Year Ender 2024: ಈ ವರ್ಷ ಅತಿ ಹೆಚ್ಚು ಆದಾಯ ತೆರಿಗೆ ಕಟ್ಟಿದ ಸೆಲೆಬ್ರಿಟಿಗಳು, ಕ್ರಿಕೆಟಿಗರು
2024 ಮುಗಿಯಲು ಕೆಲವೇ ದಿನಗಳಿದ್ದು 2025ರ ಹೊಸ ವರ್ಷದ ಸ್ವಾಗತಕ್ಕೆ ಜಗತ್ತೇ ಸಜ್ಜಾಗಿದೆ. ಹೊಸ ಕನಸು, ಭರವಸೆ, ಗುರಿಗಳೊಂದಿಗೆ ಮುನ್ನಡೆಯಲು ತಮ್ಮದೇ ಯೋಜನೆಗಳನ್ನು ಜನ ಹಾಕಿಕೊಂಡಿದ್ದಾರೆ. 2024 ಹಲವು ಸಿನಿಮಾ ತಾರೆಯರು, ಕ್ರಿಕೆಟಿಗರಿಗೆ ಹಣದ ಹೊಳೆಯನ್ನೇ ಹರಿಸಿದೆ, ಅದಕ್ಕೆ ಹಲವು ಕ್ರಿಕೆಟಿಗರು, ಸಿನಿಮಾ ತಾರೆಯರು ಕೋಟಿ ಕೋಟಿ ಆದಾಯ ತೆರಿಗೆ ಪಾವತಿಸಿ ಗಮನ ಸೆಳೆದಿದ್ದಾರೆ.
ಬಾಲಿವುಡ್ ನಟ ಶಾರುಖ್ ಖಾನ್ 2024ರಲ್ಲಿ ಅವರ ಯಾವುದೇ ಸಿನಿಮಾ ತೆರೆಕಾಣದೇ ಇದ್ದರೂ 2023ರಲ್ಲಿ ಬರೋಬ್ಬರಿ ಮೂರು ಸೂಪರ್ ಹಿಟ್ ಸಿನಿಮಾ ಕೊಟ್ಟಿದ್ದಾರೆ. ಪಠಾಣ್ ಸಾವಿರ ಕೋಟಿ ಲೂಟಿ ಮಾಡಿದ ಬೆನ್ನಲ್ಲೇ ತಮ್ಮದೇ ಸಂಸ್ಥೆಯಡಿ ನಿರ್ಮಾಣ ಮಾಡಿದ್ದ ಜವಾನ್ 1100 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಡುಂಕಿ ಸಿನಿಮಾದಲ್ಲಿ ನಟಿಸಲು ಕೂಡ ಶಾರುಖ್ ಕೋಟಿ ಕೋಟಿ ಸಂಭಾವನೆ ಪಡೆದಿದ್ದರು. ಇದೇ ಕಾರಣಕ್ಕೆ 2024ರಲ್ಲಿ ಅವರು ದೊಡ್ಡ ಮೊತ್ತದ ತೆರಿಗೆ ಪಾವತಿಸಿ ಅತಿ ಹೆಚ್ಚು ತೆರಿಗೆ ಪಾವತಿಸಿದ ಸೆಲೆಬ್ರಿಟಿ ಎನಿಸಿಕೊಂಡಿದ್ದಾರೆ.

ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿ ಅತಿ ಹೆಚ್ಚು ತೆರಿಗೆ ಪಾವತಿಸಿದ್ದಾರೆ. ಕ್ರಿಕೆಟ್ ಮಾತ್ರವಲ್ಲದ ಜಾಹೀರಾತು ಮೂಲಕವೂ ಕೋಟಿ ಕೋಟಿ ದುಡಿಯುವ ಕೊಹ್ಲಿ ಈ ವರ್ಷ 66 ಕೋಟಿ ರೂಪಾಯಿ ತೆರಿಗೆ ಪಾವತಿ ಮಾಡಿದ್ದಾರೆ. ಹಾಗಾದರೆ ಯಾವೆಲ್ಲಾ ಸೆಲೆಬ್ರಿಟಿಗಳು ಎಷ್ಟು ತೆರಿಗೆ ಕಟ್ಟಿದ್ರು ಎನ್ನುವ ಮಾಹಿತಿ ಇಲ್ಲಿದೆ.
ಶಾರುಖ್ ಖಾನ್ - ₹92 ಕೋಟಿ
ದಳಪತಿ ವಿಜಯ್ - ₹80 ಕೋಟಿ
ಸಲ್ಮಾನ್ ಖಾನ್ - ₹75 ಕೋಟಿ
ಅಮಿತಾಬ್ ಬಚ್ಚನ್ - ₹71 ಕೋಟಿ
ವಿರಾಟ್ ಕೊಹ್ಲಿ - ₹66 ಕೋಟಿ
ಅಜಯ್ ದೇವಗನ್ - ₹42 ಕೋಟಿ
ಮಹೇಂದ್ರ ಸಿಂಗ್ ಧೋನಿ - ₹38 ಕೋಟಿ
ರಣಬೀರ್ ಕಪೂರ್ - ₹36 ಕೋಟಿ
ಸಚಿನ್ ತೆಂಡೂಲ್ಕರ್ ಮತ್ತು ಹೃತಿಕ್ ರೋಷನ್ - ತಲಾ ₹28 ಕೋಟಿ
ಕಪಿಲ್ ಶರ್ಮಾ - ₹26 ಕೋಟಿ
ಸೌರವ್ ಗಂಗೂಲಿ - ₹23 ಕೋಟಿ
ಕರೀನಾ ಕಪೂರ್ - ₹ 20 ಕೋಟಿ
ಶಾಹಿದ್ ಕಪೂರ್, ಮೋಹನ್ ಲಾಲ್, ಮತ್ತು ಅಲ್ಲು ಅರ್ಜುನ್ - ತಲಾ ₹14 ಕೋಟಿ
ಹಾರ್ದಿಕ್ ಪಾಂಡ್ಯ - ₹13 ಕೋಟಿ
ಸಾವಿರ ಕೋಟಿ ಒಡೆಯ ಕೊಹ್ಲಿ
ವಿರಾಟ್ ಕೊಹ್ಲಿ ಕ್ರಿಕೆಟ್‌ನಿಂದಲೇ ಕೋಟಿ ಕೋಟಿ ಆದಾಯ ಹೊಂದಿದ್ದಾರೆ. ಅವರ ಒಟ್ಟು ಆಸ್ತಿ ಮೌಲ್ಯ 2024ರ ವೇಳೆಗೆ 1000 ಕೋಟಿ ಮೀರುತ್ತದೆ ಎಂದು ಅಂದಾಜಿಸಲಾಗಿದೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಯಿಂದ ಅವರಿಗೆ ನೂರಾರು ಕೋಟಿ ರೂಪಾಯಿ ಆದಾಯ ಸಿಕ್ಕಿದೆ.
ಪೂಮಾ, ಆಡಿ ಮತ್ತು ಎಂಆರ್ ಎಫ್‌ನಂತಹ ಕಂಪನಿಗಳಿಗೆ ಉತ್ಪನ್ನಗಳ ರಾಯಭಾರಿಯಾಗಿದ್ದಾರೆ. 'ಒನ್8' ಸೇರಿದಂತೆ ಹಲವಾರು ವ್ಯಾಪಾರ ಉದ್ಯಮಗಳಲ್ಲಿ ಕೊಹ್ಲಿ ಪಾಲನ್ನು ಹೊಂದಿದ್ದಾರೆ.












Click it and Unblock the Notifications