‘ಮಗನನ್ನೇ ಸರಿಯಾಗಿ ಬೆಳೆಸಲಿಲ್ಲ, ಕೊಹ್ಲಿಗೆ ಬುದ್ಧಿ ಯಾಕೆ ಹೇಳ್ತೀರ?’ ವಿರಾಟ್ ಕೊಹ್ಲಿ ಕೆಣಕಿದ್ದ ಸುನೀಲ್ ಗವಾಸ್ಕರ್‌ಗೆ...

ವಿರಾಟ್ ಕೊಹ್ಲಿ ಕೆಣಕಿ ಉಳಿದವರು ಇತಿಹಾಸದಲ್ಲೇ ಇಲ್ಲ ಎನ್ನಬಹುದು. ಯಾಕಂದ್ರೆ ಈ ನಮ್ಮ ಕೊಹ್ಲಿ ಕೆಣಕುವುದು ಒಂದೆ, ಬೆಂಕಿ ಕೆಂಡವನ್ನ ಜೇಬಲ್ಲಿ ಇಟ್ಟುಕೊಳ್ಳುವುದು ಕೂಡ ಒಂದೇ ಅಂತಾರೆ ವಿರಾಟ್ ಫ್ಯಾನ್ಸ್. ಹೀಗಿದ್ದಾಗ ಸುನೀಲ್ ಗವಾಸ್ಕರ್ ಸುಮ್ ಸುಮ್ನೆ ನಮ್ಮ ಕೊಹ್ಲಿ ಬಗ್ಗೆ ಮಾತನಾಡಿದ್ದಾರೆ ಅಂತಾ ಅಭಿಮಾನಿಗಳು ರೊಚ್ಚಿಗೆದ್ದಿದ್ದಾರೆ. ಇಷ್ಟೇ ಅಲ್ಲದೆ ಸುನೀಲ್ ಗವಾಸ್ಕರ್ ಮಗ ರೋಹನ್ ಗವಾಸ್ಕರ್ ಮಾಡಿದ್ದ ತಪ್ಪುಗಳ ಪಟ್ಟಿಯನ್ನೇ ಇದೀಗ ಫ್ಯಾನ್ಸ್ ಮುಂದಿಡುತ್ತಿದ್ದಾರೆ.

ನಿಮಗೆಲ್ಲಾ ಗೊತ್ತಿರುವಂತೆ ಸುನೀಲ್ ಗವಾಸ್ಕರ್ ಭಾರತ ಕ್ರಿಕೆಟ್ ತಂಡದ ಹಿರಿಯ ಆಟಗಾರ. ಹಲವು ವರ್ಷಗಳ ಕಾಲ ಭಾರತ ಕ್ರಿಕೆಟ್ ತಂಡಕ್ಕೆ ಆಟ ಆಡಿದ್ದರೂ, ಸುನೀಲ್ ಗವಾಸ್ಕರ್‌ಗೆ ಹಲವು ಕಂಟಕ ಅಂಟಿಕೊಂಡವು. ಇದು ಮಾತ್ರವಲ್ಲ ಸುನೀಲ್ ಗವಾಸ್ಕರ್ ಆಟದಲ್ಲಿ ತುಂಬಾ ಸ್ವಾರ್ಥ ತೋರಿಸುತ್ತಾರೆ, ಹಾಗೇ ರಾಜಕೀಯ ಕೂಡ ಮಾಡ್ತಾರೆ ಅನ್ನೋ ಆರೋಪವು ಕೂಡ ಕೇಳಿಬಂದವು. ಹೀಗಿದ್ದಾಗ ಸ್ವತಃ ಸುನೀಲ್ ಗವಾಸ್ಕರ್ ಮಗ ಮಾಡಿಕೊಂಡ ಎಡವಟ್ಟು ಆ ಕಾಲಕ್ಕೆ ದೊಡ್ಡ ಸಂಚಲನ ಸೃಷ್ಟಿ ಮಾಡಿತ್ತು. ಬಿಸಿಸಿಐ ಎದುರು ಹಾಕಿಕೊಂಡು ಐಸಿಎಲ್ ಆಯೋಜನೆ ಮಾಡಿದ್ದಾಗ, ಐಸಿಎಲ್ ಕ್ರೀಡಾಕೂಟ ಸೇರಿದ್ದ ರೋಹನ್ ಗವಾಸ್ಕರ್‌ರ ವಿರುದ್ಧ ಸಾಕಷ್ಟು ಆಕ್ರೋಶ ವ್ಯಕ್ತವಾಗಿತ್ತು.

Virat Kohli Fans Are Asking To Sunil Gavaskar About His Son Rohan Gavaskar

ಅವಕಾಶ ಸಿಕ್ಕರೂ ಪ್ರತಿಭೆ ತೋರಿಸಲಿಲ್ಲ!

