ಅಮಿತ್ ಶಾ ಭೇಟಿಗೂ ಕೆಲವೇ ಗಂಟೆ ಮೊದಲು ಕಾಶ್ಮೀರದಲ್ಲಿ ಎನ್ ಕೌಂಟರ್ ದಾಳಿ

ಶ್ರೀನಗರ, ಜೂನ್ 26: ಗೃಹಸಚಿವ ಅಮಿತ್ ಶಾ ಅವರ ನಿಗದಿಯಾಗಿರುವ ಭೇಟಿಗೂ ಕೆಲವು ಗಂಟೆಗಳ ಮುನ್ನ ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಉಗ್ರರು ಮತ್ತು ಯೋಧರ ನಡುವೆ ಎನ್ ಕೌಂಟರ್ ದಾಳಿ ನಡೆದಿದೆ.

ಕೆಲವೇ ದಿನಗಳಲ್ಲಿ ನಡೆಯಲಿರುವ ಅಮರನಾಥ ಯಾತ್ರೆಗೂ ಮುನ್ನ ಭದ್ರತೆಯ ಮೇಲ್ವಿಚಾರಣೆಗಾಗಿ ಅಮಿತ್ ಶಾ ಶ್ರೀನಗರಕ್ಕೆ ಆಗಮಿಸುತ್ತಿದ್ದಾರೆ.

2017ರ] ಜುಲೈ ತಿಂಗಳಿನಲ್ಲಿ ಜಮ್ಮು ಕಾಶ್ಮೀರದ ಅನಂತನಾಗ್ ಜಿಲ್ಲೆಯ ಬಟೆಂಗೊ ಎಂಬಲ್ಲಿ ಅಮರನಾಥ ಯಾತ್ರಿಕರ ಮೇಲೆ ಉಗ್ರರು ನಡೆಸಿದ ದಾಳಿಯಲ್ಲಿ 7 ಜನ ಅಮರನಾಥ ಯಾತ್ರಿಗಳು ಅಸುನೀಗಿದ್ದರು.

Encounter in Jammu and Kashmir, few hours before Amith Shahs visit

ಭಯೋತ್ಪಾದಕರು ಗುಂಪು ಗುಂಪಾಗಿ ಹೋಗುವ ಅಮರನಾಥ ಯಾತ್ರಿಕರನ್ನೇ ಗುರಿಯಾಗಿಸಿಕೊಳ್ಳುವ ಸಾಧ್ಯತೆ ಇರುವುದರಿಂದ ಈ ಭಾಗದಲ್ಲಿ ಬಿಗಿ ಭದ್ರತೆ ಏರ್ಪಡಿಸಲಾಗಿದೆ.

ಕಣಿವೆ ರಾಜ್ಯದಲ್ಲಿ ಹೇಗಾದರೂ ಮಾಡಿ ಶಾಂತಿ ಕದಡಲು ಹಾತೊರೆಯುತ್ತಿರುವ ಉಗ್ರರು ಜೂನ್ 18 ರಂದು ಪುಲ್ವಾಮಾದಲ್ಲಿ ಗ್ರೆನೇಡ್ ಎಸೆದಿದ್ದರು. ಈ ಘಟನೆಯಲ್ಲಿ 8 ಜನರಿಗೆ ಗಾಯವಾಗಿತ್ತು. ಜೂನ್ 17 ರಂದು ಸಹ ನಡೆದಿದ್ದ ಉಗ್ರದಾಳಿಯಲ್ಲಿ 9 ಯೋಧರು ಗಾಯಗೊಂಡಿದ್ದರು. ಫೆಬ್ರವರಿ 14 ರಂದು ನಲವನತ್ತಕ್ಕೂ ಹೆಚ್ಚು ಸಿಆರ್ ಪಿಎಫ್ ಯೋಧರನ್ನು ಬಲಿತೆಗೆದುಕೊಡ ಜೈಶ್ ಇ ಮೊಹಮ್ಮದ್ ಉಗ್ರರ ಕೃತ್ಯದ ನಂತರ ಕಣಿವೆ ರಾಜ್ಯದಲ್ಲಿ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆಯಾದರೂ, ಉಗ್ರರು ಸೇನೆಯನ್ನು ಗುರಿಯಾಗಿಸಿ ದಿನೇ ದಿನೆ ದಾಳಿ ನಡೆಸುತ್ತಲೇ ಇದ್ದಾರೆ.

ಇದೀಗ ಅಮಿತ್ ಶಾ ಭೇಟಿಗೂ ಮುನ್ನ ನಡೆದ ದಾಳಿ ಆತಂಕ ಸೃಷ್ಟಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+