಂತ್ರಣ ರೇಖೆ ಬಳಿ ಪಾಕಿಸ್ತಾನದಿಂದ ಭಾರೀ ಶೆಲ್ಲಿಂಗ್

ಶ್ರೀನಗರ್(ಜಮ್ಮು-ಕಾಶ್ಮೀರ), ಮಾರ್ಚ್ 1 : ಪಾಕಿಸ್ತಾನವು ಶುಕ್ರವಾರದಂದು ಗಡಿ ನಿಯಂತ್ರಣ ರೇಖೆ ಬಳಿಯ ಜಮ್ಮು-ಕಾಶ್ಮೀರದ ರಜೌರಿ, ಪೂಂಛ್ ಜಿಲ್ಲೆಗಳಲ್ಲಿ ಭಾರಿ ಶೆಲ್ಲಿಂಗ್ ನಡೆಸಿದ್ದು, ಮಹಿಳೆಯೊಬ್ಬರಿಗೆ ಗಾಯಗಳಾಗಿವೆ. ಇಂದಿಗೂ ಸೇರಿ ಸತತ ಎಂಟನೇ ದಿನ ಕೂಡ ಪಾಕಿಸ್ತಾನ ಅಪ್ರಚೋದಿತ ದಾಳಿ ನಡೆಸಿದೆ.

ಪೂಂಛ್ ನ ನಾಗರಿಕ ಪ್ರದೇಶವನ್ನು ಗುರಿ ಮಾಡಿಕೊಂಡ ಪಾಕಿಸ್ತಾನ ಸೇನಾ ಪಡೆ, ಹೌವಿಟ್ಜರ್ ಸೇರಿದಂತೆ ಭಾರೀ ಪ್ರಮಾಣದ ಗನ್ ಬಳಸಿ ದಾಳಿ ನಡೆಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಗಡಿ ನಿಯಂತ್ರಣ ರೇಖೆ (ಎಲ್ ಒಸಿ) ಬಳಿಯ ಪೂಂಛ್ ಹಾಗೂ ರಜೌರಿ ಜಿಲ್ಲೆಯ ಹಲವು ಸೆಕ್ಟರ್ ಗಳಲ್ಲಿ ಗುರುವಾರ ರಾತ್ರಿಯಿಡೀ ಪಾಕಿಸ್ತಾನಿ ಪಡೆಗಳು ಗುಂಡಿನ ಚಕಮಕಿ ಹಾಗೂ ಮಾರ್ಟರ್ ಶೆಲ್ಲಿಂಗ್ ನಡೆಸಿವೆ. ಭಾರತೀಯ ಸೇನೆ ಕೂಡ ಅದಕ್ಕೆ ತಕ್ಕ ಪ್ರತ್ಯುತ್ತರ ನೀಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Heavy shelling by Pakistan troop in areas along LoC in Rajouri, Poonch

ಪೂಂಛ್ ನ ಮನ್ ಕೋಟ್ ಪ್ರದೇಶದ ನಾಸೀಮ್ ಅಖ್ತರ್ ಎಂಬ ಮಹಿಳೆ ಗುಂಡಿನ ಚಕಮಕಿಯಲ್ಲಿ ಗಾಯಾಳು ಆಗಿದ್ದಾರೆ. ಶುಕ್ರವಾರ ಸಂಜೆ ನಾಲ್ಕರ ನಂತರ ಪಾಕಿಸ್ತಾನವು ಶೆಲ್ಲಿಂಗ್, ಮಾರ್ಟರ್ ಜತೆಗೆ ಸಣ್ಣ ಪ್ರಮಾಣದ ಶಸ್ತ್ರಾಸ್ತ್ರದ ಮೂಲಕ ಎಲ್ ಒಸಿಯ ನೌಷೇರಾ ಸೆಕ್ಟರ್ ನಲ್ಲಿ ಗುಂಡಿನ ದಾಳಿ ಆರಂಭಿಸಿತು ಎಂದು ಸೇನೆಯ ಸಾರ್ವಜನಿಕ ಸಂಪರ್ಕಾಧಿಕಾರಿ ತಿಳಿಸಿದ್ದಾರೆ.

ಜಮ್ಮು-ಕಾಶ್ಮೀರದ ಪೂಂಛ್ ಹಾಗೂ ರಜೌರಿ ಜಿಲ್ಲೆಯಲ್ಲಿ ಗುರುವಾರ ಪಾಕಿಸ್ತಾನಿ ಸೇನೆಯು ಭಾರತದ ಮುಂಚೂಣಿಯ ಆರು ಸೇನಾ ಪೋಸ್ಟ್ ಗಳ ಮೇಲೆ ದಾಳಿ ನಡೆಸಿದೆ. ಈ ವೇಳೆ ಒಬ್ಬರು ಮಹಿಳೆ ಮೃತಪಟ್ಟು, ಯೋಧ ಗಾಯಗೊಂಡಿದ್ದಾರೆ. ಇದಕ್ಕೆ ಭಾರತೀಯ ಸೇನೆ ತಕ್ಕ ಪ್ರತ್ಯುತ್ತರ ನೀಡಿದೆ.

ಕಳೆದ ಒಂದು ವಾರದಲ್ಲಿ ಪಾಕಿಸ್ತಾನ ಸೇನೆ ಅರವತ್ತು ಸಲ ಕದನ ವಿರಾಮ ಉಲ್ಲಂಘಿಸಿದೆ. ಒಬ್ಬರು ಮಹಿಳೆ ಮೃತಪಟ್ಟು, ಒಂಬತ್ತು ಮಂದಿ ಗಾಯಗೊಂಡಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಗಡಿ ನಿಯಂತ್ರಣ ರೇಖೆಯ ರಜೌರಿ ಮತ್ತು ಪೂಂಛ್ ಜಿಲ್ಲೆಯ ಐದು ಕಿ.ಮೀ. ವ್ಯಾಪ್ತಿಯ ಶಿಕ್ಷಣ ಸಂಸ್ಥೆಗಳನ್ನು ತಾತ್ಕಾಲಿಕವಾಗಿ ಮುಚ್ಚಲು ಅಧಿಕಾರಿಗಳು ಆದೇಶಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+