
ಕ್ರಿಕೆಟ್ ಪ್ರೇಮಿ ಲತಾ, ಅಂದು ಧೋನಿ ಮೇಲೆ ಮುನಿಸುಕೊಂಡಿದ್ದೇಕೆ?
ಮುಂಬೈ, ಫೆಬ್ರವರಿ 6: ಭಾರತರತ್ನ ಲತಾ ಮಂಗೇಷ್ಕರ್ ವಿಧಿವಶರಾಗಿದ್ದಾರೆ. ಕಳೆದ ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಗಾಯಕಿ ಲತಾ ಮಂಗೇಶ್ಕರ್ ಅವರು ಇಂದು ಮುಂಜಾನೆ ತಮ್ಮ 92ನೇ ವಯಸ್ಸಿನಲ್ಲಿ ನಿಧನರಾದರು. ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದ ಲತಾ ಅವರು ಒಮ್ಮೆ ಮಾಜಿ ಕ್ರಿಕೆಟ್ ನಾಯಕ ಧೋನಿ ಮೇಲೆ ಮುನಿಸುಕೊಂಡಿದ್ದರು. ಹೀಗೇಕೆ ಮಾಡಿದ್ದು ಎಂದು ಪ್ರಶ್ನಿಸಿದ್ದರು.
ಪಾರ್ಥೀವ ಶರೀರವನ್ನು ಆಸ್ಪತ್ರೆಯಿಂದ ಅವರ ನಿವಾಸಕ್ಕೆ ಬೆಳಗ್ಗೆ 11 ಗಂಟೆಯಿಂದ 2.30ರೊಳಗೆ ತರಲಾಗುತ್ತದೆ. ಕುಟುಂಬಸ್ಥರು ಹಿಂದೂ ಸಂಪ್ರದಾಯಕ್ಕೆ ತಕ್ಕಂತೆ ವಿಧಿವಿಧಾನಗಳನ್ನು ನೆರವೇರಿಸಲಿದ್ದಾರೆ. ಲತಾ ಮಂಗೇಶ್ಕರ್ ನಿಧನದ ಹಿನ್ನೆಲೆ ಸರ್ಕಾರ ಎರಡು ದಿನ ಶೋಕಾಚರಣೆಗೆ ಆದೇಶ ಹೊರಡಿಸಿದೆ. ಲತಾ ಮಂಗೇಶ್ಕರ್ ಅವರ ಅಂತ್ಯ ಸಂಸ್ಕಾರವನ್ನು ಇಂದು ಸಂಜೆ ಮುಂಬೈನ ಶಿವಾಜಿ ಪಾರ್ಕ್‌ನಲ್ಲಿ ನೆರವೇರಿಸಲು ತೀರ್ಮಾನಿಸಲಾಗಿದೆ.
Breaking news: ಭಾರತರತ್ನ ಲತಾ ಮಂಗೇಷ್ಕರ್ ವಿಧಿವಶ
ಸಾವಿರಾರು ಅಮರ ಗೀತೆಗಳಿಗೆ ದನಿಯಾಗಿರುವ ಲತಾ ಅವರು ಅಪ್ಪಟ ಕ್ರಿಕೆಟ್ ಪ್ರೇಮಿಯಾಗಿದ್ದರು. ಕ್ರಿಕೆಟ್ ದೇವರು ಎನಿಸಿಕೊಂಡಿದ್ದ ಸಚಿನ್ ತೆಂಡೂಲ್ಕರ್ ಆಡುವ ಕಾಲದಲ್ಲಂತೂ ಸಚಿನ್ ಸೆಂಚುರಿ ಬಾರಿಸಲಿ ಎಂದು ದೇವರನ್ನು ಪ್ರಾರ್ಥಿಸುವವರ ಪೈಕಿ ಲತಾ ಅವರು ಮೊದಲಿಗರಾಗಿದ್ದರು. ಲತಾ ಅವರ ನಿಧನದಿಂದಾಗಿ ಚಿತ್ರರಂಗದ ಗಣ್ಯರಷ್ಟೇ ಅಲ್ಲದೆ ಕ್ರಿಕೆಟ್ ಜಗತ್ತು ಕೂಡಾ ಕಂಬನಿ ಮಿಡಿದಿದೆ.
Namaskar M S Dhoni ji.Aaj kal main sun rahi hun ke Aap retire hona chahte hain.Kripaya aap aisa mat sochiye.Desh ko aap ke khel ki zaroorat hai aur ye meri bhi request hai ki Retirement ka vichar bhi aap mann mein mat laayiye.@msdhoni
— Lata Mangeshkar (@mangeshkarlata) July 11, 2019
ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಏಕದಿನ ಪಂದ್ಯವಾಡುತ್ತಿರುವ ರೋಹಿತ್ ಪಡೆ ಇಂದು ಕಪ್ಪು ಪಟ್ಟಿ ಧರಿಸಿ ಮೈದಾನಕ್ಕೆ ಇಳಿದಿದೆ ಹಾಗೂ ಲತಾ ಅವರನ್ನು ಸ್ಮರಿಸಿ ಕ್ರಿಕೆಟರ್ಸ್ ಮೌನಾಚರಣೆ ಮಾಡಿದ್ದಾರೆ.
