• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಂಡ್ಯ ವಿನಿಂಗ್ ಶಾಟ್; ಟಿವಿಗೆ ಮುತ್ತಿಟ್ಟ ಅಫ್ಘಾನ್ ವ್ಯಕ್ತಿ- ವಿಡಿಯೋ ವೈರಲ್

|
Google Oneindia Kannada News

ಪಾಕಿಸ್ತಾನ ವಿರುದ್ಧ ಭಾರತ ಬಹಳ ರೋಚಕವಾಗಿ ನಿನ್ನೆ ಗೆದ್ದು ಏಷ್ಯಾ ಕಪ್‌ನಲ್ಲಿ ಶುಭಾರಂಭ ಮಾಡಿತು. ಭಾರತ ಮತ್ತು ಪಾಕಿಸ್ತಾನ ಪಂದ್ಯ ಎಂದರೆ ಅದರ ಜಿದ್ದಾಜಿದ್ದಿ ಬೇರೆ ಸ್ತರದ್ದು. ಎರಡೂ ತಂಡಗಳ ಆಟಗಾರರಲ್ಲಿ ಅದೇನೋ ಹುರುಪು. ಎರಡೂ ದೇಶಗಳ ಕ್ರಿಕೆಟ್ ಅಭಿಮಾನಿಗಳಿಗೂ ಇದು ಮಾಡು ಇಲ್ಲ ಮಡಿ ಎನ್ನುವ ರೋಚಕತೆ.

ಅಭಿಮಾನಿಗಳ ಸಂಭ್ರಮ ನೋಡುವುದೇ ಒಂದು ದೊಡ್ಡ ಸಂಭ್ರಮ. ಅದರಲ್ಲೂ ಭಾರತ, ಪಾಕಿಸ್ತಾನ, ಬಾಂಗ್ಲಾದೇಶ, ಅಫ್ಘಾನಿಸ್ತಾನದ ಕ್ರಿಕೆಟ್ ಪ್ರೇಮಿಗಳ ಸೆಲಬ್ರೇಶನ್‌ಗಳಂತೂ ವರ್ಣಿಸಲು ಹೇಳತೀರದು.

ಪಾಕಿಸ್ತಾನದ ವಿರುದ್ಧ ಭರ್ಜರಿ ಜಯ: ಗಾಯಗೊಂಡ ದಿನಗಳನ್ನು ನೆನಪಿಸಿಕೊಂಡ ಹಾರ್ದಿಕ್ ಪಾಂಡ್ಯಪಾಕಿಸ್ತಾನದ ವಿರುದ್ಧ ಭರ್ಜರಿ ಜಯ: ಗಾಯಗೊಂಡ ದಿನಗಳನ್ನು ನೆನಪಿಸಿಕೊಂಡ ಹಾರ್ದಿಕ್ ಪಾಂಡ್ಯ

ನಿನ್ನೆ ಪಾಕಿಸ್ತಾನ ವಿರುದ್ಧ ಭಾರತ ಗೆಲುವು ಸಾಧಿಸಿದ ಬಳಿಕ ಅಫ್ಘಾನಿಸ್ತಾನದ ಅಭಿಮಾನಿ ಸಂಭ್ರಮಿಸಿದ ವಿಡಿಯೋವೊಂದು ಬಹಳ ವೈರಲ್ ಆಗಿದೆ. ಹಾರ್ದಿಕ್ ಪಾಂಡ್ಯ ಸಿಕ್ಸರ್ ಭಾರಿಸಿ ವಿನಿಂಗ್ ರನ್ ಹೊಡೆಯುತ್ತಿದ್ದಂತೆಯೇ, ಪಂದ್ಯವನ್ನು ಟಿವಿಯಲ್ಲಿ ತನ್ನ ಸ್ನೇಹಿತರ ಜೊತೆ ವೀಕ್ಷಿಸುತ್ತಿದ್ದ ಒಬ್ಬ ವ್ಯಕ್ತಿ ಟಿವಿ ಬಳಿ ಹೋಗಿ ಹಾರ್ದಿಕ್ ಪಾಂಡ್ಯಗೆ ಮುತ್ತಿಕ್ಕಿದ ಘಟನೆ ಈ ವಿಡಿಯೋದಲ್ಲಿ ಕಂಡಿದೆ.

ಅಫ್ಘಾನಿಸ್ತಾನದ ಜನರು ಸಾಮಾನ್ಯವಾಗಿ ಪಾಕಿಸ್ತಾನಕ್ಕಿಂತ ಭಾರತೀಯರನ್ನು ಹೆಚ್ಚು ಇಷ್ಟಪಡುತ್ತಾರೆ. ಅಫ್ಗಾನಿಸ್ತಾನಕ್ಕೆ ರಾಜತಾಂತ್ರಿಕವಾಗಿ ಮತ್ತು ಆರ್ಥಿಕವಾಗಿ ಭಾರತ ಸಾಕಷ್ಟು ನೆರವು ಒದಗಿಸುತ್ತದೆ. ಇದರಿಂದ ಭಾರತದ ಮೇಲೆ ಅಫ್ಗನ್ನರಿಗೆ ವಿಶೇಷ ಅಭಿಮಾನ. ಇದಕ್ಕೆ ಸಾಕ್ಷಿ ಈ ವಿಡಿಯೋ.

