ಕಾಶ್ಮೀರದಲ್ಲಿ ಎಕೆ 47 ಹೊತ್ತ ಉಗ್ರರ ಟ್ರಕ್ ಪೊಲೀಸ್ ವಶಕ್ಕೆ

ಶ್ರೀನಗರ, ಮಾರ್ಚ್ 12: ಜಮ್ಮು-ಕಾಶ್ಮೀರ ಮತ್ತು ಪಂಜಾಬಿನ ಗಡಿಯ ಲಖಾನ್ಪುರ ಬಳಿಯ ಕತುವಾದಲ್ಲಿ 6 ಎಕೆ 47 ರೈಫಲ್ ಮತ್ತು ಹಲವು ಶಸಸ್ತ್ರಾಸ್ತ್ರಗಳನ್ನು ಹೊಂದಿದ್ದ ಟ್ರಲಕ್ ವೊಂದನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಟ್ರಕ್ ನಲ್ಲಿದ್ದ ಮೂವರು ಶಂಕಿತ ಉಗ್ರರನ್ನು ಬಂಧಿಸಲಾಗಿದೆ. ಬೆಳಿಗ್ಗೆ ಸುಮಾರು 8 ಗಂಟೆಗೆ ಜಮ್ಮು-ಪಠಾಣ್ ಕೋಟ್ ಹೆದ್ದಾರಿಯಲ್ಲಿ ಟ್ರಕ್ ಚಲಿಸುತ್ತಿದ್ದ ಸಂದರ್ಭದಲ್ಲಿ ಅನುಮಾನಗೊಂಡ ಪೊಲೀಸರು, ಟ್ರಕ್ ಅನ್ನು ಅಡ್ಡ ಹಾಕಿ ಪರಿಶೀಲಿಸಿದಾಗ ಶಸ್ತ್ರಾಸ್ತ್ರಗಳು ಪತ್ತೆಯಾಗಿವೆ.

ಟ್ರಕ್ ಕಾಶ್ಮೀರದಿಂದ ಪಂಜಾಬಿನ ಬಾಮ್ಯಾಳ್ ನತ್ತ ಹೊರಟಿತ್ತು ಎಂಬುದು ತಿಳಿದುಬಂದಿದೆ. ಬಂಧಿಸಲ್ಪಟ್ಟ ಮೂವರೂ ಕಾಶ್ಮೀರ ಮೂಲದವರಾಗಿದ್ದು ಅವರನ್ನು ತನಿಖೆಗೊಳಪಡಿಸಲಾಗುತ್ತಿದೆ.

3 Terrorists Arrested And AK-47 recovered in JK

ಸಂವಿಧದಾನದ 370 ನೇ ವಿಧಿಯನ್ನು ರದ್ದುಪಡಿಸಿ, ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ಹಿಂಪಡೆದ ಕೇಂದ್ರ ಸರ್ಕಾರದ ನಿರ್ಧಾರದ ನಂತರ ಗಡಿಯಲ್ಲಿ ಉಗ್ರ ಚಟುವಟಿಕೆ ಮತ್ತು ಒಳನುಸುಳುವಿಕೆಯ ಪ್ರಯತ್ನಗಳು ನಡೆಯುತ್ತಲೇ ಇವೆ. ಆಗಸ್ಟ್ ಮೊದಲ ವಾರ ಭಾರತೀಯ ಸೇನೆ ಪಾಕಿಸ್ತಾನದ ಹಲವು ಉಗ್ರರನ್ನು ಹತ್ಯೆಗೈದ ವಿಡಿಯೋವೊಂದು ಸೆಪ್ಟೆಂಬರ್ 9 ರಂದು ಮಾಧ್ಯಮಗಳಿಗೆ ಲಭಿಸಿತ್ತು.

ಭಾರತದಲ್ಲಿ ಉಗ್ರ ಚಟುವಟಿಕೆ ನಡೆಸಲು ಪಾಕ್ ಸೇನೆ ಮತ್ತು ಉಗ್ರರು ಹಲವು ರೀತಿಯ ಕೋಡ್ ಶಬ್ದಗಳನ್ನು ಬಳಸುತ್ತಿರುವ ಬಗ್ಗೆಯೂ ಗುಪ್ತಚರ ಇಲಾಖೆ ಮಾಹಿತಿ ನೀಡಿತ್ತು. ಇದೀಗ ಎಕೆ 47 ಮತ್ತು ಇತರ ಶಸ್ತ್ರಾಸ್ತ್ರಗಳು ಪತ್ತೆಯಾಗಿರುವುದು, ಮೂವರು ಶಂಕಿತ ಉಗ್ರರನ್ನು ವಶಕ್ಕೆ ಪಡೆದಿರುವುದು ಭಾರತದಲ್ಲಿ ಶಾಂತಿ ಕದಡಲು ಉಗ್ರರು ನಿರಂತರ ಪ್ರಯತ್ನ ನಡೆಸುತ್ತಿರುವುದಕ್ಕೆ ಸಾಕ್ಷಿಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+