Virat Kohli Retirement: ಟೀಂ ಇಂಡಿಯಾ ವಿರಾಟ್ ಕೊಹ್ಲಿ ನಿವೃತ್ತಿ..
Virat Kohli Retirement: ಇತ್ತೀಚೆಗಷ್ಟೇ ವಿರಾಟ್ ಕೊಹ್ಲಿ ಅವರು ಮುಂದಿನ ಸೀಸನ್‌ನಿಂದ ಆರ್‌ಸಿಬಿ ಪರ ಕಣಕ್ಕಿಳಿಯಲ್ಲ. ನಿವೃತ್ತಿ ಘೋಷಣೆ ಮಾಡಲಿದ್ದಾರೆ ಎನ್ನುವ ವದಂತಿಗಳು ಹರಡಿದ್ದವು. ಇದರ ಬೆನ್ನಲ್ಲೇ ಮತ್ತೆ ಇದೇ ಮಾತುಗಳು ಕೇಳಿಬರುತ್ತಿವೆ. ಇದಕ್ಕೆ ಸಾಕ್ಷಿಯೆಂಬಂತೆ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದಲ್ಲಿ ಗದ್ದಲ ಸೃಷ್ಟಿಸಿದೆ.
ಸ್ವತಃ ವಿರಾಟ್ ಕೊಹ್ಲಿ ಅವರೇ ತಮ್ಮ ನಿವೃತ್ತಿ ಬಗ್ಗೆ ಮಾತನಾಡಿರುವ ವಿಡಿಯೋ ಇದೀಗ ಸಖತ್ ಸದ್ದು ಮಾಡುತ್ತಿದೆ. ಇದರಿಂದ ಟೀಂ ಇಂಡಿಯಾ ಕ್ರಿಕೆಟ್ ದಿಗ್ಗಜ ವಿರಾಟ್ ಕೊಹ್ಲಿಗೆ ಆಸ್ಟ್ರೇಲಿಯಾ ಸರಣಿಯೇ ಕೊನೆಯಾಗುತ್ತಾ ಎಂಬ ವದಂತಿ ಹರಿದಾಡುತ್ತಿದೆ. ಹಾಗಾದ್ರೆ ವಿರಾಟ್ ಕೊಹ್ಲಿ ಅವರು ವಿಡಿಯೋದಲ್ಲಿ ಏನು ಹೇಳಿದ್ದಾರೆ? ಅಸಲಿ ಅತ್ಯ ಏನು ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ.

ಕ್ರಿಕೆಟ್ ದೇವರೆಂದೇ ಪ್ರಸಿದ್ಧಿ ಆಗಿರುವ ಸಚಿನ್ ತೆಂಡೂಲ್ಕರ್ ಬಳಿಕ ಭಾರತೀಯ ಕ್ರಿಕೆಟ್ ಪ್ರೇಮಿಗಳು ಅತ್ಯಂತ ಹೆಚ್ಚು ಆರಾಧಿಸುವ ಆಟಗಾರ ಅಂದ್ರೆ, ಅದು ವಿರಾಟ್ ಕೊಹ್ಲಿ ಅವರನ್ನ. ಆದರೆ, ಅವರು 2027ರ ವಿಶ್ವಕಪ್ ಆಡುವುದೂ ಅನುಮಾನ ಎನ್ನುವ ಮಾತುಗಳು ಜೋರಾಗಿ ಕೇಳಿಬರುತ್ತಿವೆ.
ಈಗಾಗಲೇ ವಿರಾಟ್ ಅವರು ಟೆಸ್ಟ್ ಮತ್ತು ಟಿ-20 ಮಾದರಿಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದು, ಸದ್ಯ ಏಕದಿನ ಮಾದರಿಯ ಕ್ರಿಕೆಟ್ ಮಾತ್ರ ಆಡುತ್ತಿದ್ದಾರೆ. ಆದರೆ, ಇದೀಗ ಈ ಮಾದರಿಗೂ ಅವರು ವಿದಾಯ ಹೇಳಲಿದ್ದಾರೆ ಎಂಬ ವದಂತಿಗಳು ಹರಡಿದ್ದು, ಇದರ ಬೆನ್ನಲ್ಲೇ ಅವರ ಹಳೆಯ ಸಂದರ್ಶನವೊಂದರಲ್ಲಿನ ಮಾತುಗಳು ವೈರಲ್ ಆಗುತ್ತಿದೆ.
