ಹಿಸ್ಟರಿ ಟಿವಿಯಲ್ಲಿ ಬೆಂಗಳೂರಿನ 24 ವರ್ಷದ 'ಸ್ಪಿನ್ ಸುಲ್ತಾನ' ನನ್ನು ನೋಡಿ

ಬೆಂಗಳೂರು, ಏಪ್ರಿಲ್‌ 17: ಹವ್ಯಾಸಗಳು ಹಲವು ರೂಪದಲ್ಲಿ ಇರಬಹುದು. ಕೆಲವು ಸ್ಟಾಂಪ್‌ ಸಂಗ್ರಹಿಸುತ್ತಾರೆ, ಕೆಲವರು ಸಂಗೀತ ಉಪಕರಣ ನುಡಿಸುತ್ತಾರೆ. ಆದರೆ, ಬೆಂಗಳೂರಿನ 24 ವರ್ಷದ ಸಾಯಿ ತೇಜಸ್‌ ಹಲವು ಚೆಂಡುಗಳನ್ನು ಸಮತೋಲನ ಮಾಡುತ್ತಾನೆ. ಬೆರಳುಗಳು, ತಲೆ ಹಾಗೂ ಕಾಲ್ಬೆರಳಿನಿಂದಲೂ ಚೆಂಡುಗಳನ್ನು ಬ್ಯಾಲೆನ್ಸ್ ಮಾಡುತ್ತಾನೆ! ಅವರ ಈ ವಿಶಿಷ್ಟ ಹವ್ಯಾಸದಲ್ಲಿ ಅತ್ಯಂತ ಪರಿಣಿತಿ ಅವರಿಗೆ ಸಾಧ್ಯವಾಗಿದೆ. ಅಷ್ಟೇ ಅಲ್ಲ, ಒಂದೇ ಬಾರಿಗೆ ಐದು ಚೆಂಡುಗಳನ್ನು ಬ್ಯಾಲೆನ್ಸ್ ಮಾಡಿದ್ದಕ್ಕೆ ಅವರು ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲೂ ಕಾಣಿಸಿಕೊಂಡಿದ್ದಾರೆ.

ಈ ಸೋಮವಾರ ರಾತ್ರಿ 8 ಗಂಟೆಗೆ ಹಿಸ್ಟರಿ ಟಿವಿ18 ವೀಕ್ಷಕರು ಅವರ ಈ ಅದ್ಭುತ ಪ್ರತಿಭೆಯನ್ನು, ಅತ್ಯಂತ ಯಶಸ್ವಿ ಸಿರೀಸ್‌ 'ಒಎಂಜಿ! ಯೆ ಮೇರಾ ಇಂಡಿಯಾ' ಮುಂದಿನ ಎಪಿಸೋಡ್‌ನಲ್ಲಿ ಕಣ್ತುಂಬಿಕೊಳ್ಳಬಹುದು. ದೇಶದ ವಿವಿಧ ಭಾಗದ ಸಾಮಾನ್ಯ ಭಾರತೀಯರ ಅಪ್ರತಿಮ ಪ್ರತಿಭೆ ಮತ್ತು ಸಾಧನೆಯನ್ನು ಈ ಸಿರೀಸ್‌ ಪ್ರದರ್ಶಿಸುತ್ತದೆ.

ವೃತ್ತಿಯಿಂದ ಇಂಜಿನಿಯರ್ ಆಗಿರುವ ಮತ್ತು ಪ್ರವೃತ್ತಿಯಿಂದ ಫುಟ್‌ಬಾಲ್‌ ಆಟಗಾರರಾಗಿರುವ ಇವರು ಬೆಂಗಳೂರಿನ ಹಿಂದುಳಿದ ಸಮುದಾಯಗಳ ಮಕ್ಕಳಿಗೆ ಫ್ರೀಸ್ಟೈಲ್‌ ಫುಟ್‌ಬಾಲ್ ತರಬೇತಿ ನೀಡುತ್ತಾರೆ. ಇವರ ಈ ಪ್ರತಿಭೆಯನ್ನು ಅಂತಾರಾಷ್ಟ್ರೀಯ ಫುಟ್‌ಬಾಲ್‌ನ ಅಧಿಕೃತ ಮಂಡಳಿ ಫಿಫಾ ಕೂಡಾ ಮಾನ್ಯತೆ ನೀಡಿದ್ದು, ತನ್ನ ಅಧಿಕೃತ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಇವರ ವೀಡಿಯೋ ಪೋಸ್ಟ್‌ ಮಾಡಿದೆ. ಸಾಯಿ ಪಳಗಿಸಿಕೊಂಡಿರುವ ಕೆಲವು ಟ್ರಿಕ್‌ಗಳನ್ನು ನೋಡಲು ಈ ಸೋಮವಾರ ರಾತ್ರಿ 8 ಗಂಟೆಗೆ 'ಒಎಂಜಿ! ಯೆ ಮೇರಾ ಇಂಡಿಯಾ' ದ ಮುಂದಿನ ಎಪಿಸೋಡ್ ಅನ್ನು ವೀಕ್ಷಿಸಿ.

Watch Bengaluru’s 24-year-old ‘Sultan of Spin’ on HistoryTV18’s ‘OMG! Yeh Mera India’

ಎಪಿಸೋಡ್‌ನಲ್ಲಿ ಉಳಿದಂತೆ ಮಹಾರಾಷ್ಟ್ರದ ಮುಂಬೈನಲ್ಲಿ ಇಪ್ಪತ್ತು ಲಕ್ಷಕ್ಕೂ ಹೆಚ್ಚು ಮೌಲ್ಯದ ಫೋನ್‌ಗಳ ಸಂಗ್ರಹ ಮತ್ತು ಕೇರಳದ ಕೊಚ್ಚಿಯಲ್ಲಿ ಕಂಡುಹಿಡಿದ ನವೀನ ಸೋಲಾರ್ ಪವರ್‌ ಫೆರ್ರಿ ಬೋಟ್‌ ಸೇರಿದಂತೆ ಇತರ ಕಥೆಗಳಿವೆ. ಅವೆಲ್ಲವನ್ನೂ ಈ ಸೋಮವಾರ ರಾತ್ರಿ 8 ಗಂಟೆಗೆ ಹಿಸ್ಟರಿ ಟಿವಿ18 ನಲ್ಲಿ ಮಾತ್ರ ವೀಕ್ಷಿಸಿ. 'ಒಎಂಜಿ! ಯೆ ಮೇರಾ ಇಂಡಿಯಾ' ಸೀಸನ್‌ 7 ಅನ್ನು ಪ್ರತಿ ಸೋಮವಾರ ರಾತ್ರಿ 8 ಗಂಟೆಗೆ ಕೇವಲ HistoryTV18 ನಲ್ಲಿ ವೀಕ್ಷಿಸಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+