Virat Kohli: ಲಿಯೋನೆಲ್ ಮೆಸ್ಸಿಯನ್ನೂ ಹಿಂದಿಕ್ಕಿ ಪ್ರತಿಷ್ಠಿತ ಪ್ರಶಸ್ತಿ ಗೆದ್ದ ವಿರಾಟ್ ಕೊಹ್ಲಿ

ಟೈಮ್ಸ್ ವರ್ಷದ ಅಥ್ಲೀಟ್ ಪ್ರಶಸ್ತಿಯನ್ನು ಗೆದ್ದ ನಂತರ, ಖ್ಯಾತ ಫುಟ್ಬಾಲ್ ಆಟಗಾರ ಲಿಯೋನೆಲ್ ಮೆಸ್ಸಿಯನ್ನು ಕೂಡ ಹಿಂದಿಕ್ಕಿರುವ ಭಾರತೀಯ ಕ್ರಿಕೆಟಿಗ ವಿರಾಟ್ ಕೊಹ್ಲಿ 'ಪ್ಯೂಬಿಟಿ ಸ್ಪೋರ್ಟ್ ಪುರುಷರ ಅಥ್ಲೀಟ್ ಆಫ್ ದಿ ಇಯರ್' ಪ್ರಶಸ್ತಿ ಗೆದ್ದುಕೊಂಡಿದ್ದಾರೆ.

500,000 ಮತಗಳಲ್ಲಿ 78 ಪ್ರತಿಶತವನ್ನು ಪಡೆದ ವಿರಾಟ್‌ ಕೊಹ್ಲಿ ಲಿಯೋನೆಲ್ ಮೆಸ್ಸಿಯನ್ನು ಸುಲಭವಾಗಿ ಹಿಂದಿಕ್ಕಿ ಪ್ರಶಸ್ತಿ ಗೆದ್ದುಕೊಂಡಿದ್ದಾರೆ. ಈ ಮೂಲಕ ತಾವು ಎಂತಹ ಜನಪ್ರಿಯ ಕ್ರಿಕೆಟಿಗ ಎನ್ನುವುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.

Virat Kohli

ಐಸಿಸಿ ಟ್ರೋಫಿ ಗೆಲ್ಲುವ ಕಾಯುವಿಕೆ ಮುಂದುವರೆದಿದ್ದರೂ, ಕೊಹ್ಲಿ 2023ರಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ಹಲವು ದಾಖಲೆಗಳನ್ನು ಬರೆದಿರುವ ಕೊಹ್ಲಿ, 50ನೇ ಏಕದಿನ ಶತಕವನ್ನು ಸಿಡಿಸಿ ಏಕದಿನ ಕ್ರಿಕೆಟ್‌ನಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ್ದಾರೆ.

ಅವರು ಏಕದಿನ ವಿಶ್ವಕಪ್‌ನಲ್ಲಿ 11 ಪಂದ್ಯಗಳಿಂದ 765 ರನ್ ಗಳಿಸಿದ್ದಾರೆ. ಅವರು 35 ಪಂದ್ಯಗಳಲ್ಲಿ 2048 ರನ್ ಗಳಿಸುವ ಮೂಲಕ ವಿಶ್ವದ ಎರಡನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿ ವರ್ಷವನ್ನು ಮುಗಿಸಿದರು.

