RCB vs CSK: ಮೈದಾನದಲ್ಲೇ ಕಣ್ಣೀರು ಹಾಕಿದ ವಿರಾಟ್, ಅನುಷ್ಕಾ
ಆರ್ ಸಿಬಿ ಅಭಿಮಾನಿಗಳನ್ನು ಈಗ ಹಿಡಿಯುವವರೇ ಯಾರು ಇಲ್ಲ. ಶನಿವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ರಣ ರೋಚಕ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು 27 ರನ್‌ಗಳಿಂದ ಸೋಲಿಸಿ ಪ್ಲೇಆಫ್‌ಗೆ ಅರ್ಹತೆ ಪಡೆದಿದೆ.
ಒಂದು ವಾರದ ಹಿಂದೆ ಆರ್ ಸಿಬಿ ಪ್ಲೇಆಫ್ ತಲುಪುತ್ತೆ ಎಂದರೆ ಆಡಿಕೊಂಡು ನಗುತ್ತಿದ್ದರು, ಆದರೆ ಅವರೆಲ್ಲಾ ಇಂದು ಸೈಲೆಂಟ್ ಆಗುವಂತೆ ಆಡಿದ್ದು, ಆರ್ ಸಿಬಿ ಗೆಲ್ಲುವ ಕಿಚ್ಚಿಗೆ ಅದೃಷ್ಟ ಜೊತೆಯಾದರೆ ಏನಾಗುತ್ತೆ ಎನ್ನುವುದಕ್ಕೆ ಇದು ಸಾಕ್ಷಿ.

ಸಿಎಸ್‌ಕೆ ವಿರುದ್ಧ ಗೆಲ್ಲುತ್ತಿದ್ದಂತೆ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದೆ. ಗೆದ್ದ ಬಳಿಕ ವಿರಾಟ್ ಕೊಹ್ಲಿ ಅವರ ಸಂಭ್ರಮ ವಿಶೇಷವಾಗಿತ್ತು, ಭಾವೋದ್ವೇಗಕ್ಕೆ ಒಳಗಾದ ಅವರು ಮೈದಾನದಲ್ಲೇ ಕಣ್ಣೀರು ಹಾಕಿದ್ದಾರೆ. ಅವರ ಜೊತೆ ಅನುಷ್ಕಾ ಶರ್ಮಾ ಕೂಡ ಭಾವುಕರಾಗಿರುವ ದೃಶ್ಯಗಳು ಈಗ ವೈರಲ್ ಆಗುತ್ತಿವೆ.
ಆಡಿಕೊಂಡವರಿಗೆ ಉತ್ತರ
ಐಪಿಎಲ್ ಆರಂಭಕ್ಕೆ ಮುಂಚೆ ವಿರಾಟ್ ಕೊಹ್ಲಿ ಇದು ಆರ್ ಸಿಬಿ ಹೊಸ ಅಧ್ಯಾಯ ಎಂದು ಹೇಳಿದ್ದರು. ಅಭಿಮಾನಿಗಳು ಕೂಡ ಈ ಬಾರಿ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ, ಮೊದಲ 8 ಪಂದ್ಯಗಳಲ್ಲಿ ಆರ್ ಸಿಬಿ ಗೆದ್ದಿದ್ದು ಕೇವಲ ಒಂದು ಪಂದ್ಯ ಮಾತ್ರ.
ಹೊಸ ಅಧ್ಯಾಯ ಆರಂಭಕ್ಕೆ ಮುನ್ನವೇ ಮುಗಿದುಹೋಗಿದೆ. ಕೊಹ್ಲಿಗೆ ಅದರ ಅರ್ಥವೇ ಗೊತ್ತಿಲ್ಲ ಎಂದು ಟ್ರೋಲ್ ಮಾಡುತ್ತಿದ್ದರು. ಆದರೆ ನಂತರ ನಡೆದದ್ದು ಈಗ ಇತಿಹಾಸ. ಸತತವಾಗಿ 6 ಪಂದ್ಯಗಳನ್ನು ಗೆದ್ದ ಆರ್ ಸಿಬಿ ಅಂಕಪಟ್ಟಿಯಲ್ಲಿ 10ನೇ ಸ್ಥಾನದಿಂದ 4ನೇ ಸ್ಥಾನಕ್ಕೆ ಬಂದು, ಪ್ಲೇಆಫ್‌ಗೆ ಅರ್ಹತೆ ಪಡೆದುಕೊಂಡಿತು.
ವಿರಾಟ್ ಕೊಹ್ಲಿ ಸ್ಟ್ರೈಕ್‌ರೇಟ್ ಬಗ್ಗೆ ಸಾಕಷ್ಟು ಮಾಜಿ ಕ್ರಿಕೆಟಿಗರು, ಕ್ರಿಕೆಟ್ ಪಂಡಿತರು ಎನಿಸಿಕೊಂಡವರೆಲ್ಲ ಮಾತನಾಡಿದ್ದರು. ಅವರಿಗೆ ಮೈದಾನದಲ್ಲಿ ಬ್ಯಾಟ್ ಮೂಲಕವೇ ಉತ್ತರ ಕೊಟ್ಟ ವಿರಾಟ್ ಕೊಹ್ಲಿ ಆಡಿಕೊಂಡವರ ಬಾಯಿ ಮುಚ್ಚಿಸಿದ್ದಾರೆ.
ಟ್ರೋಲ್ ಮಾಡಿದವರಿಗೆ, ಆಡಿಕೊಂಡವರಿಗೆ ಉತ್ತರ ಕೊಡುವುದಲ್ಲ. ಇಷ್ಟು ಬೆಂಬಲ ನೀಡುವ ಅಭಿಮಾನಿಗಳಿಗಾಗಿ ನಾವು ಗೆಲ್ಲಬೇಕು ಎಂದು ಕೊಹ್ಲಿ ಪಡೆ ನಿರ್ಧಾರ ಮಾಡಿದ್ದು, ಬಳಿಕ ಸತತವಾಗಿ 6 ಪಂದ್ಯಗಳನ್ನು ಗೆದ್ದು, ಪ್ಲೇಆಫ್‌ಗೆ ಬಂದಿದೆ. ಈ ಕ್ಷಣ ಅಭಿಮಾನಿಗಳು ಮಾತ್ರವಲ್ಲದೆ ಆಟಗಾರರನ್ನು ಭಾವುಕರನ್ನಾಗಿಸಿತು.












Click it and Unblock the Notifications