CWG ತಂಡದಿಂದ ಹೊರಕ್ಕೆ, ಕೋರ್ಟ್ ಮೆಟ್ಟಿಲೇರಿದ ಅರ್ಚನಾ ಕಾಮತ್
ಬೆಂಗಳೂರು, ಜೂನ್ 17: ಕಾಮನ್ವೆಲ್ತ್ ಗೇಮ್ಸ್ 2022 ಗಾಗಿ ವಿವಿಧ ಕ್ರೀಡೆಗಳಿಗಾಗಿ ತಂಡಗಳನ್ನು ಪ್ರಕಟಿಸಲಾಗುತ್ತಿದೆ. ಟೇಬಲ್ ಟೆನಿಸ್ ತಂಡದಿಂದ ಕರ್ನಾಟಕ ಮೂಲದ ಆಟಗಾರ್ತಿ ಅರ್ಚನಾ ಕಾಮತ್ ರನ್ನು ಹೊರಗಿಡಲಾಗಿದೆ. ಈ ಬಗ್ಗೆ ಪ್ರಶ್ನಿಸಿ ಅರ್ಚನಾ ಕಾಮತ್ ಅವರು ಕರ್ನಾಟಕ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದಾರೆ.
ಭಾರತ ಸರ್ಕಾರ, ಟೇಬಲ್ ಟೆನಿಸ್ ಫೆಡರೇಶನ್ ಆಫ್ ಇಂಡಿಯಾ (ಟಿಟಿಎಫ್‌ಐ), ಭಾರತೀಯ ಕ್ರೀಡಾ ಪ್ರಾಧಿಕಾರ (ಎಸ್‌ಎಐ) ಮತ್ತು ಮಹಿಳಾ ತಂಡದ ಇತರ ಸದಸ್ಯರ ವಿರುದ್ಧ ಟೇಬಲ್ ಟೆನಿಸ್ ಆಟಗಾರ್ತಿ ಅರ್ಚನಾ ಕಾಮತ್ ರಿಟ್ ಅರ್ಜಿ ಸಲ್ಲಿಸಿದ್ದಾರೆ.
ಇದಕ್ಕೂ ಮುನ್ನ ಆಟಗಾರ್ತಿ ದಿಯಾ ಚಿತಾಲೆ ಮಹಿಳಾ ಸಿಡಬ್ಲ್ಯೂಜಿ ತಂಡದಿಂದ ಹೊರಗಿಟ್ಟಿದ್ದನ್ನು ಪ್ರಶ್ನಿಸಿ ದೆಹಲಿ ಹೈಕೋರ್ಟ್‌ಗೆ ಮೊರೆ ಹೋಗಿದ್ದರು. ನಂತರ ಅವರನ್ನು ಆಡಳಿತಾಧಿಕಾರಿಗಳ ಸಮಿತಿ (ಸಿಒಎ) ತಂಡಕ್ಕೆ ಸೇರಿಸಿದೆ.
ಭಾರತೀಯ ಕ್ರೀಡಾ ಪ್ರಾಧಿಕಾರದ ಅನುಮತಿಗೆ ಒಳಪಟ್ಟಿರುವ ಮಹಿಳಾ ತಂಡದೊಂದಿಗೆ ಸಿಒಎ ಈ ಹಿಂದೆ ಬೆಂಗಳೂರಿನಲ್ಲಿ ಎಂಟು ಸದಸ್ಯರ ತಂಡವನ್ನು ಪ್ರಕಟಿಸಿತ್ತು. ಸಿಒಎ ಪ್ಯಾಡ್ಲರ್ ಚಿತಾಲೆ ಅವರನ್ನು ಮಾಣಿಕಾ ಬಾತ್ರಾ ಅವರೊಂದಿಗೆ ಮಹಿಳಾ ಡಬಲ್‌ನಲ್ಲಿ ಆಡಿಸುತ್ತಿರುವುದಾಗಿ ಸಮಿತಿ ಹೇಳಿತ್ತು. ಆದರೆ, ಇದಕ್ಕೂ ಮೊದಲು ಅರ್ಚನಾ ಕಾಮತ್ ಅವರೊಂದಿಗೆ ಡಬಲ್ಸ್ ಎಂದು ವರದಿ ಮಾಡಲಾಗಿತ್ತು.

