Get Updates
Get notified of breaking news, exclusive insights, and must-see stories!

RCB Virat Kohli: ಆರ್‌ಸಿಬಿ ಸ್ಟಾರ್ ಕ್ರಿಕೆಟರ್ ವಿರಾಟ್‌ ಕೊಹ್ಲಿ ಕೈಬಿಡುವ ನಿರ್ಧಾರ ಮಾಡಿದ್ದೇಕೆ?

RCB Virat Kohli: ಐಪಿಎಲ್‌ 2025 ಫೈನಲ್‌ ಪಂದ್ಯದಲ್ಲಿ ಆರ್‌ಸಿಬಿ ರಜತ್ ಪಾಟಿದಾರ್‌ ನಾಯಕತ್ವದಲ್ಲಿ ಭರ್ಜರಿಯಾಗಿ ಗೆದ್ದಿತು. ಈ ಮೂಲಕ 17 ವರ್ಷಗಳ ಬಳಿಕ ಮೊದಲ ಬಾರಿ ಟ್ರೋಫಿಗೆ ಮುತ್ತಿಟ್ಟಿತು. ಈ ನಡುವೆಯೇ ತಂಡಕ್ಕೆ ಕಳಸದಂತಿದ್ದ ವಿರಾಟ್‌ ಕೊಹ್ಲಿ ಅವರನ್ನು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಪ್ರಾಂಚೈಸಿ ವಜಾಗೊಳಿಸುವ ನಿರ್ಧಾರಕ್ಕಿಳಿದಿರುವ ಬಗ್ಗೆ ಸುದ್ದಿಯೊಂದು ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಹಾಗಾದ್ರೆ ಕಾರಣ ಏನು ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ..

ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡ ಆಟಿದ 17 ಸೀಸನ್‌ನಲ್ಲಿ ಒಂದೇ ಒಂದು ಟ್ರೋಫಿ ಗೆದ್ದಿರಲಿಲ್ಲ. ಆದರೆ, ಈ ಬಾರಿ 18ನೇ ಸೀಸನ್‌ ಫೈನಲ್‌ ಪಂದ್ಯದಲ್ಲಿ ಪಂಜಾಬ್‌ ಕಿಂಗ್ಸ್‌ ತಂಡವನ್ನು ಬಗ್ಗುಬಡಿದು ಭರ್ಜರಿಯಾಗಿ ಗೆಲುವು ಸಾಧಿಸಿತು. ಈ ಮೂಲಕ ಟ್ರೋಫಿ ಇಲ್ಲ ಎಂಬ ಕೊರಗಿಗೆ ತೆರೆ ಎಳೆಯಿತು. ಈ ನಡುವೆಯೇ ಇದೀಗ ಆರ್‌ಸಿಬಿ ಕಳಸ ವಿರಾಟ್‌ ಕೊಹ್ಲಿ ಕೈಬಿಡುವ ಬಗ್ಗೆ ಶಾಕಿಂಗ್‌ ಸುದ್ದಿಯೊಂದು ಹರಿದಾಡುತ್ತಿದೆ.

Why did RCB decide to release Virat Kohli Here s the real truth

ವಿಶ್ವದ ಅತೀ ದೊಡ್ಡ ಲೀಗ್‌ಗಳಲ್ಲಿ ಐಪಿಎಲ್‌ ಒಂದಾಗಿದೆ. ಹಾಗೆಯೇ ಆರ್‌ಸಿಬಿಯು ಐಪಿಎಲ್‌ನಲ್ಲಿ ಅತೀ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ತಂಡವಾಗಿದೆ. ಅಷ್ಟೇ ಅಲ್ಲದೆ, ಬ್ರಾಂಡ್‌ ವ್ಯಾಲ್ಯೂನಲ್ಲಿಯೂ ನಂಬರ್ ಒನ್‌ ಪಟ್ಟ ಕೂಡ ಅಲಂಕರಿಸಿದೆ. ಇದಕ್ಕೆಲ್ಲ ಕಾರಣನೇ ವಿರಾಟ್‌ ಕೊಹ್ಲಿ ಅಂದ್ರೆ ತಪ್ಪಾಗಲಾರದು. ಅವರ ನಾಯಕತ್ವದ ಸಂದರ್ಭದಲ್ಲಿ ಅವರು ಉತ್ತಮ ಪ್ರದರ್ಶನ ತೋರಿದರೂ ಸಹ ಟ್ರೋಫಿ ಗೆದ್ದಿಲ್ಲದಿರಬಹುದು. ಆದರೆ, ತಂಡಕ್ಕೆ ಅವರ ಕೊಡುಗೆ ಮಾತ್ರ ಅಪಾರವಾಗಿದೆ. ಅಲ್ಲದೆ, ಆರ್‌ಸಿಬಿಗೆ ಅವರು ಕಳಸ ಇದ್ದಂತೆ.

