ರೊಹಿತ್ ಬಗ್ಗೆ ಕಪಿಲ್ ದೇವ ಹೇಳಿಕೆ "ವಿರಾಟ್ ಅವರಂತೆ ಆಡುವುದಿಲ್ಲ"
ಭಾರತ ಹಾಗೂ ಇಂಗ್ಲೆಂಡ್ ತಂಡಗಳು ಟಿ20 ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಇಂದು ಗಯಾನದಲ್ಲಿ ಮುಖಾಮುಖಿ ಆಗಲಿವೆ. ಈ ಪಂದ್ಯದ ಮೇಲೆ ವಿಶ್ವದ ಚಿತ್ತ ನೆಟ್ಟಿದೆ. 2022ರ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಸೋಲಿನ ಸೇಡನ್ನು ತೀರಿಸಿಕೊಳ್ಳುವ ವಿಶ್ವಾಸದಲ್ಲಿ ರೋಹಿತ್ ಪಡೆ ಸನ್ನದ್ಧವಾಗಿದೆ.
ಈ ಹೈವೋಲ್ಟೇಜ್ ಪಂದ್ಯಕ್ಕೂ ಮುನ್ನ 1983 ರ ವಿಶ್ವಕಪ್ ವಿಜೇತ ನಾಯಕ ಕಪಿಲ್ ದೇವ್ ಹೇಳಿಕೆ ನೀಡಿದ್ದಾರೆ. ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರ ನಾಯಕತ್ವ ಶೈಲಿಗಳ ನಡುವಿನ ವ್ಯತ್ಯಾಸಗಳನ್ನು ಸೂಚಿಸಿದ್ದಾರೆ. ಇದಾದ ನಂತರ ಕಪಿಲ್ ದೇವ್ ಅವರ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.

ಖಾಸಗಿ ಕಾರ್ಯಕ್ರಮದಲ್ಲಿ ಮಾತನಾಡಿರುವ ವಿಶ್ವ ವಿಜೇತ ನಾಯಕ ಕಪಿಲ್ ದೇವ್ " ರೋಹಿತ್ ವಿರಾಟ್‌ರಂತೆ ಆಡುವುದಿಲ್ಲ. ಅವರಿಗೆ ತನ್ನ ಮಿತಿಗಳ ಬಗ್ಗೆ ತಿಳಿದಿದೆ. ಮೈದಾನದಲ್ಲಿ ಜಿಗಿಯುವುದಿಲ್ಲ ಎಂದು ತಿಳಿಸಿದ್ದಾರೆ. ಇನ್ನು ಮುಂದುವರೆದು ಮಾತನಾಡಿದ ಅವರು ರೋಹಿತ್ ಅವರನ್ನು ವಿರಾಟ್ ಜೊತೆ ಹೋಲಿಸಿದ್ದಾರೆ. ರೋಹಿತ್ ತಮ್ಮ ಆಕ್ರಮಣವನ್ನು ಮೈದಾನದಲ್ಲಿ ಬಹಿರಂಗ ಪಡಿಸುವುದಿಲ್ಲ ಎಂದು ತಿಳಿಸಿದ್ದಾರೆ.
ಅನೇಕ ದೊಡ್ಡ ಆಟಗಾರರು ಟೀಮ್ ಇಂಡಿಯಾಕ್ಕೆ ಬರುತ್ತಾರೆ, ಅವರು ತಮ್ಮ ವೃತ್ತಿಜೀವನದ ಬಗ್ಗೆ ಕಾಳಜಿ ವಹಿಸುತ್ತಾರೆ. ಅವರು ಅದೇ ದೃಷ್ಟಿಕೋನದಿಂದ ನಾಯಕತ್ವವನ್ನೂ ಮಾಡುತ್ತಾರೆ. ಆದ್ದರಿಂದ ರೋಹಿತ್ ಈ ವಿಷಯದಲ್ಲಿ ಎಲ್ಲರಿಗಿಂತಲೂ ಭಿನ್ನರಾಗಿದ್ದಾರೆ ಏಕೆಂದರೆ ಅವರು ಇಡೀ ತಂಡವನ್ನು ಸಂತೋಷವಾಗಿರಿಸುತ್ತಾರೆ. ಆರಂಭಿಕ ಬ್ಯಾಟ್ಸ್‌ಮನ್ ಇತರ ಕೆಲವು ಶ್ರೇಷ್ಠ ಆಟಗಾರರಿಗಿಂತ ಭಿನ್ನರಾಗಿದ್ದರು ಎಂದಿದ್ದಾರೆ.

ರೋಹಿತ್ ಶರ್ಮಾ ಸಾಧನೆ
ರೋಹಿತ್ ಶರ್ಮಾ ಟಿ20 ವಿಶ್ವಕಪ್‌ನಲ್ಲಿ ನಾಯಕರಾಗಿ ಎಲ್ಲರ ಚಿತ್ತ ಕದ್ದಿಲ್ಲ. ಬದಲಿಗೆ ಪ್ರಸಕ್ತ ವಿಶ್ವಕಪ್‌ನಲ್ಲಿ ಹಿಟ್ ಮ್ಯಾನ್ ಆಡಿದ ಧಾಟಿಗೂ ಅಭಿಮಾನಿಗಳು ಫುಲ್ ಮಾರ್ಕ್ಸ್ ನೀಡಿದ್ದಾರೆ.
ರೋಹಿತ್ 2024 ರ ಟಿ 20 ವಿಶ್ವಕಪ್‌ನಲ್ಲಿ ಇದುವರೆಗೆ ಭಾರತದ ಪರ ಅತಿ ಹೆಚ್ಚು ರನ್ ಗಳಿಸಿದ್ದಾರೆ. ರೋಹಿತ್ ಶರ್ಮಾ ಸೆಮಿಫೈನಲ್ ಪಂದ್ಯಕ್ಕೂ ಮುನ್ನ 6 ಪಂದ್ಯಗಳನ್ನು ಆಡಿದ್ದಾರೆ. ಈ 6 ಪಂದ್ಯಗಳಲ್ಲಿ ಅವರು 159.16 ಸ್ಟ್ರೈಕ್ ರೇಟ್‌ನಲ್ಲಿ 191 ರನ್ ಗಳಿಸಿದ್ದಾರೆ. T20 ವಿಶ್ವಕಪ್ 2024 ರ 1ಸೂಪರ್ 8 ಪಂದ್ಯದಲ್ಲಿ, ರೋಹಿತ್ ಶರ್ಮಾ 41 ಎಸೆತಗಳಲ್ಲಿ 224.39 ಸ್ಟ್ರೈಕ್ ರೇಟ್‌ನಲ್ಲಿ 92 ರನ್ ಗಳಿಸಿದರು. ಈ ಪ್ರದರ್ಶನದ ಫಲವಾಗಿ ರೋಹಿತ್ ಶರ್ಮಾ ಅವರಿಗೆ ಪಂದ್ಯ ಶ್ರೇಷ್ಠ ಗರಿ ಸಹ ಸಂದಿತ್ತು.












Click it and Unblock the Notifications