WPL 2026 RCB: ಯುಪಿ ವಾರಿಯರ್ಸ್ ವಿರುದ್ಧ ಆರ್‌ಸಿಬಿ ಸಂಭಾವ್ಯ ಪ್ಲೇಯಿಂಗ್ 11
WPL 2026 RCB: ಈಗಾಗಲೇ ಡಬ್ಲ್ಯೂಪಿಎಲ್ 2026 ಉದ್ಘಾಟನಾ ಪಂದ್ಯದಲ್ಲಿ ಆರ್‌ಸಿಬಿಯು ಮುಂಬೈ ಇಂಡಿಯನ್ಸ್ ವಿರುದ್ಧ ಗೆದ್ದು ಬೀಗಿದೆ. ಇನ್ನೂ ಇಂದು (ಜನವರಿ 12) ಎರಡನೇ ಪಂದ್ಯವನ್ನು ಯುಪಿ ವಾರಿಯರ್ಸ್ ಮೇಲೆ ಆಡಲಿದೆ. ಹಾಗಾದ್ರೆ ಪ್ಲೇಯಿಂಗ್ 11 ಹೇಗಿರಲಿದೆ ಹಾಗೂ ಸ್ಥಳ, ಸಮಯಗಳ ಕುರಿತು ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಡಬ್ಲ್ಯೂಪಿಎಲ್ 2026 ಚೊಚ್ಚಲ ಪಂದ್ಯದಲ್ಲಿ ಆರ್‌ಸಿಬಿಯು ಮುಂಬೈ ಇಂಡಿಯನ್ಸ್ ವಿರುದ್ಧ ಜಯಭೇರಿ ಬಾರಿಸಿತು. ಮುಂಬೈ ಇಂಡಿಯನ್ಸ್ ವಿರುದ್ಧ ಗೆಲುವು ಸಾಧಿಸಲು ಪ್ರಮುಖ ಕಾರಣವೇ ನಾಡಿನ್ ಡಿ ಕ್ಲರ್ಕ್ ಮಾರಕ ಬೌಲಿಂಗ್ ದಾಳಿ ಹಾಗೂ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ. ಕೊನೆಯವರೆಗೂ ಏಕಾಂಗಿಯಾಗಿ ನಿಂತು ಸೋಲುವ ಹಂತ ತಲುಪಿದ್ದ ಆರ್‌ಸಿಬಿಯನ್ನು ಗೆಲುವಿನ ದಡ ಸೇರಿದರು.

ಅಂದಿನ ಪಂದ್ಯದಲ್ಲಿ ನಾಡಿನ್ ಡಿ ಕ್ಲರ್ಕ್ ಮಾರಕ ಬೌಲಿಂಗ್ ದಾಳಿ ನಡೆಸಿ ಮುಂಬೈ ಇಂಡಿಯನ್ಸ್ ತಂಡದ ನಾಲ್ಕು ವಿಕೆಟ್ ಕಬಳಿಸಿದರು. ಬಳಿಕ ಬ್ಯಾಟಿಂಗ್‌ನಲ್ಲೂ ಸಹ ಉತ್ತಮ ಪ್ರದರ್ಶನ ತೋರುವ ಮೂಲಕ ಆರ್‌ಸಿಬಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು. ಹಾಗೆಯೇ ಇಂದು (ಜನವರಿ 12) ಸಹ ಇವರ ಮೇಲೆ ಹೆಚ್ಚಿನ ನಿರೀಕ್ಷೆ ಇಡಲಾಗಿದೆ. ಇನ್ನೂ ಕಳೆದ ಬಾರಿ ಗಾಯದಿಂದ ಆಲ್‌ರೌಂಡರ್ ಆಟಗಾರ್ತಿ ಪೂಜಾ ವಸ್ತ್ರಕರ್ ಹೊರಗುಳಿದ ಕಾರಣ ಬೌಲರ್ ಲಿನ್ಸೆ ಸ್ಮಿತ್‌ಗೆ ಅವಕಾಶ ನೀಡಲಾಗಿತ್ತು.
ಆ ವೇಳೆ ಲಿನ್ಸೆ ಸ್ಮಿತ್ ಅವರಿಂದ ನಿರೀಕ್ಷಿಸಿದಷ್ಟು ಪ್ರದರ್ಶನ ಕಂಡುಬರಲಿಲ್ಲ. ಇಂದೂ ಕೂಡ ಆಲ್‌ರೌಂಡರ್ ಪೂಜಾ ವಸ್ತ್ರಕರ್ ಹೊರಗುಳಿದಿದ್ದಾರೆ. ಇವರನ್ನು ಆರ್‌ಸಿಬಿ ಹರಾಜಿನ ವೇಳೆ ₹85 ಲಕ್ಷ ನೀಡಿ ಖರೀದಿ ಮಾಡಿತ್ತು. ಯುಪಿ ವಾರಿಯರ್ಸ್ ವಿರುದ್ಧದ ಪಂದ್ಯದಲ್ಲಿ ಬೌಲರ್ ಲಿನ್ಸೆ ಸ್ಮಿತ್ ಅವರನ್ನೇ ಮುಂದುವರೆಸಲಾಗಿದೆ. ಹಾಗಾದ್ರೆ, ಇಂದು ಇವರ ಪ್ರದರ್ಶನ ಹೇಗಿರಲಿದೆ ಎಂದು ಕಾದುನೋಡಬೇಕಿದೆ.
