• search
  • Live TV
ಶ್ರೀನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಪಾಕ್‌ನಿಂದ ಗಡಿ ನಿಯಂತ್ರಣ ರೇಖೆ ಉಲ್ಲಂಘನೆ: ಕಣಿವೆ ರಾಜ್ಯಗಳ ಶಾಲೆಗಳಿಗೆ ರಜೆ ಘೋಷಣೆ

|

ಶ್ರೀನಗರ, ಫೆಬ್ರವರಿ 27: ಜಮ್ಮು ಮತ್ತು ಕಾಶ್ಮೀರದಲ್ಲಿನ ಗಡಿ ನಿಯಂತ್ರಣ ರೇಖೆಯ ಬಳಿ ಹಲವು ಪ್ರದೇಶಗಳಲ್ಲಿ ಪಾಕಿಸ್ತಾನದ ಪಡೆಗಳು ಮಾರ್ಟರ್‌ ಶೆಲ್ಸ್‌ ಮತ್ತು ರೈಫಲ್‌ಗಳಿಂದ ಫೈರಿಂಗ್‌ ಮಾಡುತ್ತಿದ್ದು, ಕಳೆದ ಮೂರು ದಿನಗಳ ಸತತ ಗಡಿ ನಿಯಂತ್ರಣ ರೇಖೆ ಉಲ್ಲಂಘನೆ ಮಾಡುತ್ತಿದೆ.

ಹೀಗಾಗಿ ಗಡಿನಿಯಂತ್ರಣ ರೇಖೆಯ 5 ಕಿ.ಮೀ ದೂರದಲ್ಲಿನ ಎಲ್ಲ ಶಾಲೆಗಳಿಗೆ ರಜೆ ನೀಡಲಾಗಿದ್ದು, ಪರೀಕ್ಷೆಗಳನ್ನು ಮುಂದೂಡಲಾಗಿದೆ.

ಮಂಗಳವಾರವಷ್ಟೇ ಪಾಕ್ ಆಕ್ರಮಿತ ಪ್ರದೇಶ ಬಾಲಾಕೋಟ್‌ಗೆ ತೆರಳಿ ಭಾರತೀಯ ವಾಯುಸೇನೆ ಉಗ್ರರ ಅಡಗುತಾಣಗಳ ಮೇಲೆ ದಾಳಿ ನಡೆಸಿತ್ತು.

ಶೋಪಿಯಾನ್‌ ಎನ್‌ಕೌಂಟರ್‌: ಜೈಷ್ ಸಂಘಟನೆಯ ಇಬ್ಬರು ಉಗ್ರರ ಹತ್ಯೆ

ಪಾಕಿಸ್ತಾನದ ಶೆಲ್ಲಿಂಗ್‌ನಿಂದಾಗಿ ಅಖ್ನೂರ್‌ ಸೆಕ್ಟರ್‌ನಲ್ಲಿ ಐವರು ಯೋಧರಿಗೆ ಗಾಯಗಳಾಗಿದ್ದು, ಭಾರತೀಯ ಸೇನೆಯು ತೀವ್ರ ಪ್ರತಿರೋಧವನ್ನು ಒಡ್ಡಿದೆ ಮತ್ತು ಪಾಕಿಸ್ತಾನಿ ಪೋಸ್ಟ್‌ಗಳನ್ನು ನಾಶಪಡಿಸಿದೆ.

ಬುಧವಾರ ಬೆಳಿಗ್ಗೆ ಪಾಕಿಸ್ತಾನ ಗಡಿನಿಯಂತ್ರಣ ರೇಖೆಯನ್ನು ಉಲ್ಲಂಘಿಸಿ, ಭಾರತೀಯ ಸೇನೆಯ ಮೇಲೆ ದಾಳಿ ನಡೆಸಿದೆ. ಐವರು ಭಾರತೀಯ ಸೈನಿಕರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.

ಇದರಿಂದ ಹಲವಾರು ಸಾವು ನೋವು ಸಂಭವಿಸಿದೆ ಎಂದು ಸೇನೆ ಹೇಳಿದೆ. ಪಾಕಿಸ್ತಾನಿ ಸೇನೆಯು ಪೂಂಚ್‌, ಮೆಂಧರ್‌ ಮತ್ತು ನೌಶೇರಾ ಸೆಕ್ಟರ್‌ಗಳಲ್ಲಿ ಶೆಲ್‌ ದಾಳಿ ನಡೆಸುತ್ತಿದೆ.

English summary
At least five Indian soldiers were injured as Pakistan fired mortar shells and missiles across the Line of Control at several areas in Jammu and Kashmir on Tuesday.prompting authorities to shut schools and defer examinations within five kilometres of the border.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X