Virat Kohli: ಅನುಷ್ಕಾ ಶರ್ಮಾಗೆ ಫ್ಲೈಯಿಂಗ್ ಕಿಸ್ ಕೊಟ್ಟ ಬಳಿಕ ತನ್ನ ಆಟದ ಯಶಸ್ಸಿನ ರಹಸ್ಯ ಬಿಚ್ಚಿಟ್ಟ ವಿರಾಟ್ ಕೊಹ್ಲಿ
Virat Kohli: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಅವರು ಶನಿವಾರ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ನಡೆದ ಐಪಿಎಲ್ 2026ರ ಉದ್ಘಾಟನಾ ಪಂದ್ಯದಲ್ಲಿ ಅಬ್ಬರಿಸಿದರು. ಸ್ಫೋಟಕ ಬ್ಯಾಟಿಂಗ್ ಮೂಲಕ ಆರ್ಸಿಬಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದ ಬಳಿಕ ಪತ್ನಿ ಅನುಷ್ಕಾ ಶರ್ಮಾಗೆ ಫ್ಲೈಯಿಂಗ್ ಕಿಸ್ ಕೊಟ್ಟಿದ್ದು, ಇದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಬಳಿಕ ಅವರು ತಮ್ಮ ಯಶಸ್ಸಿನ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ.
ಎಸ್ಆರ್ಎಚ್ ನೀಡಿದ 202 ರನ್ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ಆರ್ಸಿಬಿ ಪರ ಕೊಹ್ಲಿ ಕೇವಲ 38 ಎಸೆತಗಳಲ್ಲಿ ಅಜೇಯ 69 ರನ್ ಸಿಡಿಸಿದರು. ಇವರ ಈ ಸ್ಫೋಟಕ ಇನ್ನಿಂಗ್ಸ್ನಲ್ಲಿ 5 ಬೌಂಡರಿ ಹಾಗೂ 5 ಸಿಕ್ಸರ್ಗಳು ಸೇರಿದ್ದವು. ಕೊಹ್ಲಿ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಆರ್ಸಿಬಿ ಈ ಗುರಿಯನ್ನು ಕೇವಲ 15.4 ಓವರ್ಗಳಲ್ಲಿ ತಲುಪಿ ಭರ್ಜರಿ ಜಯ ಸಾಧಿಸಿತು. ಪಂದ್ಯ ಗೆಲ್ಲಿಸಿದ ನಂತರ ವಿರಾಟ್ ಕೊಹ್ಲಿ ಗ್ಯಾಲರಿಯಲ್ಲಿದ್ದ ತಮ್ಮ ಪತ್ನಿ, ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅವರಿಗೆ 'ಫ್ಲೈಯಿಂಗ್ ಕಿಸ್' ನೀಡುವ ಮೂಲಕ ಸಂಭ್ರಮಿಸಿದರು. ಇದು ಭಾರೀ ವೈರಲ್ ಆಗಿದೆ.

ಆಟದ ಸಿದ್ಧತೆ ಬಗ್ಗೆ ಮಾಹಿತಿ ಬಿಚ್ಚಿಟ್ಟ ಕೊಹ್ಲಿ
ವಿರಾಟ್ ಕೊಹ್ಲಿ ಅವರು ಟಿ20 ಕ್ರಿಕೆಟ್ ಅನ್ನು 10 ತಿಂಗಳುಗಳ ಕಾಲ ಆಡಿರಲಿಲ್ಲ. ಈ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, "ಕಳೆದ 15 ವರ್ಷಗಳಿಂದ ನಾವು ಹೊಂದಿರುವ ವೇಳಾಪಟ್ಟಿ ಮತ್ತು ನಾನು ಆಡಿರುವ ಕ್ರಿಕೆಟ್ ಪ್ರಮಾಣವನ್ನು ಗಮನಿಸಿದರೆ, ನನ್ನ ಪಾಲಿಗೆ ಸಿದ್ಧತೆಯ ಕೊರತೆಗಿಂತ, ಅತಿಯಾದ ಆಟದಿಂದ ಸುಸ್ತಾಗುವ ಅಪಾಯವೇ ಹೆಚ್ಚಿತ್ತು. ಆದ್ದರಿಂದ ಇಂತಹ ವಿರಾಮಗಳು ನನಗೆ ಅಪಾರವಾಗಿ ಸಹಾಯ ಮಾಡಿವೆ. ಇದರಿಂದ ನಾನು ಸದಾ ಉತ್ಸಾಹದಿಂದ ಇರುತ್ತೇನೆ ಎಂದು ಹೇಳಿದರು.
ಕೇವಲ ಹೆಸರಿಗಾಗಿ ಮೈದಾನಕ್ಕಿಳಿಯುವ ಬದಲು, ದೈಹಿಕವಾಗಿ ಮತ್ತು ಮಾನಸಿಕವಾಗಿ ಸಂಪೂರ್ಣ ಫಿಟ್ ಆಗಿದ್ದಾಗ ಮಾತ್ರ ಕಣಕ್ಕಿಳಿಯುವುದಾಗಿ ಅವರು ತಿಳಿಸಿದ್ದಾರೆ. ವಯಸ್ಸು 37 ಆದರೂ, ತಮ್ಮ ಆಟದ ಶೈಲಿ ಮತ್ತು ಸಿದ್ಧತೆಯಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ ಎಂಬುದು ಅವರ ಮಾತುಗಳಿಂದ ಸ್ಪಷ್ಟವಾಗಿ ತಿಳಿದುಬರುತ್ತದೆ.
