Neeraj Chopra: ಪ್ರತಾಪ್ ಸಿಂಹ ಎಡವಟ್ಟು, ಪಾಕಿಸ್ತಾನದ ಆಟಗಾರನನ್ನು ಹೊಗಳುವ ಅಗತ್ಯತೆ ಏನಿತ್ತು? ಅಂತಿದ್ದಾರೆ ಜನ!
ಪ್ರತಾಪ್ ಸಿಂಹ ಪದೇ ಪದೇ ವಿವಾದದ ಸುಳಿಯಲ್ಲಿ ಸಿಲುಕುತ್ತಿದ್ದಾರೆ ಎಂಬ ಆರೋಪ ಈಗ ಕೇಳಿಬಂದಿದೆ. ಅದರಲ್ಲೂ ಪ್ರತಾಪ್ ಸಿಂಹ ಒಂದಲ್ಲ ಒಂದು ವಿಚಾರದಲ್ಲಿ ಸುದ್ದಿ ಆಗ್ತಾನೇ ಇದ್ದಾರೆ. ಹೀಗಿದ್ದಾಗಲೇ ಒಲಿಂಪಿಕ್ಸ್ ಅಖಾಡದಲ್ಲಿ ಭಾರತಕ್ಕಾಗಿ 'ಬೆಳ್ಳಿ' ಪದಕ ಗೆದ್ದ ನಮ್ಮ ಹೆಮ್ಮೆಯ ನೀರಜ್ ಚೋಪ್ರಾ ಬಗ್ಗೆ ಪೋಸ್ಟ್ ಹಾಕಲು ಹೋಗಿ, ಪಾಕಿಸ್ತಾನದ ಆಟಗಾರನನ್ನು ಕೂಡ ಹೊಗಳಿ ಸರಿಯಾಗಿ ಟ್ರೋಲ್ ಆಗಿದ್ದಾರೆ ಮಾಜಿ ಸಂಸದ ಹಾಗೂ ಮಾಜಿ ಪತ್ರಕರ್ತ ಪ್ರತಾಪ್ ಸಿಂಹ.
ಹೌದು 'ಟೋಕಿಯೋ ಒಲಿಂಪಿಕ್ಸ್' ಅಖಾಡದಲ್ಲಿ ಭಾರತಕ್ಕಾಗಿ ಚಿನ್ನದ ಪದಕ ಗೆದ್ದಿದ್ದ ನೀರಜ್ ಚೋಪ್ರಾ ಈಗ 'ಪ್ಯಾರಿಸ್ ಒಲಿಂಪಿಕ್ಸ್-2024' ಕ್ರೀಡಾಕೂಟದಲ್ಲಿ ದೊಡ್ಡ ಸಾಧನೆ ಮಾಡಿದ್ದು ಚಿನ್ನದ ಮೇಲೆ ಗುರಿ ಇಟ್ಟಿದ್ದ ಭಾರತದ ಹೆಮ್ಮೆಯ ಪುತ್ರ ನೀರಜ್ ಚೋಪ್ರಾ, ಕೆಲವೇ ಕೆಲವು ಮೀಟರ್ ಅಂತರದಲ್ಲಿ ಚಿನ್ನದ ಪದಕ ಮಿಸ್ ಮಾಡಿಕೊಂಡರು. ಹೀಗಿದ್ದಾಗ ನೀರಜ್ ಅವರ ಎದುರು, ಪಾಕಿಸ್ತಾನದ ಅರ್ಷದ್ ನದೀಮ್ ನದೀಮ್ ಗೆದ್ದು ಬೀಗಿದರು. ಆ ಮೂಲಕ ಈ ಪಂದ್ಯದಲ್ಲಿ ಚಿನ್ನದ ಪದಕ ಪಾಕಿಸ್ತಾನದ ಪಾಲಾಗಿದೆ. ಆದರೆ ಶುಭಾಶಯ ಹೇಳುವಾಗ ಮಾಜಿ ಸಂಸದ ಹಾಗೂ ಮಾಜಿ ಪತ್ರಕರ್ತ ಪ್ರತಾಪ್ ಸಿಂಹ ದೊಡ್ಡ ಎಡವಟ್ಟು ಮಾಡಿಕೊಂಡಿದ್ದರು ಎಂಬ ಗಂಭೀರ ಆರೋಪ ಕೇಳಿಬಂದಿದೆ.

ಪ್ರತಾಪ್ ಸಿಂಹ ದೊಡ್ಡ ಎಡವಟ್ಟು?
