India vs Pakistan: ಪಾಕಿಸ್ತಾನದ ವಿರುದ್ಧ ಸೋತ ಭಾರತ!

ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧದ ಮಹತ್ವದ ಪಂದ್ಯದಲ್ಲಿ ಭಾರತ ಸೋಲು ಕಂಡಿದ್ದು ನಿರಾಸೆ ಅನುಭವಿಸಿದೆ. ದುಬೈನಲ್ಲಿ ನಡೆಯುತ್ತಿರುವ ಅಂಡರ್ 19 ಏಷ್ಯಾಕಪ್ ಪಂದ್ಯಾವಳಿಯಲ್ಲಿ ಭಾರತ ತಂಡ ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ 43 ರನ್‌ಗಳಿಂದ ಸೋಲು ಕಂಡಿದೆ, ಈ ಮೂಳಕ ಏಷ್ಯಾಕಪ್ ಪಂದ್ಯಾವಳಿಯಲ್ಲಿ ಸೋಲಿನೊಂದಿಗೆ ಅಭಿಯಾನ ಆರಂಭಿಸಿದೆ.

ದುಬೈ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಪಾಕಿಸ್ತಾನ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಆರಂಭಿಕ ಆಟಗಾರ ಶಾಹೈದ್ ಖಾನ್ ಅವರ ಅಮೋಘ ಶತಕದ ನೆರವಿನಿಂದ ಬೃಹತ್ ಮೊತ್ತ ಕಲೆ ಹಾಕಿತು. ಶಾಹೈದ್ ಖಾನ್ 147 ಎಸೆತಗಳಲ್ಲಿ 5 ಬೌಂಡರಿ 10 ಸಿಕ್ಸರ್ ಸಹಿತ 159 ರನ್ ಗಳಿಸಿ ಮಿಂಚಿದರು. ಉಸ್ಮಾನ್ ಖಾನ್ 60 ರನ್ ಗಳಿಸಿದರೆ, ಮೊಹಮ್ಮದ್ ರಿಯಾಝುಲ್ಲಾ 27 ರನ್ ಗಳಿಸಿದರು. ಪಾಕಿಸ್ತಾನ 50 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 281 ರನ್ ಗಳಿಸಿತು.

team india lost against pakistan in u19 aisa cup

ಭಾರತ ಪರ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದ ಸಮರ್ಥ್ ನಾಗರಾಜ್ 3 ವಿಕೆಟ್ ಪಡೆದರು. ಆಯುಷ್ ಮಾತ್ರೆ 2 ವಿಕೆಟ್ ಪಡೆದರೆ, ಯುಧೈತ ಗುಹ ಮತ್ತು ಕಿರಣ್ ಚೋರ್ಮಲೆ ತಲಾ ಒಂದು ವಿಕೆಟ್ ಪಡೆದರು.

ಬ್ಯಾಟಿಂಗ್‌ನಲ್ಲಿ ವೈಫಲ್ಯ

282 ರನ್‌ಗಳ ಸವಾಲಿನ ಮೊತ್ತ ಬೆನ್ನತ್ತಿದ ಭಾರತಕ್ಕೆ ಸರಿಯಾದ ಆರಂಭ ಸಿಗಲಿಲ್ಲ. ಐಪಿಎಲ್‌ನಲ್ಲಿ 1.1 ಕೋಟಿ ರೂಪಾಯಿಗೆ ಹರಾಜಾಗುವ ಮೂಲಕ ಗಮನ ಸೆಳೆದಿದ್ದ ವೈಭವ್ ಸೂರ್ಯವಂಶಿ 9 ಎಸೆತಗಳಲ್ಲಿ 1 ರನ್ ಗಳಿಸಿ ಔಟಾಗುವ ಮೂಲಕ ನಿರಾಸೆ ಮೂಡಿಸಿದರು. ಆಯುಶ್ ಮಾತ್ರೆ 14 ಎಸೆತಗಳಲ್ಲಿ 20 ರನ್ ಗಳಿಸಿದರು. ಆಂಡ್ರೆ ಸಿದ್ಧಾರ್ಥ್ 15 ರನ್, ನಾಯಕ ಮೊಹಮ್ಮದ್ ಅಮಾನ್ 16 ರನ್ ಗಳಿಸಿದರು.

ನಿಖಿಲ್ ಕುಮಾರ್ 67 ರನ್ ಗಳಿಸುವ ಮೂಲಕ ಭಾರತ ತಂಡಕ್ಕೆ ಆಸರೆಯಾದರೂ ಗೆಲುವಿನ ದಡ ತಲುಪಿಸಲು ಆಗಲಿಲ್ಲ. ಕಿರಣ್ ಚೋಮಲೆ 20 ರನ್, ಹರ್ವಂಶ್ ಸಿಂಗ್ 26 ರನ್, ಮೊಹಮ್ಮದ್ ಎನ್ನಾನ್ 30 ರನ್ ಗಳಿಸಿದರು. 47.1 ಓವರ್ ಗಳಲ್ಲಿ 238 ರನ್ ಗಳಿಸುವಷ್ಟರಲ್ಲಿ ಆಲೌಟ್ ಆಗುವ ಮೂಲಕ ಭಾರತ ತಂಡ ಸೋಲಿನ ನಿರಾಸೆ ಅನುಭವಿಸಿತು.

ಮೊದಲ ಪಂದ್ಯದಲ್ಲೇ ಪಾಕಿಸ್ತಾನದ ವಿರುದ್ಧ ಸೋತ ಭಾರತ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಡಿಸೆಂಬರ್ 2ರಂದು ನಡೆಯುವ ಪಂದ್ಯದಲ್ಲಿ ಜಪಾನ್ ವಿರುದ್ದ ಸೆಣೆಸಲಿದ್ದು ಬಳಿಕ ಡಿಸೆಂಬರ್ 4ರಂದು ಯುಎಇ ವಿರುದ್ಧ ಸೆಣೆಸಿದೆ. ಮುಂದಿನ ಎರಡೂ ಪಂದ್ಯಗಳನ್ನು ಗೆದ್ದರೆ ಭಾರತ ಸೆಮಿಫೈನಲ್‌ ಪ್ರವೇಶಿಸಲಿದ್ದು, ಮುಂದಿನ ಪಂದ್ಯಗಳತ್ತ ಭಾರತ ಯುವ ತಂಡ ಗಮನಹರಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+