ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

T20 World Cup Prediction- ಮೊಯೀನ್ ಅಲಿ ಪ್ರಕಾರ 2020 ಟಿ20 ವಿಶ್ವಕಪ್ ಗೆಲ್ಲೋದು ಯಾರು?

|
Google Oneindia Kannada News

ಲಂಡನ್, ಅ. 3: ಆಸ್ಟ್ರೇಲಿಯಾದಲ್ಲಿ ಟಿ20 ವಿಶ್ವಕಪ್ ಆರಂಭವಾಗಲು ದಿನಗಣನೆ ಇದೆ. ಯಾರು ಟ್ರೋಫಿ ಎತ್ತಿಹಿಡಿಯುತ್ತಾರೆ ಎಂದು ಚರ್ಚೆಗಳ ಬಹಳ ನಡೆಯುತ್ತಿರುವುದುಂಟು. ಭಾರತ, ಆಸ್ಟ್ರೇಲಿಯಾ, ಇಂಗ್ಲೆಂಡ್, ಶ್ರೀಲಂಕಾ, ಪಾಕಿಸ್ತಾನ, ಸೌತ್ ಆಫ್ರಿಕಾ ತಂಡಗಳು ಒಳ್ಳೆಯ ಫಾರ್ಮ್‌ನಲ್ಲಿವೆ. ಆದರೆ, ಅಂತಿಮವಾಗಿ ಯಾರು ಚಾಂಪಿಯನ್ ಆಗುತ್ತಾರೆ ಎಂಬುದು ಕುತೂಹಲ.

ಇಂಗ್ಲೆಂಡ್‌ನ ಸ್ಟ್ಯಾಂಡ್-ಇನ್ ಕ್ಯಾಪ್ಟನ್ ಮೊಯೀನ್ ಅಲಿ ಪ್ರಕಾರ ಈ ಬಾರಿಯ ವಿಶ್ವಕಪ್ ಗೆಲ್ಲುವ ಫೇವರಿಟ್ ಟೀಮ್‌ಗಳೆಂದರೆ ಭಾರತ ಮತ್ತು ಆಸ್ಟ್ರೇಲಿಯಾವಂತೆ.

Ind vs SA 2nd T20I : ಸ್ಟ್ರೈಕ್ ತೆಗೆದುಕೊಳ್ಳುವಂತೆ ಕೇಳಿದ ದಿನೇಶ್ ಕಾರ್ತಿಕ್‌ಗೆ ಕೊಹ್ಲಿ ಕೊಟ್ಟ ಉತ್ತರ ಇದುInd vs SA 2nd T20I : ಸ್ಟ್ರೈಕ್ ತೆಗೆದುಕೊಳ್ಳುವಂತೆ ಕೇಳಿದ ದಿನೇಶ್ ಕಾರ್ತಿಕ್‌ಗೆ ಕೊಹ್ಲಿ ಕೊಟ್ಟ ಉತ್ತರ ಇದು

ಇಂಗ್ಲೆಂಡ್ ತಂಡ ಭರ್ಜರಿ ಫಾರ್ಮ್‌ನಲ್ಲಿದ್ದರೂ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ ಹೆಸರನ್ನು ಮೊಯೀನ್ ಅಲಿ ಹೇಳಿದ್ದು ಯಾಕೆ? ಇತ್ತೀಚೆಗೆ ಪಾಕಿಸ್ತಾನ ವಿರುದ್ಧ ನಡೆದ ಸರಣಿಯನ್ನು ಇಂಗ್ಲೆಂಡ್ 4-3ರಿಂದ ಗೆದ್ದು ತನ್ನ ಸಾಮರ್ಥ್ಯ ತೋರ್ಪಡಿಸಿತ್ತು. ಆದರೂ ಮೊಯೀನ್ ಅಲಿ ಪ್ರಕಾರ ಇಂಗ್ಲೆಂಡ್ ಯಾಕಲ್ಲ ಫೇವರಿಟ್?

T20 World Cup 2022: Moeen Ali Names His Two Favourites To Win Trophy

ಟಿ20 ವಿಶ್ವಕಪ್‌ನಲ್ಲಿ ಎಲ್ಲಾ ತಂಡಗಳು ಇಂಗ್ಲೆಂಡ್‌ ಎದುರು ಆಡಲು ಹೆದರುತ್ತವೆಯಾದರೂ ಟ್ರೋಫಿ ಎತ್ತಿಹಿಡಿಯಲು ಭಾರತ ಮತ್ತು ಆಸ್ಟ್ರೇಲಿಯಾವೇ ನೆಚ್ಚಿನ ತಂಡಗಳು ಎಂಬುದು ಮೊಯೀನ್ ಅಲಿ ಅನಿಸಿಕೆ.