ನೀರಜ್ ಚೋಪ್ರಾ ಅವರ ಗೆಲುವು ಸುಲಭವಾಗಿ ಇರಲಿಲ್ಲ, ಯಾಕಂದ್ರೆ ಮೊದಲ ಎಸೆತದಲ್ಲಿ ಫೌಲ್ ಮಾಡಿಕೊಂಡ ನೀರಜ್ ಚೋಪ್ರಾ ಬೇಸರಗೊಂಡರು. ಮೊದಲ ಎಸೆತದಲ್ಲೇ ಅವರು 86 ಮೀಟರ್‌ಗಿಂತ ಹೆಚ್ಚು ದೂರ ಎಸೆದಿದ್ದರೂ ಅದು ಫೌಲ್ ಆಗಿತ್ತು. ಆ ನಂತರ ಕಂಬ್ಯಾಕ್ ಮಾಡಿದ ನೀರಜ್ ಚೋಪ್ರಾ, ಬರೋಬ್ಬರಿ 89.45 ಮೀಟರ್ ದೂರ ಎಸೆದರು. ಇಷ್ಟೊತ್ತಿಗೆ, ಪಾಕಿಸ್ತಾನದ ಅರ್ಷದ್ ನದೀಮ್ 92.97 ಮೀಟರ್ ದೂರ ಎಸೆದು ಚಿನ್ನದ ಪದಕ ಗ್ಯಾರಂಟಿ ಮಾಡಿಕೊಂಡಿದ್ದರು. ಈ ಮೂಲಕ ಭಾರತದ ನೀರಜ್ ಚೋಪ್ರಾ ಖುಷಿ ಖುಷಿಯಾಗಿ ಬೆಳ್ಳಿಯ ಪದಕಕ್ಕೆ ಮುತ್ತಿಟ್ಟರು. ಹೀಗಿದ್ದಾಗಲೇ ಪ್ರತಾಪ್ ಸಿಂಹ ಮಾಡಿದ್ದ ಟ್ವೀಟ್ ಒಂದು, ಭಾರತ ಕೀಡಾ ಅಭಿಮಾನಿಗಳನ್ನ ಕೆಣಕಿತ್ತು ಎಂಬ ಆರೋಪ ಕೇಳಿಬಂದಿದೆ.
ಟ್ವೀಟ್ ಡಿಲೀಟ್ ಮಾಡಿದ ಸಂಸದ!
'ಪ್ಯಾರಿಸ್ ಒಲಿಂಪಿಕ್ಸ್-2024' ಕ್ರೀಡಾಕೂಟದ ಜಾವೆಲಿನ್ ಥ್ರೋ ವಿಭಾಗದಲ್ಲಿ ನೀರಜ್ ಅವರು, ಬೆಳ್ಳಿ ಪದಕ ಗೆದ್ದ ಮ್ಯಾಚ್ ಬಗ್ಗೆ ಟ್ವೀಟ್ ಮಾಡಿದ್ದ ಪ್ರತಾಪ್ ಸಿಂಹ 'Congratulations To #Undividedindia #NadeemNeeraj' ಎಂದು ಬರೆದುಕೊಂಡಿದ್ದರು. ಈ ಟ್ವೀಟ್ ಕುರಿತು ಆಕ್ರೋಶ ಸ್ಫೋಟವಾಗಿ ಕನ್ನಡಿಗರ ಸಮೇತ ಭಾರತದ ವಿವಿಧ ರಾಜ್ಯಗಳ ಕ್ರೀಡಾಭಿಮಾನಿಗಳು ಪ್ರತಾಪ್ ಸಿಂಹ ಬಗ್ಗೆ ಬೇಸರ ಹೊರ ಹಾಕಿದ್ದಾರೆ ಅಲ್ಲದೆ ಈ ವಿಚಾರ ಕೈಮೀರುವ ಮುನ್ಸೂಚನೆ ಸಿಕ್ಕಿದ್ದೇ ತಡ, ಪ್ರತಾಪ್ ಸಿಂಹ ತಮ್ಮ ವಿವಾದಿತ ಟ್ವೀಟ್ ಡಿಲೀಟ್ ಮಾಡಿದ್ದಾರೆ!
ಬೆಳ್ಳಿ ಗೆದ್ದು ಸಂಭ್ರಮಿಸಿದ ಚೋಪ್ರಾ
ಭಾರತಕ್ಕೆ ಒಂದೇ ದಿನ 'ಪ್ಯಾರಿಸ್ ಒಲಿಂಪಿಕ್ಸ್-2024' ಕ್ರೀಡಾಕೂಟದಲ್ಲಿ ಭರ್ಜರಿ 2 ಪದಕಗಳು ಒಲಿದು ಬಂದಿದೆ. ಒಂದು ಪದಕವನ್ನ ಭಾರತದ ಹಾಕಿ ತಂಡ ಗೆದ್ದು, ಇತಿಹಾಸ ಮರಳುವಂತೆ ಮಾಡಿದ್ದರೆ. ಮತ್ತೊಂದು ಕಡೆ ಭರವಸೆಯ ಬೆಳಕು ಎಂದು ಕರೆಸಿಕೊಂಡಿದ್ದ ನೀರಜ್ ಚೋಪ್ರಾ ಕೂಡ ಪದಕ ಗೆದ್ದರು. ಹಾಕಿ ವಿಭಾಗದಲ್ಲಿ ಭಾರತೀಯ ಆಟಗಾರರು ಕಂಚಿನ ಪದಕ ಗೆದ್ದಿದ್ದರು, ಈ ಮೂಲಕ ಭಾರತದ ಪದಕ ಬೇಟೆಯ ಸಂಖ್ಯೆ 4ಕ್ಕೆ ಏರಿಕೆಯಾಗಿತ್ತು. ಆ ನಂತರ 'ಜಾವೆಲಿನ್ ಥ್ರೋ' ವಿಭಾಗದಲ್ಲಿ ಭಾರತಕ್ಕಾಗಿ ಬೆಳ್ಳಿ ಪದಕವನ್ನು ಗೆದ್ದು ಕೊಟ್ಟಿದ್ದಾರೆ ನೀರಜ್ ಚೋಪ್ರಾ. ಹೀಗಿದ್ದಾಗ ಪ್ರತಾಪ್ ಸಿಂಹ ಅವರ ಟ್ವೀಟ್ ಫುಲ್ ವೈರಲ್ ಆಗಿ ಟ್ರೋಲ್ ಕೂಡ ಆಗಿತ್ತು.












Click it and Unblock the Notifications