Yuzvendra Chahal: ಯುಜ್ವೇಂದ್ರ ಚಹಾಲ್ 'ಕ್ಯೂಟ್' ಕಾಮೆಂಟ್, ತಾನಿಯಾ ಚಟರ್ಜಿ ವಿಡಿಯೋ ವೈರಲ್
Yuzvendra Chahal: ಭಾರತೀಯ ಕ್ರಿಕೆಟಿಗ ಯುಜ್ವೇಂದ್ರ ಚಹಾಲ್ ಅವರು ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಾಗುತ್ತಲಿದ್ದಾರೆ. ಇದೀಗ ಚಹಾಲ್ ನಟಿ ಮತ್ತು ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ತಾನಿಯಾ ಚಟರ್ಜಿ ಅವರಿಗೆ ಇನ್‌ಸ್ಟಾಗ್ರಾಮ್‌ನಲ್ಲಿ ಸಂದೇಶ ಕಳುಹಿಸಿದ್ದಾರೆ ಎಂಬ ಸುದ್ದಿ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.
ನಟಿ ತಾನಿಯಾ ಚಟರ್ಜಿ ಅವರು ಇತ್ತೀಗೆ ನಡೆದ ಸಂವಾದವೊಂದರಲ್ಲಿ ತಮ್ಮ ಫೋನ್ ತೋರಿಸುತ್ತಾ, ಯುಜ್ವೇಂದ್ರ ಚಹಾಲ್ ಅವರು ತಮಗೆ ಇನ್‌ಸ್ಟಾಗ್ರಾಮ್‌ನಲ್ಲಿ ಮೆಸೇಜ್ ಮಾಡಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ಚಹಾಲ್ ಅವರು ತಾನಿಯಾ ಅವರ ವಿಡಿಯೋ ಒಂದನ್ನು ನೋಡಿ 'ನೀವು ಕ್ಯೂಟ್ ಆಗಿದ್ದೀರಿ' ಎಂದು ಪ್ರತಿಕ್ರಿಯಿಸಿದ್ದಾರೆ ಎನ್ನಲಾಗಿದೆ.

ಚಹಾಲ್ ಸಂದೇಶದ ಬಗ್ಗೆ ತಾನಿಯಾ ಹೇಳಿದ್ದೇನು?
ಚಹಾಲ್ ಅವರ ಈ ಸಂದೇಶದ ಬಗ್ಗೆ ಮಾತನಾಡಿದ ತಾನಿಯಾ, "ಕ್ಯೂಟ್ ಎಂದು ಹೇಳುವುದು ಸಾಮಾನ್ಯ ವಿಷಯ, ನನಗೆ ಅನೇಕರು ಹೀಗೆ ಹೇಳುತ್ತಾರೆ" ಎಂದು ಹಗುರವಾಗಿ ಪ್ರತಿಕ್ರಿಯಿಸಿದ್ದಾರೆ. ಅಲ್ಲದೆ, ತಾವು ಆ ಮೆಸೇಜ್ ಅನ್ನು ತುಂಬಾ ತಡವಾಗಿ ಗಮನಿಸಿದ್ದರಿಂದ ತಕ್ಷಣವೇ ಯಾವುದೇ ಉತ್ತರ ನೀಡಿಲ್ಲ ಎಂದು ತಿಳಿಸಿದ್ದಾರೆ.
ಯಾರು ಈ ತಾನಿಯಾ ಚಟರ್ಜಿ?
ತಾನಿಯಾ ಚಟರ್ಜಿ ಅವರು 'ಗಂಧಿ ಬಾತ್' ಮತ್ತು 'ತಿತ್ಲಿಯಾನ್' ಅಂತಹ ಕೆಲವು ಹಿಂದಿ ವೆಬ್ ಸಿರೀಸ್‌ಗಳಲ್ಲಿ ನಟಿಸಿ ಹೆಸರು ಮಾಡಿದ್ದಾರೆ. ಇನ್ನೂ ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಇದ ಬಗ್ಗೆ ನೆಟ್ಟಿಗರಿಂದ ಮಿಶ್ರಪ್ರತಿಕ್ರಿಯೆಗಳು ಬಂದಿವೆ. ಕೆಲವರು "ಒಬ್ಬ ಕ್ರಿಕೆಟಿಗರಾಗಿ ಈ ರೀತಿ ಸಂದೇಶ ಕಳುಹಿಸುವುದು ಸರಿಯಲ್ಲ," ಎಂದು ಟೀಕಿಸಿದರೆ, ಇನ್ನು ಕೆಲವರು "ಕ್ಯೂಟ್" ಎಂದು ಹೇಳುವುದು ಸಾಮಾನ್ಯ ಪ್ರಶಂಸೆಯಾಗಿದೆ. ನಟಿ ಇದನ್ನು ತಮ್ಮ ಪ್ರಚಾರಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ," ಎಂದು ಕಿಡಿಕಾರಿದ್ದಾರೆ.
ಚಹಾಲ್ ವೈಯಕ್ತಿಕ ಜೀವನ
ಚಹಾಲ್ ಅವರ ವೈಯಕ್ತಿಕ ಜೀವನ ಈ ಹಿಂದೆಯೂ ಸುದ್ದಿಯಲ್ಲಿತ್ತು. ವಿಶೇಷವಾಗಿ ಅವರ ಮತ್ತು ಧನಶ್ರೀ ವರ್ಮಾ ಅವರ ವಿಚ್ಛೇದನದ ಸುದ್ದಿಗಳು ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಯಾಗಿದ್ದವು. ಇನ್ನೂ ಇದೀಗ ಪ್ರಸ್ತುತ ಐಪಿಎಲ್ 2026ರಲ್ಲಿ ಪಂಜಾಬ್ ಕಿಂಗ್ಸ್ ಪರ ಆಡುತ್ತಿರುವ ಯುಜ್ವೇಂದ್ರ ಚಹಲ್ ಅವರು ಈಗ ವೈರಲ್ ಆಗುತ್ತಿರುವ ವಿಡಿಯೋದ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ಅಥವಾ ಸ್ಪಷ್ಟನೆ ನೀಡಿಲ್ಲ.












Click it and Unblock the Notifications