ಸೇಡು ತೀರಿಸಿಕೊಂಡು ಆಸ್ಟ್ರೇಲಿಯಾಗೆ ಮನೆ ದಾರಿ ತೋರಿಸಿದ ಭಾರತ!

ಭಾರತ ಕ್ರಿಕೆಟ್ ತಂಡದ ಸಾಧನೆ ಕಂಡು ನಿನ್ನೆ ಭಾರತೀಯರು ಕುಣಿದಾಡಿದ್ದಾರೆ. ಹೀಗೆ ಭಾರತ ಅದ್ಭುತ ಗೆಲುವು ದಾಖಲಿಸುವ ಜೊತೆಗೆ, ಆಸ್ಟ್ರೇಲಿಯಾ ವಿರುದ್ಧ ಇದ್ದ ಸೇಡು ಕೂಡ ತೀರಿಸಿಕೊಂಡಿದೆ. 2023ರ ಏಕದಿನ ವಿಶ್ವಕಪ್ ಫೈನಲ್ ಪಂದ್ಯದ ಸೋಲಿಗೆ ನಿನ್ನೆ ಸೇಡು ತೀರಿಸಿಕೊಂಡ ಭಾರತ, ಅಹಂಕಾರಿ ಆಸ್ಟ್ರೇಲಿಯಾ ಆಟಗಾರರನ್ನ ಮನೆಗೆ ಕಳಿಸಿ ಕುಣಿದು ಕುಪ್ಪಳಿಸಿದೆ.

2024ರ ಟಿ20 ವಿಶ್ವಕಪ್ ಟೂರ್ನಿಯ ಸೂಪರ್-8 ಹಂತದ ಪಂದ್ಯಗಳು ನಿನ್ನೆಗೆ ಮುಗಿದು ಹೋಗಿವೆ. ಆಸ್ಟ್ರೇಲಿಯಾ 2 ಮ್ಯಾಚ್ ಆಡಿ 1 ಮ್ಯಾಚ್ ಸೋತು ನಿನ್ನೆ ಭಾರತದ ವಿರುದ್ಧ ಗೆಲ್ಲಲೇಬೇಕಾದ ಅನಿವಾರ್ಯ ಪರಿಸ್ಥಿತಿಗೆ ಸಿಲುಕಿತ್ತು. ಆದರೆ ನಿನ್ನೆ ಆಸಿಸ್ ಪಡೆಗೆ ಜಯ ಸಿಗದಂತೆ ಮಾಡಿತ್ತು ಭಾರತ ತಂಡ. ಈ ಮೂಲಕ ಆಸ್ಟ್ರೇಲಿಯಾ ತಂಡ ಭೀಕರ ಸೋಲು ಕಂಡು ಮಂಕಾಗಿತ್ತು. ಹೀಗಿದ್ದಾಗ ಮತ್ತೊಂದು ಮ್ಯಾಜಿಕ್ ಕೂಡ ನಡೆದೇ ಹೋಗಿತ್ತು. ಹಾಗಾದ್ರೆ ಏನದು ಮ್ಯಾಜಿಕ್? ಮುಂದೆ ಓದಿ.

This How India Won Against Australia In T20 World Cup

ಬಾಂಗ್ಲಾ ವಿರುದ್ಧ ಅಫ್ಘಾನ್‌ಗೆ ಜಯ!