India squad for SA ODI series: ಶಿಖರ್ ಧವನ್ ಟೀಮ್ ಇಂಡಿಯಾ ನಾಯಕ; ಓಡಿಐ ತಂಡಕ್ಕೆ ಮುಕೇಶ್, ಪಾಟಿದಾರ್ ಆಯ್ಕೆIndia squad for SA ODI series: ಶಿಖರ್ ಧವನ್ ಟೀಮ್ ಇಂಡಿಯಾ ನಾಯಕ; ಓಡಿಐ ತಂಡಕ್ಕೆ ಮುಕೇಶ್, ಪಾಟಿದಾರ್ ಆಯ್ಕೆ

"ಈ ಸರಣಿಯನ್ನು ಗೆದ್ದು ಆಸ್ಟ್ರೇಲಿಯಾಗೆ ಒಳ್ಳೆಯ ಸ್ಥಿತಿಯಲ್ಲಿ ಹೋಗುತ್ತಿದ್ದೇವೆ. ಆದರೂ ಕೂಡ ಪ್ರಾಮಾಣಿಕವಾಗಿ ಹೇಳಬೇಕೆಂದರೆ ವಿಶ್ವಕಪ್ ಗೆಲ್ಲಲು ನಾವು ಫೇವರಿಟ್ ಅಂತ ಅನಿಸುವುದಿಲ್ಲ. ನಮ್ಮ ತಂಡ ಅಪಾಯಕಾರಿ ಹೌದು. ನಮ್ಮನ್ನು ಎದುರಿಸಲು ಬೇರೆ ತಂಡಗಳು ಭಯಪಡುತ್ತವೆ. ಇಷ್ಟಾದರೂ ಈ ವಿಶ್ವಕಪ್‌ನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳೇ ಎರಡು ಫೇವರಿಟ್ಸ್" ಎಂದು ಮೊಯೀನ್ ಅಲಿ ಹೇಳಿದ್ದಾರೆ.

ಪಾಕಿಸ್ತಾನ ವಿರುದ್ಧ ರೋಚಕ ಗೆಲುವು

ಪಾಕಿಸ್ತಾನ ಮತ್ತು ಇಂಗ್ಲೆಂಡ್ ಮಧ್ಯೆ ನಡೆದ 7 ಟಿ20 ಪಂದ್ಯಗಳ ದೊಡ್ಡ ಸರಣಿ ಎಲ್ಲರ ಗಮನ ಸೆಳೆದಿತ್ತು. 17 ವರ್ಷಗಳ ಬಳಿಕ ಪಾಕಿಸ್ತಾನಕ್ಕೆ ಇಂಗ್ಲೆಂಡ್ ಕ್ರಿಕೆಟ್ ತಂಡ ಮಾಡಿದ ಮೊದಲ ಪ್ರವಾಸವೂ ಅದಾಗಿತ್ತು. 7 ಪಂದ್ಯಗಳ ಸರಣಿಯನ್ನು ಇಂಗ್ಲೆಂಡ್ 4-3ರಿಂದ ಗೆದ್ದಿತು.

T20 World Cup 2022: Moeen Ali Names His Two Favourites To Win Trophy

ಆರು ಪಂದ್ಯಗಳ ನಂತರ ಸರಣಿ 3-3ರಿಂದ ಸಮವಾಗಿತ್ತು. ಲಾಹೋರ್‌ನಲ್ಲಿ ನಡೆದ ಕೊನೆಯ ಪಂದ್ಯದಲ್ಲಿ ಇಂಗ್ಲೆಂಡ್ 67 ರನ್‌ಗಳಿಂದ ಗೆದ್ದಿತು.

ಇದೀಗ ಟಿ20 ವಿಶ್ವಕಪ್‌ಗೆ ಮುನ್ನ ಇಂಗ್ಲೆಂಡ್ ತಂಡ ಆಸ್ಟ್ರೇಲಿಯಾ ಎದುರು ಟಿ20 ಸರಣಿ ಆಡಲಿದೆ. ಈ ಸರಣಿಯಲ್ಲಿ 3 ಪಂದ್ಯಗಳು ನಡೆಯಲಿದ್ದು, ಎರಡೂ ತಂಡಗಳಿಗೆ ಒಳ್ಳೆಯ ಅಭ್ಯಾಸವೂ ಆಗಲಿದೆ.

