Virat Kohli: ವಿರಾಟ್ ಕೊಹ್ಲಿ ಹಾಗೂ ಆರ್‌ಸಿಬಿ ನೆನೆದ ಮಹಾರಾಷ್ಟ್ರ ತಂಡದ ವಿಕ್ಕಿ ಒಸ್ತ್ವಾಲ್, ಭಾರಿ ವೈರಲ್
Vicky Ostwal: ಟೀಮ್ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರ ಮಹತ್ವದ ಸಲಹೆ ಹಾಗೂ ಐಪಿಎಲ್ ಹರಾಜಿನಲ್ಲಿ ಆರ್‌ಸಿಬಿ ನೀಡಿದ ಆತ್ಮವಿಶ್ವಾಸದ ಬೆಂಬಲವು ಯುವ ಎಡಗೈ ಸ್ಪಿನ್ನರ್ ವಿಕಿ ಓಸ್ತ್ವಾಲ್ ಅವರ ಕ್ರಿಕೆಟ್ ಬದುಕಿನಲ್ಲಿ ಹೊಸ ಅಧ್ಯಾಯ ಬರೆಯಲು ನೆರವಾಗಿದೆ. ದೆಹಲಿಯಲ್ಲಿ ನಡೆದ ರಣಜಿ ಟ್ರೋಫಿ ಪಂದ್ಯದಲ್ಲಿ ಸರ್ವೀಸಸ್ ತಂಡದ ವಿರುದ್ಧ ದ್ವಿತೀಯ ಇನಿಂಗ್ಸ್‌ನಲ್ಲಿ ಭರ್ಜರಿ 5 ವಿಕೆಟ್ ಕಬಳಿಸುವ ಮೂಲಕ ಮಹಾರಾಷ್ಟ್ರ ತಂಡಕ್ಕೆ 127 ರನ್‌ಗಳ ಭರ್ಜರಿ ಗೆಲುವು ತಂದುಕೊಟ್ಟಿದ್ದಾರೆ.
ಸರ್ವೀಸಸ್ ತಂಡಕ್ಕೆ ಗೆಲುವಿಗಾಗಿ 268 ರನ್‌ಗಳ ಸವಾಲಿನ ಗುರಿ ನೀಡಿದ್ದ ಮಹಾರಾಷ್ಟ್ರ, ಎದುರಾಳಿ ಪಡೆಯನ್ನು ಕೇವಲ 120 ರನ್‌ಗಳಿಗೆ ಆಲೌಟ್ ಮಾಡಿತು. ಈ ಚೇಸಿಂಗ್ ವೇಳೆ ಅತ್ಯುತ್ತಮ ಬೌಲಿಂಗ್ ಪ್ರದರ್ಶಿಸಿದ ವಿಕಿ ಓಸ್ತ್ವಾಲ್, 50 ರನ್ ಬಿಟ್ಟುಕೊಟ್ಟು 5 ಪ್ರಮುಖ ವಿಕೆಟ್‌ಗಳನ್ನು ಕಬಳಿಸಿ ಮಿಂಚಿದರು. ಮಹಾರಾಷ್ಟ್ರ ತಂಡಕ್ಕೆ ಮೊದಲ ಇನಿಂಗ್ಸ್ ಮುನ್ನಡೆ ಹಾಗೂ ಎರಡನೇ ಇನಿಂಗ್ಸ್‌ನಲ್ಲಿ ಪಂದ್ಯದ ತಿರುವು ಪಡೆಯುವಲ್ಲಿ ಇವರ ಬೌಲಿಂಗ್ ನಿರ್ಣಾಯಕವಾಗಿತ್ತು.

