Virat Kohli: ಆರ್‌ಸಿಬಿ ಪಡೆ ಸೇರಿಕೊಂಡ 'ಕಿಂಗ್ ಕೊಹ್ಲಿ': ಬರ್ತಿದ್ದಂಗೆ ಅಭ್ಯಾಸ ಶುರು!
ಆರ್‌ಸಿಬಿ ಅಭಿಮಾನಿಗಳಿಗೆ ಒಂದರ ಹಿಂದೆ ಒಂದು ಖುಷಿ ಪಡೋ ಸುದ್ದಿಗಳು ಬರ್ತಾನೆ ಇವೆ. ಮಾರ್ಚ್ 17ರಂದು ವಿಶ್ವದ ಶ್ರೇಷ್ಠ ಅಭಿಮಾನಿಗಳಿಗೆ ಮರೆಯಲಾಗದ ದಿನ. 16 ವರ್ಷಗಳಿಂದ ಮಾಡಲಾಗದ ಸಾಧನೆಯನ್ನು, ಆರ್‌ಸಿಬಿ ಮಹಿಳಾ ತಂಡ ಮಾಡಿ ತೋರಿಸಿದೆ. ಮೊದಲ ಬಾರಿ ಕಪ್ ಗೆದ್ದ ಸಂಭ್ರಮ ಇನ್ನೂ ಅಭಿಮಾನಿಗಳ ಮನದಲ್ಲಿರುವಾಗಲೇ, ಐಪಿಎಲ್ ಜ್ವರ ಕಾವೇರಿದೆ.
ವಿರಾಟ್ ಕೊಹ್ಲಿ ಎಲ್ಲಿದ್ದಾರೆ, ಯಾವಾಗ ಬರ್ತಾರೆ, ಐಪಿಎಲ್ ಆಡಲ್ವಾ? ಆಡ್ತಾರಾ? ಎನ್ನುವ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಸಿಕ್ಕಿದೆ. ಹೌದು, ಕಿಂಗ್ ಕೊಹ್ಲಿ ಈಗಾಗಲೇ ಬೆಂಗಳೂರಿಗೆ ಬಂದಿದ್ದಾರೆ, ಅಷ್ಟೇ ಅಲ್ಲ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಭ್ಯಾಸ ಕೂಡ ಮಾಡ್ತಿದ್ದಾರೆ.

ಶನಿವಾರ ಮುಂಬೈಗೆ ಬಂದಿದ್ದ ವಿರಾಟ್ ಕೊಹ್ಲಿ ಭಾನುವಾರ ಮುಂಬೈನಿಂದ ಹೊರಟು ಬೆಂಗಳೂರಿಗೆ ಬಂದಿದ್ದರು. ಸೋಮವಾರ ಅವರಾಗಲೇ ಮೈದಾನದಲ್ಲಿ ಅಭ್ಯಾಸ ಆರಂಭಿಸಿದ್ದಾರೆ. ಅವರು ಅಭ್ಯಾಸ ಮಾಡುತ್ತಿರುವ ವಿಡಿಯೋ ಈಗಾಗಲೇ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ.
Virat Kohli 🤝 Glenn Maxwell playing football at the Chinnaswamy Stadium.
— Mufaddal Vohra (@mufaddal_vohra) March 18, 2024
- King is finally back, cannot wait for the 22nd. 😍pic.twitter.com/VfEEy3jtst
ಅಭಿಮಾನಿಗಳಿಗೆ ಡಬಲ್ ಸಂಭ್ರಮ
ಒಂದೆಡೆ ಮೊದಲ ಬಾರಿಗೆ ಆರ್‌ಸಿಬಿ ಕಪ್ ಎತ್ತಿಹಿಡಿದಿದೆ. ಮತ್ತೊಂದು ಕಡೆ ಐಪಿಎಲ್ ಆರಂಭಕ್ಕೆ ಇನ್ನು 5 ದಿನ ಮಾತ್ರವೇ ಇದೆ. ಮೊದಲ ಪಂದ್ಯದಲ್ಲೇ ಆರ್‌ಸಿಬಿ ಸಿಎಸ್‌ಕೆ ತಂಡಗಳು ಮುಖಾಮುಖಿಯಾಗುತ್ತಿವೆ. ಕ್ರಿಕೆಟ್ ಅಭಿಮಾನಿಗಳು, ಅದರಲ್ಲೂ ಆರ್‌ಸಿಬಿ ಅಭಿಮಾನಿಗಳಿಗೆ ಇದಕ್ಕಿಂತ ಖುಷಿ ವಿಚಾರ ಇನ್ನೇನಿದೆ.
ಕಳೆದ ಸೀಸನ್‌ನಲ್ಲಿ ಅಷ್ಟೇನು ಉತ್ತಮ ಪ್ರದರ್ಶನದ ನೀಡದ ಕೊಹ್ಲಿ ಈ ಬಾರಿ ಅಬ್ಬರಿಸಲು ಸಜ್ಜಾಗಿದ್ದಾರೆ. ಸದ್ಯ ಅತ್ಯುತ್ತಮ ಫಾರ್ಮ್‌ನಲ್ಲಿರುವ ಅವರು, 2016ರ ಪ್ರದರ್ಶನವನ್ನು ರಿಪೀಟ್ ಮಾಡಲಿ ಎಂದು ಅಭಿಮಾನಿಗಳು ಬಯಸುತ್ತಾರೆ.
ಐಪಿಎಲ್ ಬಳಿಕ ಟಿ20 ವಿಶ್ವಕಪ್ ಆಡುವ ಕಾರಣ ಕೊಹ್ಲಿ ಐಪಿಎಲ್‌ನಲ್ಲಿ ರನ್ ಗಳಿಸಿ ಮತ್ತೊಂದು ವಿಶ್ವಕಪ್‌ನಲ್ಲಿ ಆಡುವ ಯೋಜನೆಯಲ್ಲಿರುತ್ತಾರೆ. ಈ ಬಾರಿ ಅವರು ಆರಂಭಿಕ ಬ್ಯಾಟರ್ ಆಗಿ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ.
ಅನ್‌ಬಾಕ್ಸ್ ಕಾರ್ಯಕ್ರಮ
ಐಪಿಎಲ್ ಆರಂಭಕ್ಕೆ ಮುನ್ನ ಆರ್‌ಸಿಬಿ ಅನ್‌ಬಾಕ್ಸ್ ಕಾರ್ಯಕ್ರಮ ನಡೆಯಲಿದೆ. ಮಾರ್ಚ್ 19ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಈ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಬ್ಯಾಂಗಲೋರ್ ಎಂದು ಇರುವ ಹೆಸರು ಬೆಂಗಳೂರು ಆಗಿ ಬದಲಾಗಲಿದೆ. ಇದು ಅಭಿಮಾನಿಗಳ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಿದೆ.
ಮಹಿಳಾ ತಂಡ ಕಪ್ ಗೆದ್ದ ಬಳಿಕವಾದರೂ ಆರ್‌ಸಿಬಿ ಅದೃಷ್ಟ ಬದಲಾಗಲಿ ಎಂದು ಅಭಿಮಾನಿಗಳು ಹಾರೈಸಿದ್ದಾರೆ. ಮಹಿಳಾ ತಂಡ ಕಪ್ ಗೆದ್ದಿದೆ, ಈಗ ಪುರುಷರ ತಂಡ ಕೂಡ ಕಪ್ ಗೆದ್ದರೆ ಅಭಿಮಾನಿಗಳ ಖುಷಿ ಡಬಲ್ ಆಗಲಿದೆ.












Click it and Unblock the Notifications