ಆರ್‌ಸಿಬಿ ಸಂಭಾವ್ಯ ಪ್ಲೇಯಿಂಗ್ 11: ಸ್ಮೃತಿ ಮಂಧಾನ (ನಾಯಕಿ), ಗ್ರೇಸ್ ಹ್ಯಾರಿಸ್, ದಯಾಲನ್ ಹೇಮಲತಾ, ರಿಚಾ ಘೋಷ್ (ವಿಕೆಟ್ ಕೀಪರ್), ರಾಧಾ ಯಾದವ್, ನಾಡಿನ್ ಡಿ ಕ್ಲರ್ಕ್, ಅರುಂಧತಿ ರೆಡ್ಡಿ, ಶ್ರೇಯಾಂಕಾ ಪಾಟೀಲ್, ಪ್ರೇಮಾ ರಾವತ್, ಲಿನ್ಸೆ ಸ್ಮಿತ್, ಲಾರೆನ್ ಬೆಲ್.
ಯುಪಿ ವಾರಿಯರ್ಸ್ ಸಂಭಾವ್ಯ ಪ್ಲೇಯಿಂಗ್ 11: ಮೆಗ್ ಲ್ಯಾನಿಂಗ್, ದೀಪ್ತಿ ಶರ್ಮಾ, ಫೋಬೆ ಲಿಚ್‌ಫೀಲ್ಡ್, ಕಿರಣ್ ನವಗಿರೆ, ಹರ್ಲೀನ್ ಡಿಯೋಲ್, ಸೋಫಿ ಎಕ್ಲೆಸ್ಟೋನ್, ಡಿಯಾಂಡ್ರಾ ಡಾಟಿನ್, ಶಿಖಾ ಪಾಂಡೆ, ಆಶಾ ಸೋಭಾನ, ಶಿಪ್ರಾ ಗಿರಿ (ವಿಕೆಟ್ ಕೀಪರ್), ಕ್ರಾಂತಿ ಗೌಡ್.
ಇದುವರೆಗೂ ಆರ್‌ಸಿಬಿ vs ಯುಪಿ ವಾರಿಯರ್ಸ್ ಮುಖಾಮುಖಿ
* ಒಟ್ಟು ಪಂದ್ಯಗಳು: 6
* ಆರ್‌ಸಿಬಿ ಗೆಲುವು: 3
* ಯುಪಿ ವಾರಿಯರ್ಸ್ ಗೆಲುವು: 3
ಆರ್‌ಸಿಬಿ ತಂಡ: ಸ್ಮೃತಿ ಮಂಧಾನ (ನಾಯಕಿ), ರಿಚಾ ಘೋಷ್ (ವಿಕೆಟ್ ಕೀಪರ್), ಸಯಾಲಿ ಸತ್ಘರೆ, ಶ್ರೇಯಾಂಕಾ ಪಾಟೀಲ್, ಜಾರ್ಜಿಯಾ ವೋಲ್, ನಡಿನ್ ಡಿ ಕ್ಲರ್ಕ್, ರಾಧಾ ಯಾದವ್, ಲಾರೆನ್ ಬೆಲ್, ಲಿನ್ಸೆ ಸ್ಮಿತ್, ಪ್ರೇಮಾ ರಾವತ್, ಅರುಂಧತಿ ರೆಡ್ಡಿ, ಪೂಜಾ ವಸ್ತ್ರಾಕರ್, ಗ್ರೇಸ್ ಹ್ಯಾರಿಸ್, ಗೌತಮಿ ನಾಯಕ್, ಪ್ರತ್ಯೂಷ ಕುಮಾರ್, ದಯಾಲನ್ ಹೇಮಲತಾ.
ಯುಪಿ ವಾರಿಯರ್ಸ್ ತಂಡ: ಮೆಗ್ ಲ್ಯಾನಿಂಗ್ (ನಾಯಕಿ), ಶ್ವೇತಾ ಸೆಹ್ರಾವತ್, ದೀಪ್ತಿ ಶರ್ಮಾ, ಸೋಫಿ ಎಕ್ಲೆಸ್ಟೋನ್, ಫೋಬೆ ಲಿಚ್‌ಫೀಲ್ಡ್, ಕಿರಣ್ ನವಗಿರೆ, ಹರ್ಲೀನ್ ಡಿಯೋಲ್, ಕ್ರಾಂತಿ ಗೌಡ್, ಆಶಾ ಸೋಭಾನ, ಡಿಯಾಂಡ್ರಾ ಡಾಟಿನ್, ಶಿಖಾ ಪಾಂಡೆ, ಶಿಪ್ರಾ ಗಿರಿ, ಸಿಮ್ರಾನ್ ಶೇಖ್, ಕ್ಲೋಯ್ ಟ್ರಯಾನ್, ಸುಮನ್ ಮೀನಾ, ಜಿ ತ್ರಿಶಾ, ಪ್ರತಿಕಾ ರಾವಲ್, ಚಾರ್ಲಿ ನಾಟ್.
ಪಂದ್ಯದ ಸಮಯ, ಸ್ಥಳ, ನೇರಪ್ರಸಾರದ ವಿವರ
* ಸ್ಥಳ: ನವಿ ಮುಂಬೈನ ಡಾ. ಡಿ.ವೈ. ಪಾಟೀಲ್ ಸ್ಪೋರ್ಟ್ಸ್ ಅಕಾಡೆಮಿಯಲ್ಲಿ ನಡೆಯಲಿದೆ.
* ಸಮಯ: ಸಂಜೆ 7.30 (ಭಾರತೀಯ ಕಾಲಮಾನ)ಕ್ಕೆ
* ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್, JioHotstar ಅಪ್ಲಿಕೇಶನ್ ಮತ್ತು ವೆಬ್‌ಸೈಟ್












Click it and Unblock the Notifications