78 ಪ್ರತಿಶತ ವೋಟ್ ಕೊಹ್ಲಿಗೆ

ಪ್ರಶಸ್ತಿ ಗೆದ್ದಿರುವ ಬಗ್ಗೆ ಪ್ಯೂಬಿಟಿ ಸ್ಪೋರ್ಟ್ಸ್‌ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, "ವಿರಾಟ್ ಕೊಹ್ಲಿ ನಿಮ್ಮ ಪ್ಯೂಬಿಟಿ ಸ್ಪೋರ್ಟ್ಸ್ ಆಫ್ ದಿ ಇಯರ್ ಪುರುಷರ ಅಥ್ಲೀಟ್. ಭಾರತೀಯ ಕ್ರಿಕೆಟ್ ಲೆಜೆಂಡ್‌ಗೆ ಅದ್ಭುತ ವರ್ಷ, ಫಾರ್ಮ್ಯಾಟ್‌ನಾದ್ಯಂತ ಉತ್ತಮವಾಗಿದ್ದು, ಈ ಪ್ರಕ್ರಿಯೆಯಲ್ಲಿ ಹಲವು ದಾಖಲೆಗಳನ್ನು ಪುಡಿಗಟ್ಟಿದ್ದಾರೆ." ಎಂದು ಹೇಳಿದೆ.

ವಿರಾಟ್ ಕೊಹ್ಲಿ - ಲಿಯೋನಲ್ ಮೆಸ್ಸಿ ನಡುವೆ ಯಾರಿಗೆ ಪ್ರಶಸ್ತಿ ಸೇರಬೇಕು ಎನ್ನುವುದನ್ನು ವೋಟಿಂಗ್ ಮೂಲಕ ಆಯ್ಕೆ ಮಾಡಲಾಗಿದೆ. 5 ಲಕ್ಷ ವೋಟ್‌ಗಳು ಬಂದಿದ್ದು, ಇದರಲ್ಲಿ ಕೊಹ್ಲಿ ಶೇಕಡಾ 78 ರಷ್ಟು ಮತಗಳನ್ನು ವಿರಾಟ್ ಕೊಹ್ಲಿ ಪಡೆದುಕೊಂಡಿದ್ದಾರೆ, ಶೇಕಡಾ 22 ರಷ್ಟು ಮತಗಳನ್ನು ಲಿಯೋನೆಲ್ ಮೆಸ್ಸಿ ಪಡೆದುಕೊಂಡಿದ್ದಾರೆ.

ನೊವಾಕ್ ಜೋಕೊವಿಕ್, ಕಾರ್ಲೋಸ್ ಅಲ್ಕರಾಜ್, ಕ್ರಿಸ್ಟಿಯಾನೋ ರೊನಾಲ್ಡೋ, ಪ್ಯಾಟ್ ಕಮ್ಮಿನ್ಸ್, ಮೈಕೆಲ್ ಸ್ಮಿತ್ ಸೇರಿದಂತೆ ವಿವಿಧ ಕ್ರೀಡೆಗಳ ದಿಗ್ಗಜರು ಪ್ರಶಸ್ತಿಯ ರೇಸ್‌ನಲ್ಲಿದ್ದರು. ಆದರೆ ಮೆಸ್ಸಿ ಮತ್ತು ಕೊಹ್ಲಿ ಫೈನಲ್‌ಗೆ ಬಂದಿದ್ದರು ಅಂತಿಮವಾಗಿ ಕೊಹ್ಲಿ ಪ್ರಶಸ್ತಿ ಗೆದ್ದುಕೊಳ್ಳುವಲ್ಲಿ ಯಶಸ್ವಿಯಾದರು.

2023ರ ವರ್ಷದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿರುವ ಕೊಹ್ಲಿ 2024ರಲ್ಲಿ ಕೂಡ ತಮ್ಮ ಉತ್ತಮ ಪ್ರದರ್ಶನ ಮುಂದುವರೆಸುವ ವಿಶ್ವಾಸದಲ್ಲಿದ್ದಾರೆ. 2024ರಲ್ಲಿ ನಡೆಯುವ ಟಿ20 ವಿಶ್ವಕಪ್‌ನಲ್ಲಿ ಕೊಹ್ಲಿ ಆಡುತ್ತಾರ ಎನ್ನುವ ಬಗ್ಗೆ ಇನ್ನೂ ನಿರ್ಧಾರವಾಗಿಲ್ಲವಾದರೂ, ಸದ್ಯ ಅವರು ಟೆಸ್ಟ್ ಸರಣಿಯತ್ತ ಹೆಚ್ಚಿನ ಗಮನ ನೀಡಲಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+