Virat Kohli: ಗಂಭೀರ್ ಜೊತೆ ಜಗಳ; ಬಿಸಿಸಿಐಗೆ ಸ್ಪಷ್ಟ ಸಂದೇಶ ಕೊಟ್ಟ ವಿರಾಟ್ ಕೊಹ್ಲಿ

ಗೌತಮ್ ಗಂಭೀರ್ ಭಾರತ ತಂಡದ ಮುಖ್ಯ ಕೋಚ್ ಆಗಿ ಮೊದಲನೇ ಸವಾಲಿಗೆ ಸಜ್ಜಾಗಿದ್ದಾರೆ. ಜುಲೈ 27ರಿಂದ ಶ್ರೀಲಂಕಾ ವಿರುದ್ಧ ಟಿ20 ಸರಣಿ ಆರಂಭವಾಗಲಿದ್ದು, ಬಳಿಕ ಮೂರು ಪಂದ್ಯಗಳ ಏಕದಿನ ಸರಣಿ ನಡೆಯಲಿದೆ. ಗುರುವಾರ ಸರಣಿಗೆ ಭಾರತ ತಂಡವನ್ನು ಆಯ್ಕೆ ಮಾಡಲಾಗಿದೆ.

ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯಲ್ಲಿ ಆಡಬೇಕು ಎನ್ನುವ ಗಂಭೀರ್ ಮನವಿಗೆ ಇಬ್ಬರೂ ಆಟಗಾರರು ಸ್ಪಂದಿಸಿದ್ದಾರೆ. ಇಬ್ಬರೂ ಕೂಡ ಶ್ರೀಲಂಕಾ ವಿರುದ್ಧ ಏಕದಿನ ಸರಣಿಯಲ್ಲಿ ಆಡಲು ಸಜ್ಜಾಗಿದ್ದಾರೆ.

Virat Kohli Assures BCCI Past With Gautam Gambhir Won t Affect Team India

ರೋಹಿತ್, ವಿರಾಟ್, ಗೌತಮ್ ಗಂಭೀರ್ ಭಾರತ ತಂಡಕ್ಕಾಗಿ ಜೊತೆಯಲ್ಲಿ ಆಡಿದವರು. ಈಗ ಗಂಭೀರ್ ಕೋಚ್ ಆಗಿದ್ದು, ತಂಡವನ್ನು ಹೇಗೆ ನಿಭಾಯಿಸುತ್ತಾರೆ ಎನ್ನುವ ಕುತೂಹಲ ಇದೆ. ಅದರಲ್ಲೂ ಗಂಭೀರ್ ಮತ್ತು ವಿರಾಟ್ ನಡುವೆ ಬಾಂಧವ್ಯ ಹೇಗಿರುತ್ತದೆ ಎನ್ನುವ ಪ್ರಶ್ನೆ ಇದೆ. ಈ ಇಬ್ಬರೂ ಈ ಮೊದಲು ಮೈದಾನದಲ್ಲಿ ಕಿತ್ತಾಡಿಕೊಂಡಿದ್ದರು. ಗಂಭೀರ್ ಹಲವು ಬಾರಿ ಕೊಹ್ಲಿಯನ್ನು ಟೀಕಿಸಿದ್ದರು. ಈಗ ಅವರೇ ಕೋಚ್ ಆಗಿದ್ದಾರೆ.

ವಿರಾಟ್ ಕೊಹ್ಲಿ ಸಂದೇಶ

ಈ ಹಿಂದೆ ಗಂಭೀರ್ ಅವರೊಂದಿಗಿನ ಭಿನ್ನಾಭಿಪ್ರಾಯಗಳು ಭಾರತ ತಂಡದೊಳಗಿನ ಅವರ ಸಂಬಂಧದ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ವಿರಾಟ್ ಕೊಹ್ಲಿ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಗೆ (ಬಿಸಿಸಿಐ) ಭರವಸೆ ನೀಡಿದ್ದಾರೆ ಎಂದು ಕ್ರಿಕ್‌ಬಜ್‌ ವರದಿ ಮಾಡಿದೆ. ಇಬ್ಬರು ಕೂಡ ತಂಡವನ್ನು ಗೆಲ್ಲಿಸುವ ಕೆಲಸ ಮಾಡುವ ಕಾರಣ ಮಂಡಳಿ ಈ ಬಗ್ಗೆ ಭಯಪಡುವ ಅಗತ್ಯವಿಲ್ಲ ಎಂದು ವರದಿ ಹೇಳಿದೆ.

ಗಂಭೀರ್ ಮತ್ತು ವಿರಾಟ್ ಕೊಹ್ಲಿ ಇಬ್ಬರಿಗೂ ದೇಶಕ್ಕಾಗಿ ಆಡುವುದು ಹೆಮ್ಮೆಯ ವಿಚಾರ. ಇಬ್ಬರ ನಡುವೆ ಮೊದಲು ಭಿನ್ನಾಭಿಪ್ರಾಯ ಇದ್ದರೂ ದೇಶಕ್ಕಾಗಿ ಆಡುವಾಗ ಇಬ್ಬರ ಗುರಿ ಗೆಲ್ಲುವುದೇ ಆಗಿರುವುದರಿಂದ ಯಾವುದೇ ಸಮಸ್ಯೆಗೂ ಆಸ್ಪದ ಇರುವುದಿಲ್ಲ.

