WPL 2024: ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಒಂದು ರನ್‌ಗಳ ರೋಚಕ ಗೆಲುವು ಸಾಧಿಸಿದ ಯುಪಿ ವಾರಿಯರ್ಸ್

ಮಹಿಳಾ ಪ್ರೀಮಿಯರ್ ಲೀಗ್ ಇತಿಹಾಸದಲ್ಲೇ ರೋಚಕ ಪಂದ್ಯವೊಂದು ಶುಕ್ರವಾರ ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯಿತು. ಯುಪಿ ವಾರಿಯರ್ಸ್ ಡೆಲ್ಲಿ ಕ್ಯಾಪಿಟಲ್ಸ್ ಮಹಿಳಾ ತಂಡದ ವಿರುದ್ಧ 1 ರನ್‌ಗಳಿಂದ ರೋಚಕ ಗೆಲುವು ಸಾಧಿಸಿದೆ.

ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಯುಪಿ ವಾರಿಯರ್ಸ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಯುಪಿ ವಾರಿಯರ್ಸ್ 20 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 138 ರನ್‌ಗಳನ್ನು ಗಳಿಸಿತು.

UP Warriorz Defeat Delhi Capitals by 1 Run in WPL 2024

ನಾಯಕಿ ಅಲಿಸ್ಸಾ ಹೀಲಿ 29 ರನ್ ಗಳಿಸಿದರೆ, ದೀಪ್ತಿ ಶರ್ಮಾ 48 ಎಸೆತಗಳಲ್ಲಿ 6 ಬೌಂಡರಿ 1 ಸಿಕ್ಸರ್ ಸಹಿತ 59 ರನ್ ಗಳಿಸುವ ಮೂಲಕ ಯುಪಿ ತಂಡಕ್ಕೆ ಆಸರೆಯಾದರು. ಡೆಲ್ಲಿ ಕ್ಯಾಪಿಟಲ್ಸ್ ಪರವಾಗಿ ಟಿಟಾಸ್ ಸದು ಮತ್ತು ರಾಧಾ ಯಾದವ್ ತಲಾ 2 ವಿಕೆಟ್ ಪಡೆದರು. ಶಿಖಾ ಪಾಂಡೆ, ಅರುಂಧತಿ ರೆಡ್ಡಿ, ಜೆಸ್ ಜೊನಾಸೆನ್ ಮತ್ತುಅಲಿಸ್ ಕ್ಯಾಪ್ಸಿ ತಲಾ ಒಂದು ವಿಕೆಟ್ ಪಡೆದರು.

ರೋಚಕ ಪಂದ್ಯದಲ್ಲಿ ಗೆದ್ದ ಯುಪಿ ವಾರಿಯರ್ಸ್

ಈ ಸಾಧಾರಣ ಮೊತ್ತವನ್ನು ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ ಅತ್ಯುತ್ತಮ ಆರಂಭ ಪಡೆಯಿತು. ಶಫಾಲಿ ವರ್ಮಾ 15 ರನ್ ಗಳಿಸಿದರೆ, ನಾಯಕಿ ಮೆಗ್ ಲ್ಯಾನಿಂಗ್ 46 ಎಸೆತಗಳಲ್ಲಿ 12 ಬೌಂಡರಿ ಸಹಿತ 60 ರನ್ ಗಳಿಸಿದರು. ಅವರು ಕ್ರೀಸ್‌ನಲ್ಲಿ ಇರುವವರೆಗೆ ಡೆಲ್ಲಿ ಕ್ಯಾಪಿಟಲ್ಸ್ ಸುಲಭ ಗೆಲುವು ಸಾಧಿಸುತ್ತದೆ ಅಂದುಕೊಳ್ಳಲಾಗಿತ್ತು. ಆದರೆ ಕೊನೆಯ ಎರಡು ಓವರ್ ಗಳಲ್ಲಿ ಪಂದ್ಯದ ಗತಿಯೇ ಬದಲಾಯಿತು.

