Women's Asia Cup: ಶೆಫಾಲಿ ಅಬ್ಬರದ ಆಟ: ಟೀಮ್ ಇಂಡಿಯಾ ಸೆಮಿಫೈನಲ್ಸ್‌ಗೆ

ಮಹಿಳಾ ಏಷ್ಯಾ ಕಪ್‌ ಟಿ20 ಕ್ರಿಕೆಟ್‌ ಟೂರ್ನಿಯಲ್ಲಿ ಭಾರತ ಭರ್ಜರಿ ಪ್ರದರ್ಶನ ನೀಡಿದ್ದು 82 ರನ್‌ಗಳಿಂದ ನೇಪಾಳ ತಂಡವನ್ನು ಮಣಿಸಿ, ಸೆಮಿಫೈನಲ್‌ ಪ್ರವೇಶಿಸಿದೆ.

ಮೊದಲು ಬ್ಯಾಟ್‌ ಮಾಡಿದ ಟೀಮ್ ಇಂಡಿಯಾ 20 ಓವರ್‌ಗಳಲ್ಲಿ 3 ವಿಕೆಟ್‌ಗೆ 178 ರನ್‌ ಸೇರಿಸಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ನೇಪಾಳ 20 ಓವರ್‌ಗಳಲ್ಲಿ 9 ವಿಕೆಟ್‌ ಕಳೆದುಕೊಂಡು 96 ರನ್‌ ಸೇರಿಸಲು ಮಾತ್ರ ಸೀಮಿತವಾಯಿತು. ಎ ಗುಂಪಿನಲ್ಲಿ ಆಡಿದ ಮೂರು ಪಂದ್ಯಗಳನ್ನು ಗೆದ್ದ ಭಾರತ ಟೂರ್ನಿಯ ಸೆಮಿಫೈನಲ್‌ ಹಂತವನ್ನು ಪ್ರವೇಶಿಸಿದೆ.

Women s Asia Cup Shafali s Sensational Performance Leads Team India to Semi-Finals

ಟೀಮ್ ಇಂಡಿಯಾದ ಆರಂಭ ಭರ್ಜರಿಯಾಗಿತ್ತು. ಆರಂಭಿಕರಾದ ಶೆಫಾಲಿ ವರ್ಮಾ ಹಾಗೂ ದಯಾಳನ್ ಹೇಮಲತಾ ಸೊಗಸಾದ ಜೊತೆಯಾಟದ ಕಾಣಿಕೆ ನೀಡಿದರು. ಈ ಜೋಡಿಯನ್ನು ಬೇರ್ಪಡಿಸಲು ನೇಪಾಳ ಬೌಲರ್‌ಗಳು ವಿಫಲರಾದರು. ಈ ಜೋಡಿ 13.6 ಓವರ್‌ಗಳಲ್ಲಿ 122 ರನ್‌ ಸೇರಿಸಿ ಅಬ್ಬರಿಸಿತು. ದಯಾಳನ್ ಹೇಮಲತಾ 47 ರನ್‌ ಬಾರಿಸಿದ್ದಾಗ ಔಟ್ ಆದರು.

ಶೆಫಾಲಿ 81

ಆರಂಭಿಕ ಆಟಗಾರ್ತಿ ಶೆಫಾಲಿ ವರ್ಮಾ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಇವರು 48 ಎಸೆತಗಳಲ್ಲಿ 12 ಬೌಂಡರಿ, 1 ಸಿಕ್ಸರ್‌ ಸಹಾಯದಿಂದ 81 ರನ್‌ ಬಾರಿಸಿ ಅಬ್ಬರಿಸಿದರು.

ಮಧ್ಯಮ ಕ್ರಮಾಂಕದಲ್ಲಿ ಜೆಮಿಮಾ ರಾಡ್ರಿಗಸ್‌ ಬಿರುಸಿನ ಆಟವಾಡಿ 5 ಬೌಂಡರಿ ನೆರವಿನಿಂದ ಅಜೇಯ 28 ರನ್‌ ಬಾರಿಸಿ ಅಜೇಯರಾಗಿ ಉಳಿದರು.

Women s Asia Cup Shafali s Sensational Performance Leads Team India to Semi-Finals

ಬಿಗುವಿನ ದಾಳಿ

ಟೀಮ್ ಇಂಡಿಯಾ ವನಿತೆಯರು ಭರ್ಜರಿ ಪ್ರದರ್ಶನ ನೀಡಿತು. ಭಾರತ ತಂಡದ ಬಿಗುವಿನ ದಾಳಿಗೆ ನೇಪಾಳ ವನಿತೆಯರು ರನ್‌ ಗಳಿಸಲು ಪರದಾಟ ನಡೆಸಿದರು. ನೇಪಾಳ ಪರ ಸೀತಾ ರಾಣಾ ಮಗರ್ (18), ಇಂದು ಬರ್ಮಾ (14), ರುಬಿನಾ ಛೆಟ್ರಿ (15), ಬಿಂದು ರಾವಲ್ (ಅಜೇಯ17) ಡಬಲ್‌ ಡಿಜಿಟ್‌ ಮುಟ್ಟಿದ್ದು ಬಿಟ್ಟರೆ, ಉಳಿದ ಆಟಗಾರ್ತಿಯರು, ಒಂದಂಕ್ಕಿಯಲ್ಲಿ ಆಟ ಮುಗಿಸಿದರು.

ಟೀಮ್ ಇಂಡಿಯಾ ಪರ ದೀಪ್ತಿ ಶರ್ಮಾ 3, ಅರುಂಧತಿ ರೆಡ್ಡಿ ಹಾಗೂ ರಾಧಾ ಯಾದವ್ ತಲಾ ಎರಡು ವಿಕೆಟ್ ಕಬಳಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+