ಮೂಲ ಪಟ್ಟಿಯ ಪ್ರಕಾರ, ಆಯ್ಕೆ ಸಮಿತಿಯು ಮಣಿಕಾ ಬಾತ್ರಾ, ಅರ್ಚನಾ, ಶ್ರೀಜಾ ಅಕುಲಾ ಮತ್ತು ರೀತ್ ರಿಶ್ಯಾ ಅವರನ್ನು ತಂಡದಲ್ಲಿ ಚಿತಾಲೆ ಅವರನ್ನು ಸ್ಟ್ಯಾಂಡ್‌ಬೈ ಆಗಿ ಆಯ್ಕೆ ಮಾಡಿದೆ. ಪುರುಷರ ತಂಡದಲ್ಲಿ ಅನುಭವಿ ಶರತ್ ಕಮಲ್, ಜಿ ಸತ್ಯನ್, ಹರ್ಮೀತ್ ದೇಸಾಯಿ ಮತ್ತು ಸನಿಲ್ ಶೆಟ್ಟಿ ಮನುಷ್ ಜೊತೆಗೆ ಮೀಸಲು ಆಟಗಾರರಾಗಿದ್ದರು.
ಆರಂಭದಲ್ಲಿ ತಂಡದಲ್ಲಿದ್ದ ಅರ್ಚನಾ ಕಾಮತ್ ಅವರನ್ನು ಸಿಒಎ ಹಠಾತ್ತನೆ ಕೈಬಿಡಲಾಯಿತು ಮತ್ತು ಅವರ ಸ್ಥಾನಕ್ಕೆ ದಿಯಾ ಚಿತಾಲೆ ಅವರನ್ನು ಕರೆತರಲಾಯಿತು. ತಂಡದಿಂದ ಹೊರಹಾಕಿದ್ದರಿಂದ ಆಘಾತಕ್ಕೊಳಗಾದ ಅರ್ಚನಾ ಕಾಮತ್ ಕರ್ನಾಟಕ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದಾರೆ. ಜೂನ್ 22 ರಂದು ನಿಗದಿಯಾಗಿರುವ ಮುಂದಿನ ವಿಚಾರಣೆಗೆ ಹಾಜರಾಗುವಂತೆ ಎಲ್ಲಾ ಕಕ್ಷಿದಾರರಿಗೆ ಹೈಕೋರ್ಟ್ ಸೂಚನೆ ನೀಡಿದೆ.
ನಮ್ಮೂರ ಪ್ರತಿಭೆ: ಭಾರತದ ಉದಯೋನ್ಮುಖ ಟೇಬಲ್ ಟೆನಿಸ್ ತಾರೆ ಅರ್ಚನಾ ಕಾಮತ್
ಅರ್ಚನಾ ಕಾಮತ್ ಆಕ್ರಮಣಾಕಾರಿ ಶೈಲಿಯ ಆಟಗಾರ್ತಿಯಾಗಿದ್ದು, ಎತ್ತರದಲ್ಲಿ ಚಿಕ್ಕವಳಾದರೂ ಆಕ್ರಮಣಶೀಲತೆಯಲ್ಲಿ ಹೆಚ್ಚಿದ್ದಾರೆ. 2014 ರಿಂದ ಕೋಚ್ ಪೀಟರ್ ಎಂಗೆಲ್ ಅವರ ಅಡಿಯಲ್ಲಿ ತರಬೇತಿ ಪಡೆಯುತ್ತಿದ್ದಾರೆ ಮತ್ತು TSV 1909 ಲ್ಯಾಂಗ್‌ಸ್ಟಾಡ್‌ಗಾಗಿ ಆಡಿದ್ದಾರೆ. ಇದರಿಂದ ಆಕೆಯ ಸ್ಪರ್ಧೆಯ ಗುಣಮಟ್ಟವು ತುಂಬಾ ಹೆಚ್ಚಾಗಿದೆ.
ಬೆಂಗಳೂರಿನ ಪಡುಕೋಣೆ-ದ್ರಾವಿಡ್ ಸೆಂಟರ್ ಫಾರ್ ಸ್ಪೋರ್ಟ್ಸ್ ಎಕ್ಸಲೆನ್ಸ್‌ನಲ್ಲಿ ಬೋನಾ ಥಾಮಸ್ ಜಾನ್ ಮತ್ತು ಸಗಾಯರಾಜ್ ಅವರ ಅಡಿಯಲ್ಲಿ ತರಬೇತಿ ಪಡೆಯುತ್ತಿದ್ದಾರೆ.

ಭಾರತದ ಉದಯೋನ್ಮುಖ ಟೇಬಲ್ ಟೆನಿಸ್ ತಾರೆ ಅರ್ಚನಾ ಕಾಮತ್ ಅವರು 2021ರಲ್ಲಿ ತಮ್ಮ ಮೊದಲ ದೊಡ್ಡ ಪ್ರವಾಸ ಪ್ರಶಸ್ತಿಯನ್ನು ಗೆದ್ದರು. ಅವರು ಮತ್ತು ಮಣಿಕಾ ಬಾತ್ರಾ ಲಾಸ್ಕೋದಲ್ಲಿ ನಡೆದ ವಿಶ್ವ ಟೇಬಲ್ ಟೆನಿಸ್ ಸ್ಪರ್ಧಿ ಮಹಿಳೆಯರ ಡಬಲ್ಸ್ ಕಿರೀಟವನ್ನು ಗೆದ್ದರು. ಭಾರತದ ಜೋಡಿಯು ಫೈನಲ್‌ನಲ್ಲಿ ಪೋರ್ಟೊ ರಿಕನ್ ಸಹೋದರಿಯರಾದ ಆಡ್ರಿಯಾನಾ ಮತ್ತು ಮೆಲಾನಿ ಡಯಾಜ್ ಅವರನ್ನು 11-3, 11-8, 12-10 ಸೆಟ್‌ಗಳಿಂದ ಸೋಲಿಸಿದರು.












Click it and Unblock the Notifications