Virat Kohli: ಆಸ್ಟ್ರೇಲಿಯಾ ವಿರುದ್ಧ ಪಂದ್ಯದಲ್ಲಿ ಹೊಸ ದಾಖಲೆ ಬರೆದ 'ಚೇಸ್ ಕಿಂಗ್' ವಿರಾಟ್ ಕೊಹ್ಲಿ
301ನೇ ಏಕದಿನ ಪಂದ್ಯ ಆಡುತ್ತಿರುವ ವಿರಾಟ್ ಕೊಹ್ಲಿ ಈಗ ಏನೇ ಮಾಡಿದ್ರೂ ಅಲ್ಲೊಂದು ದಾಖಲೆ ನಿರ್ಮಾಣವಾಗುತ್ತೆ. ಆಸ್ಟ್ರೇಲಿಯಾ ವಿರುದ್ಧದ ಚಾಂಪಿಯನ್ಸ್ ಟ್ರೋಫಿ ಸೆಮಿಫೈನಲ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಹಲವು ದಾಖಲೆಗಳನ್ನು ಬರೆದಿದ್ದಾರೆ. ಮೊದಲು ಕ್ಯಾಚ್ ವಿಚಾರದಲ್ಲಿ ದಾಖಲೆ ಮಾಡಿದ ಅವರು, ಬಳಿಕ ಬ್ಯಾಟಿಂಗ್‌ನಲ್ಲೂ ಹೊಸ ದಾಖಲೆ ಮಾಡಿದರು.
ಏಕದಿನ ಕ್ರಿಕೆಟ್‌ನಲ್ಲಿ ಚೇಸ್ ಮಾಸ್ಟರ್ ಎಂದು ವಿರಾಟ್ ಕೊಹ್ಲಿಯನ್ನು ಕರೆಯಲಾಗುತ್ತದೆ. ಅದು ಸುಮ್ಮನೆ ಬಂದಿದ್ದ ಒಂದೆರಡು ಪಂದ್ಯಗಳಲ್ಲಿ ಹತ್ತಾರು ಪಂದ್ಯಗಳಲ್ಲಿ ಚೇಸಿಂಗ್ ಮಾಡುವಾಗ ಭಾರತವನ್ನು ಗೆಲ್ಲಿಸಿದ್ದಾರೆ. ಇತ್ತೀಚೆಗೆ ನಡೆದ ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ಕೂಡ ಕೊಹ್ಲಿ ಮಾಡಿದ್ದು ಇದನ್ನೇ. ಕೊನೆಯವರೆಗೂ ಔಟಾಗದೆ ಉಳಿದು ಭಾರತಕ್ಕೆ ಗೆಲುವು ತಂದುಕೊಟ್ಟಿದ್ದರು.

8000 ರನ್ ಗಡಿ ದಾಟಿದ ವಿರಾಟ್ ಕೊಹ್ಲಿ
ಮಂಗಳವಾರ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಕೊಹ್ಲಿ ಮತ್ತೊಮ್ಮೆ ಚೇಸ್ ಕಿಂಗ್ ಎನ್ನುವುದನ್ನು ಸಾಬೀತುಪಡಿಸಿದರು. ಬರೀ ಚೇಸಿಂಗ್ ಮಾಡುವ ಸಂದರ್ಭದಲ್ಲಿ 8,000 ರನ್ ಪೂರೈಸಿದ ದಾಖಲೆ ಮಾಡಿದರು. ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ಏಕದಿನ ಕ್ರಿಕೆಟ್‌ನಲ್ಲಿ 14,000 ರನ್ ಪೂರೈಸಿದ ಸಾಧನೆ ಮಾಡಿದ್ದರು. 14,000 ರನ್ ಗಳಿಸಿದ ಜಗತ್ತಿನ ಮೂರನೇ ಆಟಗಾರ ಮತ್ತು ವೇಗವಾಗಿ ಇಷ್ಟು ರನ್ ಗಳಿಸಿದ ಮೊದಲ ಆಟಗಾರ ಎನಿಸಿಕೊಂಡರು.
159 ಏಕದಿನ ಪಂದ್ಯಗಳಲ್ಲಿ ಚೇಸಿಂಗ್ ಮಾಡುವಾಗ ವಿರಾಟ್ ಕೊಹ್ಲಿ 64 ಕ್ಕಿಂತ ಹೆಚ್ಚು ಸರಾಸರಿ ಹೊಂದಿದ್ದಾರೆ. ಅದರಲ್ಲಿ 35 ಬಾರಿ ನಾಟೌಟ್ ಆಗಿ ಉಳಿದುಕೊಂಡಿದ್ದಾರೆ. 183 ಚೇಸಿಂಗ್ ವೇಳೆ ವಿರಾಟ್ ಕೊಹ್ಲಿ ಗಳಿಸಿರುವ ಹೆಚ್ಚು ವೈಯಕ್ತಿಕ ಸ್ಕೋರ್. 93 ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟಿಂಗ್ ಮಾಡಿದ್ದು ಚೇಸಿಂಗ್ ವೇಳೆ 28 ಶತಕ ಗಳಿಸಿದ್ದಾರೆ. 40 ಅರ್ಧಶತಕ ಬಾರಿಸಿದ್ದಾರೆ. ಸಚಿನ್ ತೆಂಡೂಲ್ಕರ್ ಬಳಿಕ ಚೇಸ್ ಮಾಡುವಾಗ 8000 ರನ್ ಗಳಿಸಿದ ಎರಡನೇ ಆಟಗಾರ ಎನಿಸಿಕೊಂಡಿದ್ದಾರೆ.
ಕ್ಯಾಚ್‌ನಲ್ಲಿ ಕೂಡ ದಾಖಲೆ
ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಕ್ಯಾಚ್ ಪಡೆದ ಫಿಲ್ಡರ್ ಗಳ ಪೈಕಿ ಆಸ್ಟ್ರೇಲಿಯಾ ಮಾಜಿ ನಾಯಕ ರಿಕಿ ಪಾಂಟಿಂಗ್ ದಾಖಲೆಯನ್ನು ಮುರಿದಿದ್ದಾರೆ. ಮಹೇಲಾ ಜಯವರ್ಧನೆ ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಕ್ಯಾಚ್ ಪಡೆದಿದ್ದು ವಿರಾಟ್ ಕೊಹ್ಲಿ ಈಗ ಎರಡನೇ ಸ್ಥಾನದಲ್ಲಿದ್ದಾರೆ.












Click it and Unblock the Notifications