ಐಪಿಎಲ್‌ನಲ್ಲಿ ಎದುರಾಳಿ ತಂಡಗಳ ನಾಯಕರಾಗಿ ಮತ್ತು ಕಳೆದ ಎರಡು ವರ್ಷಗಳಲ್ಲಿ ಗಂಭೀರ್ ಫ್ರಾಂಚೈಸಿಗಳ ಮಾರ್ಗದರ್ಶಕರಾಗಿದ್ದಾ ಮತ್ತು ವಿರಾಟ್ ಕೊಹ್ಲಿ ಇಬ್ಬರೂ ಮೈದಾನದಲ್ಲಿ ಘರ್ಷಣೆಯಲ್ಲಿ ಪಾಲ್ಗೊಂಡಿದ್ದಾರೆ. ಗಂಭೀರ್ ಕೋಲ್ಕತ್ತಾ ನೈಟ್ ರೈಡರ್ಸ್‌ಗೆ ಮೆಂಟರ್ ಆಗಿ ಬದಲಾದ ನಂತರ, ಐಪಿಎಲ್ 2024 ರ ಪಂದ್ಯದ ವೇಳೆ ಭೇಟಿಯಾದಾಗ ಇಬ್ಬರು ಪರಸ್ಪರ ಅಪ್ಪಿಕೊಳ್ಳುವ ಮೂಲಕ ಜಗಳಕ್ಕೆ ಅಂತ್ಯ ಹಾಡಿದ್ದಾರೆ.

ಕೆಲವು ತಿಂಗಳ ಹಿಂದೆ ಗಂಭೀರ್ ಅವರು ಕೊಹ್ಲಿಯೊಂದಿಗಿನ ತಮ್ಮ ಸಂಬಂಧದ ಬಗ್ಗೆ ಮಾತನಾಡಿದ್ದರು, ಇಬ್ಬರ ನಡುವೆ ಯಾವ ರೀತಿಯ ಬಂಧವಿದೆ ಎಂದು ದೇಶಕ್ಕೆ ತಿಳಿದಿಲ್ಲ ಎಂದು ಹೇಳಿದರು.

"ವಾಸ್ತವ ನೀವು ಅರ್ಥ ಮಾಡಿಕೊಂಡಿರುವುದಕ್ಕಿಂತ ಬೇರೆಯೇ ಇದೆ. ವಿರಾಟ್ ಕೊಹ್ಲಿಯೊಂದಿಗಿನ ನನ್ನ ಸಂಬಂಧವು ಈ ದೇಶಕ್ಕೆ ತಿಳಿಯಬೇಕಾದ ವಿಷಯವಲ್ಲ. ನನಗೆ ತನ್ನನ್ನು ವ್ಯಕ್ತಪಡಿಸಲು ಮತ್ತು ನಮ್ಮ ಆಯಾ ತಂಡಗಳನ್ನು ಗೆಲ್ಲಲು ಸಹಾಯ ಮಾಡಲು ಅವನಿಗೆ ಎಷ್ಟು ಹಕ್ಕಿದೆ" ಎಂದು ಗಂಭೀರ್ ಹೇಳಿದ್ದಾರೆ.

ನವೀನ್-ಉಲ್-ಹಕ್ ಮತ್ತು ಗೌತಮ್ ಗಂಭೀರ್ ಅವರನ್ನು ಅಪ್ಪಿಕೊಂಡ ನಂತರ ಜನರು ನಿರಾಶೆಗೊಂಡಿದ್ದಾರೆ ಎಂದು ವಿರಾಟ್ ಕೂಡ ಒಪ್ಪಿಕೊಂಡಿದ್ದರು.

"ನನ್ನ ವರ್ತನೆಯಿಂದ ತುಂಬಾ ಜನ ನಿರಾಸೆಗೊಂಡಿದ್ದಾರೆ. ನಾನು ನವೀನ್‌ನನ್ನು ತಬ್ಬಿಕೊಂಡೆ, ಮತ್ತು ಮರುದಿನ, ಗೌತಮ್ ಗಂಭೀರ್ ಬಂದು ನನ್ನನ್ನು ತಬ್ಬಿಕೊಂಡರು. ಇದರಿಂದ ಜನರಿಗೆ ಮಸಾಲೆ ಸಿಗುವುದು ನಿಂತಿತು, ಅದು ಕೆಲವರಿಗೆ ಬೇಸರ ತರಿಸಿದೆ" ಎಂದಿದ್ದರು.

ಕೊಹ್ಲಿ ಮತ್ತು ನಾಯಕ ರೋಹಿತ್ ಶರ್ಮಾ ಇಬ್ಬರೂ ಶ್ರೀಲಂಕಾ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಗೆ ಲಭ್ಯರಾಗುತ್ತಾರೆ ಎಂದು ಮೊದಲಿಗೆ ನಿರೀಕ್ಷಿಸಿರಲಿಲ್ಲ. ಆದರೆ, ಇದು ಗಂಭೀರ್ ಅವರಿಗೆ ಕೋಚ್ ಆಗಿ ಮೊದಲ ಸರಣಿ ಆಗಿರುವುದರಿಂದ ಇಬ್ಬರು ದಿಗ್ಗಜ ಆಟಗಾರರು ಸರಣಿಗೆ ಲಭ್ಯರಾಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+