ವಿರಾಟ್‌ ಕೊಹ್ಲಿ ನಾಯಕತ್ವ ಸ್ಥಾನದಲ್ಲಿದ್ದಾಗ ಆರ್‌ಸಿಬಿ ಟ್ರೋಫಿ ಗೆದ್ದಿಲ್ಲ. ಇದು ರಜತ್ ಪಾಟೀದಾರ್ ನಾಯಕತ್ವದಲ್ಲಿ ನೆರವೇರಿದೆ. ಆದರೂ, ತಂಡದಲ್ಲಿ ಕೊಹ್ಲಿ ಇದ್ದರೆ, ಎಲ್ಲಾ ಆಟಗಾರರಿಗೂ ಎನರ್ಜಿ ಬೂಸ್ಟ್‌ ತುಂಬುತ್ತಾರೆ. ನಾಯಕತ್ವ ಸ್ಥಾನದಿಂದ ಕೆಳಗಿಳಿದರೂ ಅವರು ತಂಡಕ್ಕೆ ಸಾಕಷ್ಟು ಶ್ರಮಿಸುತ್ತಲಿದ್ದಾರೆ. ಈ ನಡುವೆಯೇ ಅಭಿಮಾನಿಗಳನ್ನು ಆಘಾತಗೊಳಿಸುವ ಸಂಗತಿಯನ್ನ ಮಾಜಿ ಆಲ್‌ರೌಂಡರ್ ಮೊಯಿನ್ ಅಲಿ ಬಿಚ್ಚಿಟ್ಟಿದ್ದಾರೆ..

ಕೈಬಿಡುವ ಅಸಲಿ ಸತ್ಯ ಇಲ್ಲಿದೆ: 2019ರಲ್ಲಿ ವಿರಾಟ್ ಕೊಹ್ಲಿ ಅವರನ್ನು ನಾಯಕತ್ವ ಸ್ಥಾನದಿಂದ ಕೆಳಗಿಳಿಸಿ ಪಾರ್ಥಿವ್ ಪಟೇಲ್ ಅವರನ್ನು ನಾಯಕನನ್ನಾಗಿ ಮಾಡುವ ಸಾಧ್ಯತೆ ಇತ್ತು. ಗ್ಯಾರಿ ಕರ್ಸ್ಟನ್ ಅವರ ತರಬೇತಿ ವೇಳೆ ತಂಡದೊಳಗೆ ನಡೆದ ಚರ್ಚೆಗಳು ಪಾರ್ಥಿವ್ ಪಟೇಲ್‌ ಅವರನ್ನು ನಾಯಕನನ್ನಾಗಿ ಮಾಡಲು ಗಂಭೀರವಾಗಿ ಪರಿಗಣಿಸಿದ್ದವು ಎಂದು ಹೇಳಿದ್ದಾರೆ ಅಂತಾ ವರದಿ ಆಗಿದೆ.

ಡೇನಿಯಲ್ ವೆಟ್ಟೋರಿ ಬಳಿಕ 2013ರಲ್ಲಿ ಪೂರ್ಣಾವಧಿ ನಾಯಕನ ಪಟ್ಟ ಅಲಂಕರಿಸಿ ವಿರಾಟ್‌ ಕೊಹ್ಲಿ, ಲೀಗ್‌ನ ಅತೀ ದೊಡ್ಡ ಬ್ಯಾಟಿಂಗ್ ಸೂಪರ್‌ ಸ್ಟಾರ್‌ಗಳಲ್ಲಿ ಒಬ್ಬರಾಗಿದ್ದಾರೆ. ಆದರೆ, ಅವರ ನಾಯಕತ್ವದ ಬಗ್ಗೆ ದೊಡ್ಡ ಮಟ್ಟದಲ್ಲಿ ಟೀಕೆಗಳು ವ್ಯಕ್ತವಾದವು. 2016ರಲ್ಲಿ ಆರ್‌ಸಿಬಿಯನ್ನು ಫೈನಲ್‌ಗೆ ತೆಗೆದುಕೊಂಡುಹೋದ ಬಳಿಕ, ಫ್ರಾಂಚೈಸಿ ತೀವ್ರ ಕುಸಿತ ಕಂಡಿತು ಎಂದು ಹೇಳಿದ್ದಾರೆ.

2017ರಲ್ಲಿ 8ನೇ ಸ್ಥಾನ, 2018 ರಲ್ಲಿ 6 ಹಾಗೂ 2019ರಲ್ಲಿ ಮತ್ತೆ ಕೊನೇ ಸ್ಥಾನದಲ್ಲಿ ಉಳಿದುಕೊಂಡಿತು. 2018ರಿಂದ 2020ರ ವರೆಗೆ ಆರ್‌ಸಿಬಿ ಪರ ಆಡಿದ್ದ ಮೊಯಿನ್ ಹೆಚ್ಚುತ್ತಿದ್ದ ಒತ್ತಡದ ನಡುವೆಯೇ ತಂಡದ ಆಡಳಿತ ನಾಯಕತ್ವ ಬದಲಾವಣೆಗೆ ಮುಂದಾಗಿತ್ತು ಎಂದು ಹೇಳಿದ್ದಾರೆ.