'ಸಂಪೂರ್ಣ ಸಿದ್ಧತೆಯೊಂದಿಗೆ ಕಣಕ್ಕಿಳಿಯುತ್ತೇನೆ'
ಮುಂದುವರೆದು ಮಾತನಾಡಿದ ವಿರಾಟ್ ಕೊಹ್ಲಿ ಅವರು, "ನಾನು ಯಾವಾಗ ಆಟಕ್ಕೆ ಮರಳಿದರೂ ಅದು ಸಂಪೂರ್ಣ ಸಿದ್ಧತೆಯೊಂದಿಗೆ ಬರುತ್ತೇನೆ. ಸಿದ್ಧತೆ ಇಲ್ಲದೆ ಎಂದಿಗೂ ಮೈದಾನಕ್ಕಿಳಿಯುವುದಿಲ್ಲ. ವಾಸ್ತವವಾಗಿ, ಈ ಹೆಚ್ಚಿನ ವಿಶ್ರಾಂತಿಯು ನಾನು ಮಾನಸಿಕವಾಗಿಸದಾ ಉತ್ಸಾಹದಿಂದ ಇರಲು ಸಹಾಯ ಮಾಡುತ್ತದೆ," ಎಂದು ಹೇಳಿದರು.
ತಂಡಕ್ಕೆ ಉತ್ತಮ ಕೊಡುಗೆ ನೀಡಲು ಏನು ಮಾಡಬೇಕು?
"ನೀವು ದೈಹಿಕವಾಗಿ ಸದೃಢರಾಗಿದ್ದು, ಮಾನಸಿಕವಾಗಿ ಉತ್ಸಾಹದಿಂದ ಇರುವವರೆಗೆ ಈ ಎಲ್ಲ ವಿಷಯಗಳು ಉತ್ತಮವಾಗಿ ಹೊಂದಾಣಿಕೆಯಾಗುತ್ತವೆ. ಆಗ ನೀವು ತಂಡದ ಯಶಸ್ಸಿಗೆ ಉತ್ತಮ ಕೊಡುಗೆ ನೀಡಲು ಸಾಧ್ಯವಾಗುತ್ತದೆ. ಒಬ್ಬ ಆಟಗಾರನಾಗಿ ನೀವು ಮಾಡಬೇಕಿರುವುದು ಅದನ್ನೇ. ಕೇವಲ ಒಂದು ಸ್ಥಾನವನ್ನು ಗಿಟ್ಟಿಸಿಕೊಂಡು ತಂಡದಲ್ಲಿ ಉಳಿಯುವುದು ಮುಖ್ಯವಲ್ಲ. ನಿರಂತರವಾಗಿ ಉತ್ತಮ ಪ್ರದರ್ಶನ ನೀಡುತ್ತಿರಬೇಕು ಮತ್ತು ತಂಡಕ್ಕಾಗಿ ಶ್ರಮವಹಿಸುತ್ತಿರಬೇಕೆಂದು ಬಯಸುತ್ತೀರಿ," ಎಂದು ಯುವ ಆಟಗಾರರಿಗೆ ಕಿವಿಮಾತು ಹೇಳಿದರು.
ಟಿ20 ಕ್ರಿಕೆಟ್ಗೆ ಮರಳಿದ ಬಗ್ಗೆ ಮಾತನಾಡಿದ ವಿರಾಟ್ ಕೊಹ್ಲಿ, ಇತ್ತೀಚಿನ ದಿನಗಳಲ್ಲಿ ಆಡಿದ ಸೀಮಿತ ಓವರ್ಗಳ ಪಂದ್ಯಗಳು ತಮಗೆ ಈ ಚುಟುಕು ಮಾದರಿಯಲ್ಲಿ ಲಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡಿವೆ ಎಂದು ತಿಳಿಸಿದರು. "ಮತ್ತೆ ಮೈದಾನಕ್ಕಿಳಿದಿದ್ದು ತುಂಬಾ ಸಂತೋಷ ತಂದಿದೆ. ನಾನು ಆಡಿದ ಕೊನೆಯ ಟಿ20 ಪಂದ್ಯವೆಂದರೆ ಕಳೆದ ವರ್ಷದ ಐಪಿಎಲ್ ಫೈನಲ್. ಆದರೆ, ಇತ್ತೀಚೆಗಷ್ಟೇ ನಡೆದ ಏಕದಿನ ಸರಣಿಯಲ್ಲಿ ನಾನು ಬ್ಯಾಟ್ ಬೀಸಿದ ರೀತಿಯು ಉತ್ತಮ ಲಯವನ್ನು ಕಾಯ್ದುಕೊಳ್ಳಲು ನನಗೆ ನಿಜವಾಗಿಯೂ ಸಹಾಯ ಮಾಡಿತು ಎಂದು ನಾನು ಭಾವಿಸುತ್ತೇನೆ," ಎಂದು ಹೇಳಿದರು. ಒಟ್ಟಿನಲ್ಲಿ ಹೇಳುವುದಾದರೆ, ತಾವು ಹಾಕಿದ ಶ್ರಮದ ಬಗ್ಗೆ ಬಿಚ್ಚಿಟ್ಟಿದ್ದಾರೆ. ಈ ಸಲಹೆ ಈಗಿನ ಯುವ ಪೀಳಿಗೆಗೆ ಅತ್ಯಂತ ಉಪಯಕಾರಿ ಆಗಲಿದೆ ಎಂದು ಹೇಳಬಹುದು.