ಟಿ20 ವಿಶ್ವಕಪ್

ಅಕ್ಟೋಬರ್ 16ರಿಂದ ಈ ಬಾರಿಯ ಟಿ20 ವಿಶ್ವಕಪ್ ನಡೆಯಲಿದೆ. ಒಟ್ಟು 16 ತಂಡಗಳು ಪಾಲ್ಗೊಳ್ಳುತ್ತಿವೆ. ಎರಡು ಹಂತದಲ್ಲಿ ಪಂದ್ಯಾವಳಿ ನಡೆಯುತ್ತದೆ. ಮೊದಲ ಹಂತದಲ್ಲಿ 8 ತಂಡಗಳು ಎರಡು ಗುಂಪುಗಳಲ್ಲಿ ಆಡಲಿದ್ದು, ಪ್ರತೀ ಗುಂಪಿನಿಂದ ಎರಡು ತಂಡಗಳು ಎರಡನೇ ಹಂತರವಾದ ಸೂಪರ್-12 ಹಂತಕ್ಕೆ ತೇರ್ಗಡೆಯಾಗಲಿವೆ.

ಸೂಪರ್-12 ಹಂತದಲ್ಲಿ 12 ತಂಡಗಳು ಇರಲಿವೆ. ಇಲ್ಲಿಯೂ ಆರು ತಂಡಗಳ ಎರಡು ಗುಂಪುಗಳಾಗಿ ವಿಭಾಗಿಸಲಾಗಿದೆ. ಒಟ್ಟು 8 ತಂಡಗಳು ಆಟೊಮ್ಯಾಟಿಕ್ ಆಗಿ ಕ್ವಾಲಿಫೈ ಆಗಿವೆ. ಮೊದಲ ಹಂತದಿಂದ 4 ತಂಡಗಳು ಬಂದು ಸೇರಿ ಒಟ್ಟು 12 ತಂಡಗಳಾಗುತ್ತವೆ.

ಭಾರತ ಎರಡನೇ ಗುಂಪಿನಲ್ಲಿದೆ. ಭಾರತದ ಜೊತೆ ಪಾಕಿಸ್ತಾನ, ಸೌತ್ ಆಫ್ರಿಕಾ, ಮತ್ತು ಬಾಂಗ್ಲಾದೇಶ ಹಾಗೂ ಮೊದಲ ಹಂತದಿಂದ ಬರುವ ಇನ್ನೆರಡು ತಂಡಗಳಿವೆ. ಭಾರತಕ್ಕೆ ಮೊದಲ ಎದುರಾಳಿ ಪಾಕಿಸ್ತಾನವೇ ಇದೆ. ಕಳೆದ ವರ್ಷದ ಟಿ20 ವಿಶ್ವಕಪ್‌ನಲ್ಲೂ ಭಾರತ ಮತ್ತು ಪಾಕಿಸ್ತಾನ ಮುಖಾಮುಖಿಯಾಗಿದ್ದವು. ಭಾರತ ಹೀನಾಯವಾಗಿ ಸೋತ ಪರಿಣಾಮ ಮುಂದಿನ ಹಂತಕ್ಕೆ ಏರಲಾಗಲಿಲ್ಲ. ಇನ್ನೊಂದೆಡೆ ಪಾಕಿಸ್ತಾನ ಸೆಮಿಫೈನಲ್‌ವರೆಗೂ ಹೋಗಿ ಅಲ್ಲಿಂದ ನಿರ್ಗಮಿಸಿತು.

ಸೂಪರ್-12 ಹಂತದ ಮೊದಲ ಗುಂಪಿನಲ್ಲಿ ಆಸ್ಟ್ರೇಲಿಯಾ, ಇಂಗ್ಲೆಂಡ್, ನ್ಯೂಜಿಲೆಂಡ್, ಅಫ್ಘಾನಿಸ್ತಾನ ಹಾಗು ಇನ್ನೆರಡು ತಂಡಗಳಿವೆ.

ಕಳೆದ ಬಾರಿಯ ಟಿ20 ವಿಶ್ವಕಪ್ ಅನ್ನು ಆಸ್ಟ್ರೇಲಿಯಾ ಗೆದ್ದಿತ್ತು. ಯುಎಇಯಲ್ಲಿ ನಡೆದ ಆ ವಿಶ್ವಕಪ್‌ನ ಫೈನಲ್‌ನಲ್ಲಿ ನ್ಯೂಜಿಲೆಂಡ್ ಅನ್ನು ಸೋಲಿಸಿ ಕಾಂಗರೂಗಳ ಪಡೆ ಪ್ರಶಸ್ತಿ ಎತ್ತಿಹಿಡಿದಿತ್ತು. ಈ ಬಾರಿ ತವರಿನಲ್ಲೇ ಪಂದ್ಯಾವಳಿ ನಡೆಯುತ್ತಿರುವುದರಿಂದ ಆಸ್ಟ್ರೇಲಿಯಾ ಸಹಜವಾಗಿಯೇ ಫೇವರಿಟ್ ಎನಿಸಿದೆ.

(ಒನ್ಇಂಡಿಯಾ ಸುದ್ದಿ)

English summary
England's stand-in captain Moeen Ali has named India and Australia as 2 favourites to win T20 World Cup, despite his team is in roaring form.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X