ಗ್ಯಾರಿ ಕರ್ಸ್ಟನ್ ಇದ್ದ ಕೊನೇ ವರ್ಷದಲ್ಲಿ ಪಾರ್ಥಿವ್ ನಾಯಕನಾಗುವ ಸಾಧ್ಯತೆ ಇತ್ತು. ಅವರಿಗೆ ಅದ್ಭುತವಾಗಿ ಕ್ರಿಕೆಟ್ ಆಡುವ ಅನುಭವ ಇತ್ತು. ಆ ವೇಳೆ ಅದೇ ಮಾತು ಕೇಳಿಬರುತ್ತಿತ್ತು. ಆದರೆ, ಅದು ಏಕೆ ಕಾರ್ಯರೂಪಕ್ಕೆ ಬರಲಿಲ್ಲ ಎಂದು ನನಗೆ ತಿಳಿದಿಲ್ಲ. ಆದರೆ, ಅವರನ್ನು ಗಂಭೀರವಾಗಿ ಪರಿಗಣಿಸಲಾಗಿತ್ತು ಎಂದರು.

ಆದರೂ, ವಿರಾಟ್‌ ಕೊಹ್ಲಿ ನಾಯಕತ್ವವನ್ನು ಉಳಿಸಿಕೊಂಡು 2021ರ ವರೆಗೆ ತಂಡವನ್ನು ಮುನ್ನಡೆಸಲಾಗಿದ್ದು, ಕೊನೆಯದಾಗಿ ಸ್ವಯಂಪ್ರೇರಿತವಾಗಿ ನಾಯಕನ ಸ್ಥಾನದಿಂದ ಕೆಳಗಿಳಿದರು. ಪ್ರಾಂಚೈಸಿ ಕೆಳಗಿಳಿಸಲಿಲ್ಲ.. ಹೀಗೆ ಅವರನ್ನ ಕೈಬಿಡಲಾಯಿತು ಎನ್ನುವ ಪ್ರಶ್ನೆಗೆ ಅಸಲಿ ಸತ್ಯ ಇದಾಗಿದೆ.

ಆರ್‌ಸಿಬಿ 2020ರಲ್ಲಿ ಪ್ಲೇ ಆಫ್ ತಲುಪಿದ ನಂತರದ ವರ್ಷಗಳಲ್ಲಿ ಬದಲಾವಣೆ ಕಂಡಿತು ಮತ್ತು ಕೊಹ್ಲಿ ವಿಶಿಷ್ಟ ಸ್ಥಿರತೆಯೊಂದಿಗೆ ರನ್‌ಗಳನ್ನು ಕಲೆಹಾಕುವುದನ್ನು ಕಂಟಿನ್ಯೂ ಮಾಡಿದರು. ಕೊಹ್ಲಿ ಬಳಿಕ ಫಾಫ್ ಡು ಪ್ಲೆಸಿಸ್ 2022ರಲ್ಲಿ ನಾಯಕತ್ವ ವಹಿಸಿಕೊಂಡರು. 2025ರಲ್ಲಿ ರಜತ್ ಪಾಟಿದಾರ್ ಅವರು ನಾಯತ್ವ ವಹಿಸಿಕೊಂಡು ಟ್ರೋಫಿ ಗೆಲ್ಲಿಸಿಕೊಟ್ರು. ಕೊಹ್ಲಿಯೇ ಸ್ವಯಂಪ್ರೇರಿತವಾಗಿ ನಾಯಕತ್ವ ತ್ಯಜಿಸಿದರೆ, ಹೊರತು ಪ್ರಾಂಚೈಸಿ ಕೆಳಗಿಳಿಸಲಿಲ್ಲ. ನಾಯಕ ಅಲ್ಲದಿದ್ದರೂ ಕೂಡ ಟೀಂಗೆ ಬ್ಯಾಕ್‌ ಬೋನ್‌ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಹೀಗೆ ವಿರಾಟ್‌ ಕೊಹ್ಲಿ ಅವರು ಆರ್‌ಸಿಬಿ ತಂಡಕ್ಕೆ ಕಿಂಗ್‌ ಆಗಿ ಗುರುತಿಸಿಕೊಂಡಿದ್ದಲ್ಲದೆ, ಅಪಾರ ಸಂಖ್ಯೆಯಲ್ಲಿ ಅಭಿಮಾನಿ ಬಳಗವನ್ನು ಹೊಂದಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+