ರೋಹನ್ ಗವಾಸ್ಕರ್‌ಗೆ ಭಾರತ ಕ್ರಿಕೆಟ್ ತಂಡವೂ ಸೇರಿದಂತೆ ದೇಸಿ ಕ್ರಿಕೆಟ್ ಮೈದಾನಗಳಲ್ಲಿ ಸಾಕಷ್ಟು ಅವಕಾಶ ಸಿಕ್ಕಿತ್ತು. ಆದ್ರೆ ಸುನೀಲ್ ಗವಾಸ್ಕರ್ ಮಗನಾಗಿ ಕೂಡ ರೋಹನ್ ಗವಾಸ್ಕರ್ ಸದ್ದು ಮಾಡಲೇ ಇಲ್ಲ. ಹಲವು ಅವಕಾಶ ಪಡೆದರೂ ರೋಹನ್ ಗವಾಸ್ಕರ್ ಸರಿಯಾಗಿರುವ ಆಟ ಆಡಲೇ ಇಲ್ಲ. ಹೀಗೆ ರೋಹನ್ ಗವಾಸ್ಕರ್ ಭಾರತ ಕ್ರಿಕೆಟ್ ತಂಡಕ್ಕೆ ಎಂಟ್ರಿ ಕೊಟ್ಟಷ್ಟೇ ಸ್ಪೀಡ್ ಆಗಿ ಹೊರಗೆ ಹೋದರು.

ಹೀಗಿದ್ದರೂ ವಿರಾಟ್ ಕೊಹ್ಲಿ ಆಟದ ಬಗ್ಗೆ ಈಗ ಸುನೀಲ್ ಗವಾಸ್ಕರ್ ಮಾತನಾಡುತ್ತಿರುವುದು ಭಾರಿ ಆಕ್ರೋಶ ಮೊಳಗುವಂತೆ ಮಾಡಿದೆ. ಇದೇ ಕಾರಣಕ್ಕೆ ವಿರಾಟ್ ಕೊಹ್ಲಿ ಫ್ಯಾನ್ಸ್ ಸುನೀಲ್ ಗವಾಸ್ಕರ್ ವಿರುದ್ಧ ಗುಡುಗುತ್ತಿದ್ದಾರೆ, ಹಾಗೇ ಸುನೀಲ್ ಪುತ್ರ ರೋಹನ್‌ರ ವಿಚಾರ ಪ್ರಸ್ತಾಪ ಮಾಡಿ ಕೆಣಕುತ್ತಿದ್ದಾರೆ. ಇದು ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಸಂಚಲನ ಸೃಷ್ಟಿಸಿದೆ.

ಸ್ಟ್ರೈಕ್ ರೇಟ್ ಕಿರಿಕ್ ಶುರುವಾಗಿದ್ದು ಹೇಗೆ?

ಕೆಲ ದಿನಗಳ ಹಿಂದೆ ಐಪಿಎಲ್ ಕಾಮೆಂಟರಿ ಹೇಳುವಾಗ ಭಾರತ ಕ್ರಿಕೆಟ್ ಟೀಂನ ಮಾಜಿ ಆಟಗಾರ ಸುನಿಲ್ ಗವಾಸ್ಕರ್ ಒಂದು ಮಾತು ಹೇಳಿದ್ದರು. ಅದರಲ್ಲೂ ವಿರಾಟ್ ಕೊಹ್ಲಿ ಸ್ಲೋ ಬ್ಯಾಟಿಂಗ್ ಆಡುತ್ತಾರೆ, ಅವರ ಸ್ಟ್ರೈಕ್ ರೇಟ್ ಸರಿ ಇಲ್ಲ ಅಂತಾ ಹೇಳಿದ್ದರು. ಈ ವಿಚಾರ ದೊಡ್ಡ ಚರ್ಚೆಗೆ ಕಾರಣವಾಗಿತ್ತು. ಸ್ವತಃ ವಿರಾಟ್ ಕೊಹ್ಲಿ ಕೂಡ ಈ ಬಗ್ಗೆ ಪ್ರತಿಕ್ರಿಯೆ ನೀಡಿ ಕಮೆಂಟ್ರಿ ಮಾಡುತ್ತಾ ನನ್ನ ಸ್ಟ್ರೈಕ್ ರೇಟ್ ಬಗ್ಗೆ ಮಾತನಾಡೋದು ಬೇಡ ಅಂತಾ ವಾರ್ನಿಂಗ್ ಕೊಟ್ಟಿದ್ದರು. ವಿರಾಟ್ ಕೊಹ್ಲಿ ಎಚ್ಚರಿಕೆ ನೀಡಿದ ನಂತರ ಕೂಡ ಮತ್ತೊಮ್ಮೆ ಸುನೀಲ್ ಗವಾಸ್ಕರ್ ಕಿರಿಕ್ ಮಾಡಿ, ಗಮನ ಸೆಳೆದಿದ್ದರು. ಹೀಗಾಗಿ ಕೊಹ್ಲಿ ಅಭಿಮಾನಿಗಳು ಈಗ ಸರಿಯಾಗೇ ಉತ್ತರ ನೀಡುತ್ತಿದ್ದಾರೆ.