ಆಸ್ಟ್ರೇಲಿಯಾ ತಂಡ ಭಾರತದ ವಿರುದ್ಧ ಸೋಲು ಕಂಡರೂ ಸೆಮಿಫೈನಲ್ ಹಂತಕ್ಕೇರುವ ಕನಸು ಮಾತ್ರ ಹಾಗೇ ಇತ್ತು. ಇಂತಹ ಸ್ಥಿತಿಯಲ್ಲಿ ಬಾಂಗ್ಲಾದೇಶ ವಿರುದ್ಧ ಅಫ್ಘಾನಿಸ್ತಾನ ತಂಡ ಗೆಲ್ಲಬೇಕಾದ ಅನಿವಾರ್ಯ ಸ್ಥಿತಿಗೆ ಸಿಲುಕಿತ್ತು. ಇಷ್ಟೆಲ್ಲಾ ಪರದಾಟದ ನಡುವೆ, ಬಾಂಗ್ಲಾ ವಿರುದ್ಧ ಅಫ್ಘಾನ್ ಗೆದ್ದು ಬೀಗಿದೆ. ಈ ಮೂಲಕ 2024ರ ಟಿ20 ವಿಶ್ವಕಪ್‌ನ ಅಖಾಡದಲ್ಲಿ ಅಫ್ಘಾನಿಸ್ತಾನ ಸೆಮಿಫೈನಲ್‌ಗೆ ಎಂಟ್ರಿ ಕೊಟ್ಟಿದೆ. ಆದರೆ ಆಸ್ಟ್ರೇಲಿಯಾದ ಆಟಗಾರರು ಭಾರತದ ಎದುರು ಹೀನಾಯ ಸೋಲು ಕಂಡು ಮನೆ ಕಡೆ ಹೆಜ್ಜೆ ಹಾಕಿದ್ದಾರೆ.

ಹಿಟ್‌ಮ್ಯಾನ್ ಸೆಂಚ್ಯುರಿ ಮಿಸ್!

ರೋಹಿತ್ ಶರ್ಮಾ 91 ರನ್ ಗಳಿಸಿ, 7 ಬೌಂಡರಿ & 8 ಸಿಕ್ಸರ್ ಸಿಡಿಸಿ 240ರ ಸರಾಸರಿಗೆ ರನ್ ಗಳಿಸುವಾಗ ದುರಂತ ಒಂದು ನಡೆದೇ ಹೋಗಿತ್ತು. ರೋಹಿತ್ ಶರ್ಮಾಗೆ ಅವಕಾಶ ಇನ್ನೂ ಇತ್ತು, ಆದರೂ ಅವಸರ ಮಾಡಿಕೊಂಡ ರೋಹಿತ್ ಶರ್ಮಾ ಮಿಚೆಲ್ ಸ್ಟಾರ್ಕ್ ಬೌಲಿಂಗ್‌ನಲ್ಲಿ ಭರ್ಜರಿ ಹೊಡೆತಕ್ಕೆ ಕೈಹಾಕಿದ್ದರು. ಆದರೆ ಸ್ಟಾರ್ಕ್ ಹಾಕಿದ ಬಾಲ್ ನೇರ ವಿಕೆಟ್‌ಗೆ ಹೋಗಿ ಬಡಿಯಿತು. ಹೀಗಾಗಿ ರೋಹಿತ್ ಶರ್ಮಾ 92 ರನ್ ಗಳಿಸಿ ಔಟಾದರು.

ಹೀಗಿದ್ದರೂ ನಿನ್ನೆಯ ಗೆಲುವಿನಲ್ಲಿ ರೋಹಿತ್ ಶರ್ಮಾ ಅವರ ಪಾಲು ದೊಡ್ಡದಾಗಿದೆ. ಆರಂಭದಲ್ಲಿ ವಿರಾಟ್ ಕೊಹ್ಲಿ ವಿಕೆಟ್ ಕಳೆದುಕೊಂಡು ಪರದಾಡುತ್ತಿದ್ದ ಭಾರತೀಯರ ತಂಡಕ್ಕೆ ಇದೇ ರೋಹಿತ್ ಶರ್ಮಾ ನೆರವಾಗಿ ನಿಂತರು. ಅಲ್ಲದೆ ಆಸ್ಟ್ರೇಲಿಯಾ ತಂಡದ ಬೌಲಿಂಗ್ ಪಡೆಯ ಬೆನ್ನೆಲುಬು ಪುಡಿ ಪುಡಿ ಮಾಡಿದರು. ಈ ಮೂಲಕ ಭರ್ಜರಿಯಾಗಿ ಭಾರತ ಗೆದ್ದು ಬೀಲು ನೇರವಾಗಿ ಕಾರಣರಾದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+