ಏಷ್ಯಾ ಕಪ್‌ನಲ್ಲಿ ಅಫ್ಘಾನಿಸ್ತಾನವೂ ಆಡುತ್ತಿದೆ. ಭಾರತ, ಪಾಕಿಸ್ತಾನ ಮತ್ತು ಹಾಂಕಾಂಗ್ ತಂಡಗಳು ಎ ಗುಂಪಿನಲ್ಲಿ ಇವೆ. ಅಫ್ಘಾನಿಸ್ತಾನ, ಶ್ರೀಲಂಕಾ ಮತ್ತು ಬಾಂಗ್ಲಾದೇಶ ತಂಡಗಳು ಬಿ ಗುಂಪಿನಲ್ಲಿ ಇವೆ. ಶ್ರೀಲಂಕಾ ವಿರುದ್ಧ ಅಫ್ಗಾನಿಸ್ತಾನ ಭರ್ಜರಿ ಗೆಲುವು ಸಾಧಿಸಿ ಭಾರತದಂತೆಯೇ ಶುಭಾರಂಭ ಮಾಡಿದೆ.

100ನೇ ಟಿ20ಐ ಪಂದ್ಯವಾಡಿದ 'ಕಿಂಗ್' ಕೊಹ್ಲಿ ವೃತ್ತಿ ಬದುಕಿನ ಅಂಕಿ ಅಂಶಗಳು100ನೇ ಟಿ20ಐ ಪಂದ್ಯವಾಡಿದ 'ಕಿಂಗ್' ಕೊಹ್ಲಿ ವೃತ್ತಿ ಬದುಕಿನ ಅಂಕಿ ಅಂಶಗಳು

ಭಾರತ-ಪಾಕ್ ರೋಚಕ ಪಂದ್ಯ
ನಿನ್ನೆ ಭಾನುವಾರ ದುಬೈನಲ್ಲಿ ಭಾರತ ಮತ್ತು ಪಾಕಿಸ್ತಾನ ಪಂದ್ಯ ರೋಚಕ ಹಣಾಹಣಿ ಕಂಡಿತ್ತು. ಪಾಕಿಸ್ತಾನ 20 ಓವರ್‌ಗೆ ಒಂದು ಎಸೆತ ಇರುವಂತೆಯೇ 147 ರನ್‌ಗೆ ಆಲೌಟ್ ಆಯಿತು. ಇದಕ್ಕೆ ಪ್ರತಿಯಾಗಿ ಭಾರತ ಎರಡು ಎಸೆತ ಬಾಕಿ ಇರುವಂತೆ ಗೆಲುವು ಪಡೆಯಿತು.

Viral Video of Afghanistan Fan Kissing TV Screen After India Beat Pakistan in Asia Cup

ವಿರಾಟ್ ಕೊಹ್ಲಿ, ರವೀಂದ್ರ ಜಡೇಜಾ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ ಉತ್ತಮವಾಗಿ ಬ್ಯಾಟಿಂಗ್ ಮಾಡಿದರು. ಪಾಕಿಸ್ತಾನದ ಬೌಲರ್‌ಗಳೂ ಸಾಕಷ್ಟು ಪ್ರತಿರೋಧ ತೋರಿ ಕೊನೆಯ ಓವರ್‌ವರೆಗು ಪಂದ್ಯ ಸಾಗುವಂತೆ ಮಾಡಿದರು. 19ನೇ ಓವರ್ ಭಾರತಕ್ಕೆ ಟರ್ನಿಂಗ್ ಪಾಯಿಂಟ್ ಆಯಿತು. ಹಾರ್ದಿಕ್ ಪಾಂಡ್ಯ 17 ಬಾಲ್‌ನಲ್ಲಿ ಅಜೇಯ 33 ರನ್ ಭಾರಿಸಿ ಗೆಲುವಿನ ರೂವಾರಿ ಎನಿಸಿದರು. ಕೊನೆಯ ಓವರ್‌ನ 3ನೇ ಎಸೆತದಲ್ಲಿ ಸಿಕ್ಸರ್ ಭಾರಿಸಿ ಗೆಲುವಿನ ರನ್ ಕೂಡ ಭಾರಿಸಿದರು. ವಿಶ್ವಕಪ್‌ನಲ್ಲಿ ಪಾಕಿಸ್ತಾನ ವಿರುದ್ಧ ಅನುಭವಿಸಿದ್ದ ಸೋಲಿಗೆ ಭಾರತ ಸೇಡು ತೀರಿಸಿಕೊಂಡಂತಾಗಿದೆ.

ಭಾರತ ತನ್ನ ಮುಂದಿನ ಪಂದ್ಯವನ್ನು ಹಾಂಕಾಂಗ್ ವಿರುದ್ಧ ಆಗಸ್ಟ್ 31ರಂದು ಆಡಲಿದೆ. ಪ್ರತೀ ಗುಂಪಿನಲ್ಲಿ ಎರಡು ತಂಡಗಳು ಸೂಪರ್-4 ಹಂತ ಪ್ರವೇಶಿಸಲಿವೆ. ಸೆಪ್ಟೆಂಬರ್ 11ರಂದು ಫೈನಲ್ ಪಂದ್ಯ ನಡೆಯಲಿದೆ.

(ಒನ್ಇಂಡಿಯಾ ಸುದ್ದಿ)

English summary
An Afghanistan man kisses Hardik Pandya on TV screen after he hits winning shot in Asia Cup cricket match against Pakistan on Sunday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X