ಧೋನಿ ನಿವೃತ್ತಿ ಬಗ್ಗೆ ಲತಾ ಟ್ವೀಟ್
ಎಂಎಸ್ ಧೋನಿ ನಿವೃತ್ತಿ ಬಗ್ಗೆ ಘೋಷಿಸಿದಾಗ, ಈ ಬಗ್ಗೆ ಆಘಾತ ವ್ಯಕ್ತಪಡಿಸಿ, ಹುಸಿ ಮುನಿಸು ತೋರಿಸಿದ್ದ ಲತಾ ಅವರು ಟ್ವೀಟ್ ಮಾಡಿದ್ದರು. 2019ರ ವಿಶ್ವಕಪ್ ಪಂದ್ಯಾವಳಿಯ ಸೆಮಿಫೈನಲ್ ಸೋಲು ಅರಗಿಸಿಕೊಳ್ಳಲು ಯಾರಿಗೂ ಸಾಧ್ಯವಿಲ್ಲದ ಸಂದರ್ಭವಾಗಿತ್ತು. ಧೋನಿ ನಿವೃತ್ತಿ ಬಗ್ಗೆ ಸುದ್ದಿ ಹರಿದಾಡುತ್ತಿತ್ತು. ಇದನ್ನು ಖಂಡಿಸಿ, ಎಲ್ಲಾ ಅಭಿಮಾನಿಗಳಂತೆ ಲತಾ ಅವರು ಟ್ವೀಟ್ ಮಾಡಿ, ನಿವೃತ್ತಿ ಬಗ್ಗೆ ಆತುರದ ನಿರ್ಣಯ ಕೈಗೊಳ್ಳಬೇಡಿ ಎಂದು ಮನವಿ ಮಾಡಿದ್ದರು.
ಜುಲೈ 11, 2019ರಂದು ಲತಾ ಟ್ವೀಟ್ ಮಾಡಿ ಹೀಗಿತ್ತು..
On 11th July 2019, the late singer had tweeted, "Namaskar M S Dhoni ji.Aaj kal main sun rahi hun ke Aap retire hona chahte hain.Kripaya aap aisa mat sochiye.Desh ko aap ke khel ki zaroorat hai aur ye meri bhi request hai ki Retirement ka vichar bhi aap mann mein mat laayiye."
ನಿಮ್ಮ ನಿವೃತ್ತಿ ಬಗ್ಗೆ ಸುದ್ದಿಗಳು ಬರುತ್ತಿವೆ. ದೇಶಕ್ಕೆ ನಿಮ್ಮ ಆಟದ ಅಗತ್ಯವಿದೆ, ನಿವೃತ್ತಿ ಬಗ್ಗೆ ಯೋಚಿಸಬೇಡಿ, ನಿವೃತ್ತಿ ಬಗ್ಗೆ ನಿಮ್ಮ ಮನಸ್ಸಿನಲ್ಲಿ ಆಲೋಚನೆ ಬರದಿರಲಿ ಎಂದು ಟ್ವೀಟ್ ಮಾಡಿದ್ದರು.
Recommended Video
ಸುಮಾರು 36ಕ್ಕೂ ಅಧಿಕ ಭಾಷೆಗಳಲ್ಲಿ ಸಾವಿರಾರು ಹಾಡುಗಳನ್ನು ಹಾಡಿದ್ದ ಲತಾ ಅವರು ಏಳು ದಶಕದ ತಮ್ಮ ವೃತ್ತಿ ಬದುಕು ಎಂದಿಗೂ ಅಂತ್ಯಗೊಳಿಸಲು ಇಚ್ಛಿಸಿರಲಿಲ್ಲ. ಕೊನೆ ಗಳಿಗೆ ತನಕ ಸಂಗೀತದ ಬಗ್ಗೆ ಚಿಂತನೆಯಲ್ಲಿರುತ್ತಿದ್ದರು. ಲತಾ ಮಂಗೇಶ್ಕರ್ ಅವರ ಸಾಧನೆಗೆ ಮನ್ನಣೆ ನೀಡಿ ಭಾರತ ಸರ್ಕಾರವು 2001ರಲ್ಲಿ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ 'ಭಾರತ ರತ್ನ'ವನ್ನು ಪ್ರದಾನ ಮಾಡಿ ಗೌರವಿಸಿತ್ತು. ಚಿತ್ರರಂಗದಲ್ಲಿನ ಸೇವೆಗೆ 'ದಾದಾ ಸಾಹೇಬ್ ಫಾಲ್ಕೆ' ಪ್ರಶಸ್ತಿಯನ್ನು 1989ರಲ್ಲಿ ಲತಾ ಅವರು ಪಡೆದಿದ್ದರು. ಇದಲ್ಲದೆ, ಪದ್ಮಭೂಷಣ, ಪದ್ಮವಿಭೂಷಣ ಸೇರಿದಂತೆ ಅನೇಕ ಪ್ರಶಸ್ತಿಗಳಿಗೆ ಭಾಜನರಾಗಿದ್ದರು.