Virat Kohli: ಅಚ್ಚರಿಯಾದರೂ ಸತ್ಯ: ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್ ಸೇರಲು ವಿರಾಟ್ ಕೊಹ್ಲಿ ಪ್ರಮುಖ ಕಾರಣ
128 ವರ್ಷಗಳ ಬಳಿಕ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್ ವಾಪಸಾಗಲು ಸಜ್ಜಾಗಿದೆ. 2028ರಲ್ಲಿ ಲಾಸ್ ಏಂಜಲೀಸ್‌ನಲ್ಲಿ ನಡೆಯಲಿರುವ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್ ಅನ್ನು ಸೇರ್ಪಡೆ ಮಾಡುವುದಾಗಿ ಅಂತರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ) ಸೋಮವಾರ ಅಧಿಕೃತ ಘೋಷಣೆ ಮಾಡಿದೆ.
ಭಾರತ ತಂಡ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುವುದನ್ನು ನೋಡಲು ಭಾರತೀಯ ಅಭಿಮಾನಿಗಳು ಕಾತರರಾಗಿದ್ದಾರೆ. ಆದರೆ, ಈ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್ ಅನ್ನು ಸೇರಿಸುವಲ್ಲಿ ವಿರಾಟ್ ಕೊಹ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದರೆ ನಿಮಗೆ ಅಚ್ಚರಿಯಾಗಬಹುದು. ಆದರೆ, ಇದು ನಿಜ ಕೂಡ.

ಭಾರತದ ಸ್ಟಾರ್ ಕ್ರಿಕೆಟಿ ವಿರಾಟ್ ಕೊಹ್ಲಿ ಜನಪ್ರಿಯತೆಯು ಈ ಕ್ರೀಡೆಯನ್ನು ಒಲಿಂಪಿಕ್ಸ್‌ನಲ್ಲಿ ಸೇರಿಸುವಲ್ಲಿ ಭಾರಿ ಪಾತ್ರವನ್ನು ವಹಿಸಿದೆ ಎಂದು ಅಂತರಾಷ್ಟ್ರೀಯ ಒಲಿಂಪಿಕ್ ಸಮಿತಿಯೇ ಸ್ವತಃ ಒಪ್ಪಿಕೊಂಡಿದೆ.
ಒಲಿಂಪಿಕ್ ಸಮಿತಿ ಹೇಳಿದ್ದೇನು?
ಮುಂಬೈನಲ್ಲಿ ನಡೆದ ಘೋಷಣೆ ಸಮಾರಂಭದಲ್ಲಿ, ಇಟಾಲಿಯನ್ ಒಲಿಂಪಿಕ್ ಚಾಂಪಿಯನ್ ಶೂಟರ್ ಮತ್ತು ಲಾಸ್ ಏಂಜಲಿಸ್ 2028 ಗೇಮ್ಸ್‌ನ ನಿರ್ದೇಶಕ ನಿಕೊಲೊ ಕ್ಯಾಂಪ್ರಿಯಾನಿ ಅವರು 128 ವರ್ಷಗಳ ನಂತರ ಕ್ರಿಕೆಟ್ ಅನ್ನು ಸೇರಿಸುವುದರ ಹಿಂದಿನ ಕಾರಣವನ್ನು ವಿವರಿಸಿದರು. ನನ್ನ ಸ್ನೇಹಿತ ವಿರಾಟ್ ಕೊಹ್ಲಿಯವರನ್ನು ಸಾಮಾಜಿಕ ಮಾಧ್ಯಮದಲ್ಲಿ 340 ಮಿಲಿಯನ್ ಜನ ಅನುಯಾಯಿಗಳನ್ನು ಹೊಂದಿದ್ದು, ವಿಶ್ವದ ಮೂರನೇ ಅತಿ ಹೆಚ್ಚು ಅನುಸರಿಸುವ ಕ್ರೀಡಾಪಟು ಆಗಿದ್ದಾರೆ. ಇದು ಲೆಬ್ರಾನ್ ಜೇಮ್ಸ್, ಟಾಮ್ ಬ್ರಾಡಿ ಮತ್ತು ಟೈಗರ್ ವುಡ್ಸ್ ಮೂರವ ಹಿಂಬಾಲಕರ ಒಟ್ಟು ಸಂಖ್ಯೆಗಿಂತ ಹೆಚ್ಚು ಎಂದು ಹೇಳಿದರು.
"ಇದು ಎಲ್‌ಎ28, ಒಲಿಂಪಿಕ್ ಸಮಿತಿ ಮತ್ತು ಕ್ರಿಕೆಟ್ ಸಮುದಾಯಕ್ಕೆ ದೊಡ್ಡ ಜಯವಾಗಿದೆ. ಜಾಗತಿಕ ವೇದಿಕೆಯಲ್ಲಿ ಕ್ರಿಕೆಟ್ ಪ್ರದರ್ಶನವಾಗಲಿದೆ. ಸಾಂಪ್ರದಾಯಿಕ ಕ್ರಿಕೆಟ್ ಆಡುವ ರಾಷ್ಟ್ರಗಳಿಗಿಂತ ಮುಂದೆ ಸಾಗಲು ಇದು ಸಹಾಯ ಮಾಡುತ್ತದೆ ಎಂದು ಕ್ಯಾಂಪ್ರಿಯಾನಿ ಹೇಳಿದ್ದಾರೆ.
ಸಂತಸ ವ್ಯಕ್ತಪಡಿಸಿದ ಬಿಸಿಸಿಐ
ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್ ಸೇರ್ಪಡೆ ಮಾಡಿರುವುದನ್ನು ಬಿಸಿಸಿಐ (ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ) ಸ್ವಾಗತಿಸಿದೆ. "ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್ ಅನ್ನು ಸೇರಿಸುವುದು ಕ್ರೀಡೆಗೆ ಹೆಚ್ಚು ಪ್ರಚಾರ ನೀಡುತ್ತದೆ. ಜಾಗತಿಕ ಮಾರುಕಟ್ಟೆಯಲ್ಲಿ ಕ್ರಿಕೆಟ್‌ಗೆ ಹೆಚ್ಚಿನ ಮಾನ್ಯತೆ ಸಿಗಲಿದೆ. ಈ ನಿರ್ಧಾರದಿಂದ ಆರ್ಥಿಕ ಪ್ರಯೋಜನಗಳು ಸಿಗಲಿದೆ. ಕ್ರೀಡೆಯ ವ್ಯವಸ್ಥೆ ಮೇಲೆ ಆಳವಾದ ಪರಿಣಾಮ ಬೀರುತ್ತದೆ ಎಂದು ನಾನು ನಂಬಿದ್ದೇನೆ" ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಟ್ವೀಟ್ ಮಾಡಿದ್ದಾರೆ.












Click it and Unblock the Notifications