30 ವಯಸ್ಸಿಗೆ ಸಾವಿಗೀಡಾದ ಮಾಜಿ WWE ಕುಸ್ತಿಪಟು ಸಾರಾ ಲೀ

ಮಾಜಿ ಡಬ್ಲ್ಯೂಡಬ್ಲ್ಯೂಇ(ವರ್ಲ್ಡ್ ರೆಸ್ಲಿಂಗ್ ಎಂಟರ್‌ಟೈನ್‌ಮೆಂಟ್) ಕುಸ್ತಿಪಟು ಸಾರಾ ಲೀ ಶುಕ್ರವಾರ ನಿಧನರಾಗಿದ್ದಾರೆ. ಅವರಿಗೆ ಇನ್ನು 30 ವರ್ಷ ವಯಸ್ಸಾಗಿತ್ತು. ಈ ದುಃಖದ ವಿಷಯವನ್ನು ಲೀ ತಾಯಿ ಟೆರ್ರಿ ಲೀ ಸಾಮಾಜಿಕ ಜಾಲಾತಾಣದಲ್ಲಿ ಪೋಸ್ಟ್ ಮಾಡುವ ಮೂಲಕ ತಿಳಿಸಿದ್ದಾರೆ.

ಸಾರಾ ಲೀ ಮೂಲ ಹೆಸರು ಸಾರಾ ವೆಸ್ಟನ್. ಆದರೆ WWE ರಿಂಗ್‌ನಲ್ಲಿ ಅವರನ್ನು ಸಾರಾ ಲೀ ಎಂದು ಕರೆಯಲಾಗುತ್ತಿತ್ತು. 2015 ರ ವರ್ಲ್ಡ್ ರೆಸ್ಲಿಂಗ್ ಎಂಟರ್‌ಟೈನ್‌ಮೆಂಟ್ ಸ್ಪರ್ಧೆಗೆ ಸಾರಾ ಲೀ ಪದಾರ್ಪಣೆ ಮಾಡಿದ್ದರು. ಅವರು ಇಷ್ಟು ಚಿಕ್ಕ ವಯಸ್ಸಿಗೆ ಸಾವನ್ನಪ್ಪಿರುವ ಸುದ್ದಿ WWE ಕುಟುಂಬ ಆಘಾತವನ್ನುಂಟು ಮಾಡಿದೆ.

"ಸಾರಾ ಲೀ ಇನ್ನು ಮುಂದೆ ಈ ಜಗತ್ತಿನಲ್ಲಿಲ್ಲ ಎಂದು ಹೇಳಲು ತುಂಬಾ ನೋವಾಗುತ್ತಿದೆ. ಸಾರಾ ವೆಸ್ಟನ್ ಜೀಸಸ್ ಜಾಗಕ್ಕೆ ಸೇರಿಕೊಂಡಿದ್ದಾಳೆ. ನಾವೆಲ್ಲರೂ ಆಘಾತಕ್ಕೊಳಗಾಗಿದ್ದೇವೆ . ಇಂತಹ ಪರಿಸ್ಥಿತಿಯಲ್ಲಿ, ಈ ದುಃಖದ ಸಮಯದಲ್ಲಿ ನೀವೆಲ್ಲರೂ ನಮ್ಮ ಕುಟುಂಬದೊಂದಿಗೆ ದುಃಖಿಸಬೇಕೆಂದು ನಾವು ನಾವು ಕೇಳಿಕೊಳ್ಳುತ್ತೇವೆ'' ಎಂದು ಮನವಿ ಮಾಡಿಕೊಂಡಿದ್ದಾರೆ.

WWE Super star Sara Lee Dies at 30

ಆದರೆ, ಲೀ ಹೇಗೆ ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ಇದುವರೆಗೂ ಬಹಿರಂಗಗೊಂಡಿಲ್ಲ. ಸಾರಾ ಸಾವಿನಿಂದ ಅಭಿಮಾನಿಗಳು ದುಃಖಿತರಾಗಿದ್ದಾರೆ. ಈ ಮಹಿಳಾ ರೆಸ್ಲರ್ ಎರಡು ದಿನಗಳ ಹಿಂದೆ ಜಿಮ್ ಆರಂಭಿಸಿದ್ದರು. ಅದರ ಚಿತ್ರಗಳನ್ನೂ ಅವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು.

"ಸಾರಾ ಲೀ ಅವರ ನಿಧನದ ಸುದ್ದಿಯಿಂದ ಇಡೀ WWE ಕುಟುಂಬವು ದುಃಖಿತವಾಗಿದೆ. ಸಾರಾ ಅವರು ಕ್ರೀಡಾ ಜಗತ್ತಿನಲ್ಲಿ ಅನೇಕರಿಗೆ ಸ್ಫೂರ್ತಿಯಾಗಿದ್ದಾರೆ. ಅವರ ಕುಟುಂಬ, ಸ್ನೇಹಿತರು ಮತ್ತು ಅಭಿಮಾನಿಗಳಿಗೆ WWE ತನ್ನ ಹೃತ್ಪೂರ್ವಕ ಸಂತಾಪವನ್ನು ವ್ಯಕ್ತಪಡಿಸುತ್ತದೆ" ಎಂದು WWE ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಸಂತಾಪ ಸೂಚಿಸಿದೆ.

WWE ಟಫ್ ಎನಫ್ ಆರನೇ ಸೀಸನ್‌ನ ವಿಜೇತೆಯಾಗಿದ್ದ ಸಾರಾ ಡಿಸೆಂಬರ್ 30 ,2017ರಂದು ಮಾಜಿ WWE ಸೂಪರ್‌ಸ್ಟಾರ್ ವೆಸ್ಲಿ ಬ್ಲೇಕ್ ಅವರನ್ನು ವಿವಾಹವಾದರು. ಈ ದಂಪತಿಗೆ ಮೂವರು ಮಕ್ಕಳಿದ್ದಾರೆ ಎಂದು ತಿಳಿದುಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+