-
Who is Jacob Duffy?: ಐಪಿಎಲ್ 2026 ಉದ್ಘಾಟನಾ ಪಂದ್ಯದಲ್ಲಿ ಆರ್ಸಿಬಿ ಪರ ಮಿಂಚಿದ ಜೇಕಬ್ ಡಫಿ ಯಾರು? -
ಕನ್ನಡತಿ ಶ್ರೇಯಾಂಕಾ ಪಾಟೀಲ್, ಮಂಧಾನ ಜೊತೆ ಆರ್ಸಿಬಿ ಪಂದ್ಯ ವೀಕ್ಷಣೆ: ಕ್ರೀಡಾ ಸ್ಪೂರ್ತಿ ಮೆರೆದ ಜೆಮಿಮಾ ರೊಡ್ರಿಗಸ್ -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
ಸಿಎಸ್ಕೆ ಕಪ್ 5 ರೂಪಾಯಿ, ಆರ್ಸಿಬಿ ಟ್ರೋಫಿ ಬೆಲೆ 5 ಕೋಟಿ ರೂಪಾಯಿ: ಪುಟ್ಟ ಬಾಲಕನ ಹೇಳಿಕೆ ಭಾರೀ ವೈರಲ್ -
RCB: ಆರ್ಸಿಬಿ ಪಂದ್ಯದ ನಡುವೆಯೆ ಮತ್ತೊಮ್ಮ ಅಭಿಮಾನಿಗಳ ಮನಗೆದ್ದ 'ಕ್ರಶ್' ಅನನ್ಯಾ ಬಿರ್ಲಾ -
IPL 2026: ಆರ್ಸಿಬಿ-ಎಸ್ಆರ್ಎಚ್ ಉದ್ಘಾಟನಾ ಪಂದ್ಯಕ್ಕೆ ಮಳೆ ಅಡ್ಡಿಯಾಗಲಿದ್ಯಾ? ಹವಾಮಾನ ಇಲಾಖೆ ಹೇಳೋದೇನು? -
RCB: ಆರ್ಸಿಬಿ ಜೆರ್ಸಿ ಧರಿಸಿದವರಿಗೆ ಉಚಿತ ಪ್ರಯಾಣ; ಬೆಂಗಳೂರು ಆಟೋ ಚಾಲಕನ 'ಆಫರ್' ಪೋಸ್ಟರ್ ವೈರಲ್ -
ಕಾಲ್ತುಳಿತದಲ್ಲಿ ಮೃತಪಟ್ಟ 11 ಅಭಿಮಾನಿಗಳಿಗೆ ಆರ್ಸಿಬಿ-ಎಸ್ಆರ್ಎಚ್ ಆಟಗಾರರಿಂದ ವಿಶೇಷ ಗೌರವ -
ಚಿನ್ನಸ್ವಾಮಿಯಲ್ಲಿ ಕನ್ನಡಿಗ ದೇವ್, ವಿರಾಟ್ ಅಬ್ಬರದ ಬ್ಯಾಟಿಂಗ್: ಆರ್ಸಿಬಿ ವಿರುದ್ಧ ಎಸ್ಆರ್ಎಚ್ ಹೀನಾಯು ಸೋಲು -
MI Vs KKR: 14 ವರ್ಷಗಳ ಬಳಿಕ ಹೊಸ ಇತಿಹಾಸ ಬರೆದ ಮುಂಬೈ ಇಂಡಿಯನ್ಸ್; ಕೆಕೆಆರ್ ವಿರುದ್ಧ ಭರ್ಜರಿ ಜಯ -
RCB: ಆರ್ ಸಿಬಿ ತಂಡದ ಅಧಿಕೃತ ಪೇಮೆಂಟ್ಸ್ ಪಾಲುದಾರ ನವಿ ಯುಪಿಐ, ಫ್ಯಾನ್ಸ್ ಗಮನಿಸಿ -
IPL VIP Ticket: ಐಪಿಎಲ್ ಟಿಕೆಟ್ ನನಗಂತೂ ಬೇಡ: ಆರ್ಸಿಬಿ ಪಂದ್ಯದ ಟಿಕೆಟ್ ನಿರಾಕರಿಸಿದ ಬಿಜೆಪಿ ಶಾಸಕ ಸುರೇಶ್ ಕುಮಾರ್









Click it and Unblock the Notifications