ಭಾರತದ ಸೋಲಿಗೆ ಗವಾಸ್ಕರ್ ಕಾರಣ?

1975ರ ಜೂನ್ 07 ರಂದು ಇಂಗ್ಲೆಂಡ್ ನೆಲದಲ್ಲಿ ನಡೆದಿದ್ದ ಕ್ರಿಕೆಟ್ ವಿಶ್ವಕಪ್ ಪಂದ್ಯದಲ್ಲಿ, ಮೊದಲು ಬ್ಯಾಟಿಂಗ್ ಮಾಡಿದ್ದ ಇಂಗ್ಲೆಂಡ್ ತಂಡ ಆಗ ನಿಗದಿ ಮಾಡಲಾಗುತ್ತಿದ್ದ 60 ಓವರ್ ಆಟದಲ್ಲಿ ಬರೋಬ್ಬರಿ 334 ರನ್ ಕಲೆಹಾಕಿತ್ತು. ಆಗಿನ ಕಾಲಕ್ಕೆ ಇದು ದೊಡ್ಡ ಮೊತ್ತವೇ ಆಗಿತ್ತು. 4 ವಿಕೆಟ್ ನಷ್ಟಕ್ಕೆ 334 ರನ್ ಗಳಿಸಿದ್ದ ಇಂಗ್ಲೆಂಡ್ ಭಾರತಕ್ಕೆ 335 ರನ್ ಗುರಿಯನ್ನ ಕೊಟ್ಟಿತ್ತು. ಆದರೆ ಭಾರತ ತಂಡ ನಿಗದಿತ 60 ಓವರ್ ಆಟದಲ್ಲಿ, 132 ರನ್ ಗಳಿಸಿ ಕೇವಲ 3 ವಿಕೆಟ್ ಕಳೆದುಕೊಂಡಿತ್ತು. ಎಲ್ಲರೂ ಸೇರಿ ಬಾಲ್ ವೇಸ್ಟ್ ಮಾಡಿ ಮ್ಯಾಚ್ ಸೋತಿದ್ದಾರೆ ಅಂತಾ ಅಭಿಮಾನಿಗಳು ರೊಚ್ಚಿಗೆದ್ದಿದ್ದರು.

ಅದ್ರಲ್ಲೂ ಇದೇ ಸುನಿಲ್ ಗವಾಸ್ಕರ್ ಭರ್ಜರಿ 174 ಬಾಲ್ ಆಡಿ ಕೇವಲ 36 ರನ್ ಗಳಿಸಿದ್ದರು. ಈ ಮೂಲಕ ಸುನಿಲ್ ಗವಾಸ್ಕರ್ ಅಂದು ಕೇವಲ 20.68 ಸ್ಟ್ರೈಕ್ ರೇಟ್‌ನಲ್ಲಿ ಆಟ ಮುಗಿಸಿದ್ರು. ಹೀಗಾಗಿ ಇದೀಗ ಕೊಹ್ಲಿ ಫ್ಯಾನ್ಸ್ ಈ ವಿಡಿಯೋ ಮುಂದಿಟ್ಟು ಪ್ರಶ್ನೆ ಮಾಡುತ್ತಿದ್ದಾರೆ. ಹಾಗೇ ಸುನೀಲ್ ಗವಾಸ್ಕರ್ ಅವರಿಗೆ, ವಿರಾಟ್ ಕೊಹ್ಲಿ ಸ್ಟ್ರೈಕ್ ರೇಟ್ ಬಗ್ಗೆ ಮಾತನಾಡುವ ಹಕ್ಕು ಇಲ್ಲ ಅಂತಿದ್ದಾರೆ ಕೊಹ್ಲಿ ಪ್ಯಾನ್ಸ್. 20 ಸ್ಟ್ರೈಕ್ ರೇಟ್ ಪಡೆದಿದ್ದ ಸುನಿಲ್ ಗವಾಸ್ಕರ್ ಈಗ ವಿರಾಟ್ ಕೊಹ್ಲಿ ಅವರ 118 ಸ್ಟ್ರೈಕ್ ರೇಟ್ ಬಗ್ಗೆ ಯಾಕೆ ಮಾತನಾಡಬೇಕು? ಅಂತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+