ಸಂದರ್ಶನವೊಂದರಲ್ಲಿ ವಿರಾಟ್ ಕೊಹ್ಲಿ ಅವರು, "ನನಗೆ ಯಾವಾಗ ತಂಡಕ್ಕಾಗಿ ಏನೂ ಕೊಡುಗೆ ನೀಡಲು ಸಾಧ್ಯವಿಲ್ಲ ಅನಿಸುತ್ತದೆಯೋ ಆಗ ನಾನು ಆಡುವುದನ್ನು ನಿಲ್ಲಿಸುತ್ತೇನೆ. ನನ್ನ ದೇಹ ಸಹಕರಿಸುವುದಿಲ್ಲ ಎಂದು ಗೊತ್ತಾದಾಗ ಮತ್ತು ಮೈದಾನದಲ್ಲಿ ನಿಂತು ನನ್ನ ಅಗತ್ಯವಿಲ್ಲ ಎನಿಸಿದಾಗ ನಿವೃತ್ತಿಯಾಗುತ್ತೇನೆ," ಎಂದು ಕೊಹ್ಲಿ ಹೇಳಿದ್ದರು.
ಆದರೆ, ಇತ್ತೀಚೆಗಷ್ಟೇ ಆಸ್ಟ್ರೇಲಿಯಾಕ್ಕೆ ಕಾಲಿಟ್ಟ ತಕ್ಷಣ ನೀವು ಯಾವಾಗ ಸೋಲು ಒಪ್ಪಿಕೊಳ್ಳುತ್ತೀರೋ ಆಗ ನೀವು ವಿಫಲರಾಗುತ್ತೀರಿ ಎಂದು ಟ್ವೀಟ್ ಮಾಡಿದ್ದರು. ಅವರ ಈ ಮಾತು ನೋಡಿದರೆ ಸದ್ಯಕ್ಕೆ ಅವರು ನಿವೃತ್ತಿ ಆಗಲ್ಲ ಎಂದು ಹೇಳಲಾಗುತ್ತಿದೆ. ವಿರಾಟ್ ಇದ್ರೆ ತಂಡಕ್ಕೆ ಆನೆ ಬಲ ಇದ್ದಂತೆ. ಆದ್ದರಿಂದ ವಿರಾಟ್ ಕೊಹ್ಲಿ ಅವರು ಏಕದಿನ ಕ್ರಿಕೆಟ್‌ಗೆ ಯಾವುದೇ ಕಾರಣಕ್ಕೂ ಈಗಲೇ ರಾಜೀನಾಮೆ ನೀಡಬಾರದು ಎನ್ನುವುದು ಬಹುತೇಕರ ಮಾತಾಗಿದೆ.
ಮತ್ತೊಂದೆಡೆ ವಿರಾಟ್ ಕೊಹ್ಲಿ ಅವರು ಆರ್‌ಸಿಬಿಯ ಕಳಸದಂತಿದ್ದಾರೆ. 18 ವರ್ಷಗಳಿಂದ ಇದೇ ತಂಡದ ಪರ ಆಡಿಕೊಂಡು ಬಂದಿರುವ ಅವರು ಕೊನೆಗೂ ಟ್ರೋಫಿ ಗೆದ್ದುಕೊಟ್ಟರು. ಆದರೆ, ಈ ಟ್ರೋಫಿ ಗೆದ್ದಿದ್ದು ರಜತ್ ಪಾಟೀದಾರ್ ನಾಯಕತ್ವದಲ್ಲಿ. ಆದರೂ, ಅವರಿಗೆ ಹಿಂದೆ ಬಲವಾಗಿ ನಿಂತಿದ್ದು ಮಾತ್ರ ವಿರಾಟ್ ಕೊಹ್ಲಿ ಅವರು ಅಂದ್ರೆ, ತಪ್ಪಾಗಲಾರದು. ಆಡಿದ 17 ಆವೃತ್ತಿಗಳಲ್ಲೂ ಆರ್‌ಸಿಬಿ ಒಂದೇ ಒಂದು ಟ್ರೋಫಿ ಗೆದ್ದಿರಲಿಲ್ಲ. ಆದರೆ, 18ನೇ ಸೀಸನ್ ಫೈನಲ್‌ನಲ್ಲಿ ಭರ್ಜರಿಯಾಗಿ ಗೆಲ್ಲುವ ಮೂಲಕ ಕೊನೆಗೂ ಟ್ರೋಫಿ ಇಲ್ಲ ಎಂಬ ಕೊರಗಿಗೆ ತೆರೆ ಎಳೆಯಿತು.












Click it and Unblock the Notifications