14 ಓವರ್ ಗಳಲ್ಲಿ 3 ವಿಕೆಟ್ ಕಳೆದುಕೊಂಡು 93 ರನ್ ಗಳಿಸಿದ್ದ ಡೆಲ್ಲಿ ಕ್ಯಾಪಿಟಲ್ಸ್ ಕೊನೆಗೆ 137 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಸೋಲೊಪ್ಪಿಕೊಂಡಿತು. ಕೊನೆಯ ಎರಡು ಓವರ್ ಗಳಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಗೆಲುವಿಗೆ ಕೇವಲ 15 ರನ್ ಬೇಕಿತ್ತು, ಇನ್ನೂ ಆರು ವಿಕೆಟ್‌ಗಳು ಕೈಯಲ್ಲಿದ್ದ ಕಾರಣ ಗೆಲುವಿನ ವಿಶ್ವಾಸದಲ್ಲಿತ್ತು ಡೆಲ್ಲಿ.

19ನೇ ಓವರ್ ನಲ್ಲಿ ಬೌಲಿಂಗ್ ಮಾಡಿದ ದೀಪ್ತಿ ಶರ್ಮಾ 5 ರನ್ ನೀಡಿ ಮೂರು ವಿಕೆಟ್ ಪಡೆದು ಆಘಾತ ನೀಡಿದರು. ಕೊನೆಯ ಓವರ್ ನಲ್ಲಿ ಡೆಲ್ಲಿ ಗೆಲುವಿಗೆ 10 ರನ್ ಬೇಕಿತ್ತು. ಗ್ರೇಸ್ ಹ್ಯಾರಿಸ್ ಬೌಲಿಂಗ್ ಮಾಡಲು ಬಂದರು, ಮೊದಲ ಎಸೆತದಲ್ಲೇ ರಾಧಾ ಯಾದವ್ ಸಿಕ್ಸರ್ ಬಾರಿಸುವ ಮೂಲಕ ಮತ್ತೆ ಡೆಲ್ಲಿ ಮೇಲುಗೈ ಸಾಧಿಸಿತು. ಬಳಿಕ ಎರಡನೇ ಎಸೆತದಲ್ಲಿ 2 ರನ್ ಗಳಿಸಿದರು. 4 ಎಸೆತಗಳಲ್ಲಿ ಡೆಲ್ಲಿ ಗೆಲುವಿಗೆ ಮೂರು ರನ್ ಬೇಕಿತ್ತು.

ಮೂರನೇ ಎಸೆತದಲ್ಲಿ ರಾಧಾ ಯಾದವ್ ಬೌಲ್ಡ್ ಆದರು. ನಾಲ್ಕನೇ ಎಸೆತದಲ್ಲಿ ಜೊನಾಸೆನ್ ರನೌಟ್‌ಗೆ ಬಲಿಯಾದರು. ಕೊನೆಯ ಎಸೆತದಲ್ಲಿ ಡೆಲ್ಲಿ ಗೆಲುವಿಗೆ ಎರಡು ರನ್ ಬೇಕಿತ್ತು. ಆದರೆ ಟಿಟಾಸ್ ಸದು ಡೇನಿಯಲ್ ವ್ಯಾಟ್‌ಗೆ ಕ್ಯಾಚ್ ನೀಡಿ ಔಟಾದರು. ಯುಪಿ ವಾರಿಯರ್ಸ್ ಒಂದು ರನ್‌ಗಳ ರೋಚಕ ಗೆಲುವು ಸಾಧಿಸಿ ಬೀಗಿತು .

ದೀಪ್ತಿ ಶರ್ಮಾ 4 ವಿಕೆಟ್ ಪಡೆದರು. ಗ್ರೇಸ್ ಹ್ಯಾರಿಸ್, ಸೈಮಾ ಠಾಕೂರ್ ತಲಾ ಎರಡು ವಿಕೆಟ್ ಪಡೆದುಕೊಂಡರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+