ರಣಜಿ ಟ್ರೋಫಿ ಆವೃತ್ತಿಯಲ್ಲಿ ಅತ್ಯುತ್ತಮ ಪ್ರದರ್ಶನ
2025/26 ರಣಜಿ ಟ್ರೋಫಿ ಆವೃತ್ತಿಯಲ್ಲಿ ಓಸ್ತ್ವಾಲ್ ಮಹಾರಾಷ್ಟ್ರ ಪರ 23.39ರ ಸರಾಸರಿಯಲ್ಲಿ ಒಟ್ಟು 23 ವಿಕೆಟ್‌ಗಳನ್ನು ಪಡೆದು, ತಂಡದ ದ್ವಿತೀಯ ಗರಿಷ್ಠ ವಿಕೆಟ್ ಟೇಕರ್ ಆಗಿ ಹೊರಹೊಮ್ಮಿದ್ದರು. ಆದಾಗ್ಯೂ ತಮ್ಮ ಆಟದಲ್ಲಿ ಮತ್ತಷ್ಟು ಸುಧಾರಣೆ ಕಂಡುಕೊಳ್ಳಲು ಸತತ ಶ್ರಮಿಸುತ್ತಿದ್ದು, ಈ ಹೊಸ ಆವೃತ್ತಿಯನ್ನು ಮತ್ತಷ್ಟು ಯಶಸ್ವಿಯಾಗಿ ಆರಂಭಿಸಿದ್ದಾರೆ.
ಕೊಹ್ಲಿ ಸಲಹೆ ಮತ್ತು ಆರ್‌ಸಿಬಿ ಬೆಂಬಲದ ಪ್ರಭಾವ
ಟೀಮ್ ಇಂಡಿಯಾದ ದಿಗ್ಗಜ ಆಟಗಾರ ವಿರಾಟ್ ಕೊಹ್ಲಿ ಅವರಿಂದ ಸಿಕ್ಕ ತಾಂತ್ರಿಕ ಸಲಹೆಗಳು ತಮಗೆ ಆಟದ ಮೇಲಿನ ಒತ್ತಡ ನಿಭಾಯಿಸಲು ನೆರವಾದವು ಎಂದು ಓಸ್ತ್ವಾಲ್ ಈ ಹಿಂದೆ ಹೇಳಿಕೊಂಡಿದ್ದರು. ಇದರ ಜೊತೆಗೆ ಆರ್‌ಸಿಬಿ ತಂಡವು ಅವರಲ್ಲಿ ಇಟ್ಟ ನಂಬಿಕೆ ಮತ್ತು ನೀಡಿದ ಪ್ರೋತ್ಸಾಹವು ಮೈದಾನದಲ್ಲಿ ಯಾವುದೇ ಎದುರಾಳಿ ವಿರುದ್ಧ ಹಿಂಜರಿಯದೆ ದಾಳಿ ನಡೆಸಲು ಧೈರ್ಯ ತಂದಿದೆ ಅಂತಲೇ ಹೇಳಬಹುದು.
ಕೇವಲ ವಿಕೆಟ್ ಪಡೆಯುವುದಷ್ಟೇ ಅಲ್ಲದೆ, ಪಂದ್ಯಕ್ಕೆ ಅತ್ಯಂತ ಅಗತ್ಯವಿರುವ ಪ್ರಮುಖ ಸಂದರ್ಭಗಳಲ್ಲಿ ತಂಡಕ್ಕೆ ನೆರವಾಗುವುದು ವಿಕಿ ಅವರ ಮುಖ್ಯ ಗುರಿಯಾಗಿದೆ. ರಣಜಿ ಟ್ರೋಫಿಯ ಈ ಭರ್ಜರಿ ಆರಂಭವು ಮುಂಬರುವ ದಿನಗಳಲ್ಲಿ ಮಹಾರಾಷ್ಟ್ರ ತಂಡಕ್ಕೆ ಇವರನ್ನು ಪ್ರಮುಖ ಬೌಲಿಂಗ್ ಅಸ್ತ್ರವನ್ನಾಗಿ ಮಾಡಲಿದೆ ಎನ್ನಬಹುದು.


Click it and Unblock the Notifications
