Virat Kohli: ಗೆದ್ದು.. ಸೋತು.. ಗೆದ್ದು ಬೀಗಿದ ಭಾರತ... ವಿರಾಟ್ ಕೊಹ್ಲಿ ವೀರಾವೇಶ!

ಭಾರತದಲ್ಲಿ ಕ್ರಿಕೆಟ್ ಕೇವಲ ಆಟವಲ್ಲ, ಭಾರತೀಯರು ಕ್ರಿಕೆಟ್ ಆಟವನ್ನು ಪ್ರೀತಿಸುವುದಕ್ಕಿಂತಲೂ ಹೆಚ್ಚಾಗಿ ಪೂಜಿಸುತ್ತಾರೆ. ಕ್ರಿಕೆಟ್ ಎಂಬ ಕ್ರೀಡೆ ಭಾರತೀಯರ ರಕ್ತದಲ್ಲೇ ಬೆರೆತು ಹೋಗಿದೆ. ಹೀಗೆ ಕ್ರಿಕೆಟ್ ಬಗ್ಗೆ ಇಷ್ಟೆಲ್ಲಾ ಪ್ರೀತಿ & ಗೌರವ ಭಾರತೀಯರಲ್ಲಿ ಮೂಡಿದ್ದೇ 1983 ಏಕದಿನ ವಿಶ್ವಕಪ್ ಗೆಲುವಿನ ನಂತರ. ಶತಮಾನಗಳ ಇತಿಹಾಸ ಹೊಂದಿರುವ ಭಾರತೀಯ ಕ್ರಿಕೆಟ್ ತಂಡವು ಕೆಲವು ದಿನಗಳ ಹಿಂದಷ್ಟೇ ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿಯನ್ನು ಭೀಕರವಾಗಿ ಸೋತು ಹೋಗಿತ್ತು. ಭಾರತೀಯ ಕ್ರಿಕೆಟ್ ಅಭಿಮಾನಿಗಳು ಈ ಘಟನೆಯ ನಂತರ ಆಕ್ರೋಶ ಹೊರ ಹಾಕುತ್ತಾ ಇದ್ದರು. ಆದರೆ ಇವತ್ತು ಸೇಡಿಗೆ ಸೇಡು ತೀರಿದೆ, ಸೌತ್ ಆಫ್ರಿಕಾ ಹೆದರಿ ಮೂಲೆ ಸೇರಿದೆ.

ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ದಕ್ಷಿಣ ಆಫ್ರಿಕಾ ತಂಡಕ್ಕೆ 4ನೇ ಓವರ್ ಸಮಯದಲ್ಲೇ ಮೊದಲ ವಿಕೆಟ್ ಕೈಗೆ ಸಿಕ್ಕಿತ್ತು. ಆದರೆ ಯಶಸ್ವಿ ಜೈಸ್ವಾಲ್ ಔಟ್ ಆದ ನಂತರ ನಿಜವಾದ ಆಟ ಶುರುವಾಗಿತ್ತು. ದಶಕಗಳ ಕಾಲ ಒಟ್ಟಿಗೆ ಆಟ ಆಡಿದ್ದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಮತ್ತೊಮ್ಮೆ ಇಡೀ ಪ್ರಪಂಚಕ್ಕೆ ತಮ್ಮ ಕೆಪಾಸಿಟಿ ತೋರಿಸಿದರು. ತಮ್ಮನ್ನು ಯಾಕೆ ಇನ್ನೂ ಆಡಿಸಬೇಕು? ಎಂಬುದನ್ನ ವಿರೋಧಿಗಳಿಗೆ ಸಾರಿ ಸಾರಿ ಹೇಳಿದ್ದಾರೆ. ರೋಹಿತ್ ಶರ್ಮಾ & ವಿರಾಟ್ ಕೊಹ್ಲಿ 100ಕ್ಕೂ ಹೆಚ್ಚು ರನ್ ಬಾರಿಸುವ ಮೂಲಕ ಶತಕದ ಜೊತೆಯಾಟ ಆಡಿದರು.

Virat Kohli Batting And India Victory Against The South Africa

ವಿರಾಟ್ ಕೊಹ್ಲಿ ವೀರಾವೇಶ!

ಸೌತ್ ಆಫ್ರಿಕಾ ವಿರುದ್ಧ ಶತಕ ಬಾರಿಸಿ ವಿರೋಧಿಗಳಿಗೆ ಉತ್ತರ ಕೊಡಲೇ ಬೇಕು ಅನ್ನೋ ತೀರ್ಮಾನ ಮಾಡಿಕೊಂಡೇ ಕಿಂಗ್ ವಿರಾಟ್ ಕೊಹ್ಲಿ ಇವತ್ತು ಅಖಾಡಕ್ಕೆ ಎಂಟ್ರಿ ಕೊಟ್ಟಂತೆ ಕಾಣುತ್ತಿತ್ತು. ಈ ಹಂತದಲ್ಲಿ ಆರಂಭದಲ್ಲೇ ಭರ್ಜರಿಯಾಗಿ ಬ್ಯಾಟಿಂಗ್ ಆರಂಭಿಸಿದ್ದ ವಿರಾಟ್ ಕೊಹ್ಲಿ, ಎದುರಾಳಿ ಬೌಲಿಂಗ್ ಪಡೆಯನ್ನ ಪುಡಿ ಪುಡಿ ಮಾಡಿ ಹಾಕಿದರು. ಹೀಗೆ ನೋಡ ನೋಡುತ್ತಲೇ ಬರೋಬ್ಬರಿ 7 ಸಿಕ್ಸರ್ ಬಾರಿಸಿ ಮಿಂಚಿದ್ದರು.

ಅರ್ಧಶತಕ ಬಾರಿಸಿದ ವಿರಾಟ್ ಕೊಹ್ಲಿ ಸೆಂಚ್ಯುರಿ ಬಾರಿಸೋದು ಕೂಡ ಗ್ಯಾರಂಟಿ ಅನ್ನೋ ಹಿಂಟ್ ಕೊಟ್ಟು ಮುಂದೆ ನುಗ್ಗಿದ್ದರು. ಅಂತಿಮವಾಗಿ, ಶತಕೋಟಿ ಭಾರತೀಯರ ಕನಸು ಇಂದು ನನಸಾಗಿ ಹೋಗಿತ್ತು. ವಿರಾಟ್ ಕೊಹ್ಲಿ 120 ಬಾಲ್ ಆಡಿ ಭರ್ಜರಿ 135 ರನ್ ಬಾರಿಸಿ, 7 ಸಿಕ್ಸರ್ & 11 ಬೌಂಡರಿ ಚಚ್ಚಿ ಬಿಸಾಡುವ ಮೂಲಕ ಏಕದಿನ ಪಂದ್ಯಗಳಲ್ಲಿ ತಮ್ಮ 52ನೇ ಶತಕ ಸಂಪಾದಿಸಿದರು. ಹೀಗೆ ಹರಿಣಗಳಿಗೆ ಬೌಲಿಂಗ್ ಪಾಠ ಮಾಡಿದ ವಿರಾಟ್ ಕೊಹ್ಲಿ ಭಾರತ ತಂಡ 349 ರನ್ ಗಳಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+